Human Rights Day 2021: ಡಿಸೆಂಬರ್ 10 ಮಾನವ ಹಕ್ಕುಗಳ ದಿನ, 2021ರ ಥೀಮ್ ಅಸಮಾನತೆಯ ನಿವಾರಣೆ

ಭೂಮಿಯ ಮೇಲಿನ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಆಹಾರ, ಉಡುಪು ಹಾಗೂ ವಸತಿ ಇವು ಮೂರು ಮನುಷ್ಯನ ಮೂಲಭೂತ ಹಕ್ಕುಗಳು.ಈ ಮೂರನ್ನು ಹೊರತು ಪಡಿಸಿ, ಮನುಷ್ಯನ ಜೀವನ ಸಾಧ್ಯವೇ ಇಲ್ಲ. ಹಾಗಾಗಿ ಈ ಮೂಲಭೂತ ಸೌಕರ್ಯಗಳನ್ನು ಪಡೆಯುವುದು ಪ್ರತಿಯೊಂದು ಪ್ರಜೆಯ ಜನ್ಮಸಿದ್ಧ ಹಕ್ಕಾಗಿದೆ. ಆದರೆ ಬಹುತೇಕ ಬಾರಿ ಈ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ. ಹಿಂಸೆ, ದಾಳಿ, ಬದುಕಿನ ಹಕ್ಕುಗಳನ್ನು ಕಸಿದುಕೊಳ್ಳುವುದು ಎಲ್ಲವೂ ಮಾನವ ಹಕ್ಕುಗಳ ಉಲ್ಲಂಘನೆಯೇ ಆಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಹಕ್ಕುಗಳನ್ನು ಪಡೆಯಬೇಕು ಹಾಗೂ ಆತನಿಗೆ ಕನಿಷ್ಟ ಆದ್ಯತೆಗಳು ಸಿಗಬೇಕು ಎಂಬ ಉದ್ದೇಶದಿಂದ ಡಿಸೆಂಬರ್‌ 10 ಅನ್ನು ವಿಶ್ವ ಮಾನವ ಹಕ್ಕುಗಳ ದಿನವನ್ನಾಗಿ (Human Rights Day 2021) ಜಗತ್ತಿನೆಲ್ಲೆಡೆ ಆಚರಿಸಲಾಗುತ್ತದೆ.

ಪ್ರತಿ ವರ್ಷ ಡಿಸೆಂಬರ್ 10 ರಂದು ಮಾನವ ಹಕ್ಕುಗಳ ದಿನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಗುತ್ತದೆ. 1948 ರವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ, ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು ಅಂಗೀಕರಿಸಿದ ದಿನದ ನೆನಪಿಗಾಗಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಇಂದಿಗೆ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯಾಗಿ 73 ವರ್ಷಗಳು ಕಳೆಯಿತು. ಜನರಲ್ ಅಸೆಂಬ್ಲಿ ಈ ಘೋಷಣೆಯನ್ನು ಅಂಗೀಕರಿಸಿದಾಗ, ಇದನ್ನು “ಎಲ್ಲಾ ಜನರು ಮತ್ತು ಎಲ್ಲಾ ರಾಷ್ಟ್ರಗಳ ಅಭಿವೃದ್ಧಿಯ ಮಾನದಂಡ” ಎಂದು ಘೋಷಿಸಲಾಯಿತು.

ಸದ್ಯ ಅಸ್ತಿತ್ವದಲ್ಲಿರುವ ಮಾನವ ಹಕ್ಕುಗಳ ಕೌನ್ಸಿಲ್, 47 ಚುನಾಯಿತ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. ಇದು ಅಸಮಾನತೆ, ನಿಂದನೆಗಳು ಮತ್ತು ತಾರತಮ್ಯವನ್ನು ತಡೆಗಟ್ಟಲು, ಅತ್ಯಂತ ದುರ್ಬಲರನ್ನು ರಕ್ಷಿಸಲು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ಅಪರಾಧಿಗಳನ್ನು ಶಿಕ್ಷಿಸುವ ಜವಾಬ್ದಾರಿ ಮತ್ತು ಅಧಿಕಾರವನ್ನು ಹೊಂದಿದೆ. ಮನುಷ್ಯರೆಲ್ಲರೂ ಸಮಾನರು, ಎಲ್ಲರಿಗೂ ಬದುಕುವ ಹಕ್ಕಿದೆ. ಈ ಹಕ್ಕುಗಳ ಜಾಗೃತಿ ಮೂಡಿಸಲು ಡಿಸೆಂಬರ್ 9ರಂದು ಮಾನವ ಹಕ್ಕುಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಅಮಾನತೆಯ ನಿವಾರಣೆ ಮತ್ತು ಹೆಚ್ಚಳ 2021ರ ಮಾನವ ಹಕ್ಕುಗಳ ದಿನದ ಥೀಮ್‌ ಆಗಿದೆ.

ಈ ವರ್ಷದ ಆಶಯವೇನು?
ವಿಶ್ವ ಸಂಸ್ಥೆಯು ಪ್ರತಿವರ್ಷ, ಮಾನವ ಹಕ್ಕುಗಳ ದಿನಕ್ಕೆ ಒಂದೊಂದು ಘೋಷಣಾ ವಾಕ್ಯವನ್ನು ಸೂಚಿಸುತ್ತದೆ. ಈ ಬಾರಿ ಇದು “ಸಮಾನತೆ, ಅಸಮಾನತೆಗಳನ್ನು ಕಡಿಮೆ ಮಾಡುವುದು, ಮಾನವ ಹಕ್ಕುಗಳನ್ನು ಹೆಚ್ಚಿಸುವುದು” (Equality Reducing inequalities and advancing human rights) ಎಂದಾಗಿದೆ. ಇದು ಯುಡಿಎಚ್‌ಆರ್ ನ ಆರ್ಟಿಕಲ್1 ಕ್ಕೆ ಸಂಬಂಧಿಸಿದೆ. ಆರ್ಟಿಕಲ್1ರ ಪ್ರಕಾರ ಎಲ್ಲ ಮನುಷ್ಯರಿಗೂ ಸಮಾನ ಹಕ್ಕುಗಳಿವೆ.


ಮಾನವ ಹಕ್ಕುಗಳ ಸಂರಕ್ಷಣೆಗೆ ನಾವೇನು ಮಾಡಬಹುದು?
ನಮ್ಮ ಹಕ್ಕುಗಳಿಗಾಗಿ ಮತ್ತು ಇತರರ ಹಕ್ಕುಗಳಿಗಾಗಿ ಭವಿಷ್ಯದಲ್ಲಾದರೂ ಸರಿ ನಾವು ಎದ್ದು ನಿಲ್ಲಬೇಕು. ನಮ್ಮ ದೈನಂದಿನ ಜೀವನದಲ್ಲಿ ನಮ್ಮ ಹಕ್ಕು ಮತ್ತು ಕರ್ತವ್ಯಗಳಿಗಾಗಿ ನಾವು ಎಚ್ಚೆತ್ತುಕೊಳ್ಳಬೇಕು. ನಮ್ಮೆಲ್ಲರನ್ನೂ ರಕ್ಷಿಸುವ ಹಕ್ಕುಗಳನ್ನು ಎತ್ತಿಹಿಡಿಯಲು ನಾವೆಲ್ಲರೂ ಪ್ರಯತ್ನಿಸಬಹುದಾಗಿದೆ.

ಇದನ್ನೂ ಓದಿ: Realme Discounts Offers : ರಿಯಲ್‌ ಮಿ ಸ್ಮಾರ್ಟ್‌ಫೋನ್‌ಗೆ ಭರ್ಜರಿ 5 ಸಾವಿರ ಡಿಸ್ಕೌಂಟ್; ಗ್ರಾಹಕರು ಫುಲ್ ಖುಷ್

ಇದನ್ನೂ ಓದಿಬಿಡಿ: Jobs: ಮನೆಯಲ್ಲೇ ಕುಳಿತು ಇಂಗ್ಲಿಷ್ ಕಲಿಯಿರಿ ಮತ್ತು ಉದ್ಯೋಗ ಪಡೆಯಿರಿ

(Human Rights Day 2021 theme is Equality Reducing inequalities and advancing human rights)

Comments are closed.