ಚಿರು- ಮೇಘನಾ ಸ್ಯಾಂಡಲ್ ವುಡ್ ನ ಮೋಸ್ಟ್ ಸ್ವೀಟೆಸ್ಟ್ ಕಪಲ್ ಅಂತಾನೇ ಕರೆಯಿಸಿಕೊಳ್ಳುತ್ತಿದ್ರು. ಪ್ರೀತಿಸಿ ಮನೆಯವರನ್ನು ಒಪ್ಪಿಸಿ ಮದುವೆಯಾಗಿದ್ದ ದಂಪತಿಯ ದಾಂಪತ್ಯ ಬದುಕೇ ಇದೀಗ ಕ್ರೂರ ವಿಧಿಯಾಟಕ್ಕೆ ಬಲಿಯಾಗಿ ಹೋಗಿದೆ. ಆದ್ರೆ ನಟ ಚಿರಂಜೀವಿ ಸರ್ಜಾರ ಜಾತಕದಲ್ಲಿ ಅಷ್ಟಮ ಕುಜದೋಷವಿತ್ತಾ ? ಆ ದೋಷವೇ ಇಂದು ಚಿರು ಬದುಕಿಗೆ ಅಂತ್ಯ ಹಾಡಿತ್ತಾ..

ಖ್ಯಾತ ನಟ ಶಕ್ತಿಪ್ರಸಾದ್ ವಂಶದ ಕುಡಿಯಾಗಿರೋ ಚಿರಂಜೀವಿ ಸರ್ಜಾ ಕನ್ನಡ ಚಿತ್ರರಂಗದ ಪಾಲಿಗೆ ಅಚ್ಚಳಿಯದ ಹೆಸರು. ತನ್ನ ಮಾವ ಅರ್ಜುನ್ ಸರ್ಜಾ ಹಾಗೂ ಕಿಶೋರ್ ಸರ್ಜಾ ಅವರು ಹಾಕಿಕೊಟ್ಟ ಮಾರ್ಗದಲ್ಲಿಯೇ ಮುನ್ನಡೆದವರು. ಸಹನಿರ್ದೇಶಕರಾಗಿ ಸಿನಿಮಾರಂಗಕ್ಕೆ ಎಂಟ್ರಿಕೊಟ್ಟಿದ್ದ ಚಿರಂಜೀವಿ ಸರ್ಜಾ ಕನ್ನಡದಲ್ಲಿ ಬರೋಬ್ಬರಿ 22 ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು.

ಮಾತ್ರವಲ್ಲ ಸಹೋದರ ಧ್ರುವ ಸರ್ಜಾ ಅವರನ್ನೂ ಸ್ಟಾರ್ ನಟನನ್ನಾಗಿಸುವಲ್ಲಿಯೂ ಚಿರು ಪಾತ್ರ ಮಹತ್ತರವಾದುದು. ಸಿನಿಮಾರಂಗಕ್ಕೆ ಎಂಟ್ರಿಕೊಟ್ಟಿದ್ದ ಚಿರು ಮೇಘನಾ ರಾಜ್ ಅವರ ಪ್ರೀತಿಗೆ ಮನಸೋತಿದ್ರು. ಹಿರಿಯ ನಟ ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯ್ ಅವರ ಮುದ್ದಿನ ಮಗಳಾಗಿರೋ ಮೇಘನಾ ರಾಜ್ ಕೂಡ ಬಹುಭಾಷಾ ನಟಿಯಾಗಿ ಬೆಳೆದು ನಿಂತವರು. ಕನ್ನಡ, ಮಲಯಾಲಂ ಸಿನಿಮಾಗಳಲ್ಲಿ ಪ್ರಖ್ಯಾತಿಯನ್ನೂ ಪಡೆದುಕೊಂಡಿದ್ದಾರೆ.

ಆದರೆ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಪ್ರೀತಿಯನ್ನು ಮದುವೆಯ ಬಂಧನ ಬೆಸೆಯುವಂತೆ ಮಾಡಿದ್ದು ಖ್ಯಾತನಟ ಜಗ್ಗೇಶ್. ಹೌದು, ಚಿರು ಮೇಘನಾ ಪ್ರೀತಿಸುತ್ತಿದ್ದರೂ ಕೂಡ ಮನೆಯಲ್ಲಿ ಹೇಳೋದಕ್ಕೆ ಭಯ, ಅಂಜಿಕೆ. ಇದೇ ಕಾರಣಕ್ಕೆ ಚಿರಂಜೀವಿ ಸರ್ಜಾ ಜಗ್ಗೇಶ್ ಅವರಿಗೆ ಕರೆ ಮಾಡಿ ತನ್ನ ಹಾಗೂ ಮೇಘನಾ ಪ್ರೇಮ ವಿಚಾರವನ್ನ ತಿಳಿಸಿದ್ದರು. ಮದುವೆಯ ಮಾತುಕತೆ ನಡೆಸುವುದಕ್ಕೆ ಸಹಕಾರ ನೀಡುವಂತೆಯೂ ಕೇಳಿಕೊಂಡಿದ್ರು.

ಆದ್ರೆ ಜಗ್ಗೇಶ್ ಅವರು ಮರು ಮಾತನಾಡದೆ, ಮದುವೆ ಮಾತುಕತೆಯನ್ನಾಡೋದಕ್ಕೆ ಒಪ್ಪಿಗೆ ಸೂಚಿಸಿದ್ದರು. ಚಿರಂಜೀವಿ ಸರ್ಜಾ ಅತ್ಯಂತ ಸೂಕ್ಮ ಭಾವ ಜೀವಿ. ಯಾರೊಂದಿಗೂ ದ್ವೇಷ ಕಟ್ಟಿಕೊಂಡವರೇ ಅಲ್ಲಾ, ತಾನೊಬ್ಬ ಸಿನಿಮಾ ನಟ ಅನ್ನುವ ಹಮ್ಮು ಚಿರುಗೆ ಇರಲೇ ಇಲ್ಲಾ. ಚಿರುವಿನ ಒಳ್ಳೇಯತನದಿಂದಲೇ ಜಗ್ಗೇಶ್ ಮೇಘನಾ ತಂದೆ ತಾಯಿಯಲ್ಲಿ ಮಾತನಾಡಿ ಮದುವೆಗೆ ಒಪ್ಪಿಸಿದ್ದರು. ಕೆಲವೇ ಸಮಯಗಳಲ್ಲಿ ಮದುವೆಯೂ ಅದ್ದೂರಿಯಾಗಿಯೇ ನಡೆದು ಹೋಗಿದೆ.

ಮದುವೆಯಾದ ಎರಡು ವರ್ಷಗಳ ಬಳಿಕ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಸಿಹಿ ಸುದ್ದಿಯೊಂದನ್ನು ನೀಡುವ ತವಕದಲ್ಲಿದ್ದರು. ಆದ್ರೆ ವಿಧಿಯಾಟವೇ ಬೇರೆಯಾಗಿತ್ತು. ಚಿರಂಜೀವಿ ಸರ್ಜಾ ಇಂದು ಚಿರನಿದ್ರೆಗೆ ಜಾರಿದ್ದಾರೆ. ಮೇಘನಾ ಬದುಕಲ್ಲೀಗ ಬಿರುಗಾಳಿಯೇ ಬೀಸಿದೆ. ಹೊಟ್ಟೆಯಲ್ಲಿ ಮುದ್ದಿನ ಕುಡಿ, ಎದುರಲ್ಲಿ ಪ್ರೀತಿಸಿ ಮದುವೆಯಾಗಿದ್ದ ಪತಿ ಅಕಾಲಿಕ ಸಾವು. ನಿಜಕ್ಕೂ ಮೇಘನಾ ಅವರನ್ನು ಕಂಡ್ರೆ ಕರಳು ಕಿತ್ತು ಬರುತ್ತೆ.

ಚಿರಂಜೀವಿ ಸರ್ಜಾ ನಿಧನಕ್ಕೆ ಇಂದು ಇಡೀ ಚಿತ್ರರಂಗವೇ ಕಂಬನಿ ಮಿಡಿಯುತ್ತಿದೆ. ಆದ್ರೆ ಚಿರಂಜೀವಿ ಸರ್ಜಾ ಅವರ ಜಾತಕದಲ್ಲಿ ದೋಷವಿತ್ತಾ. ಅಷ್ಟಮ ಕುಜದೋಷ ಚಿರು ಅವರ ಸಾವಿಗೆ ಕಾರಣವಾಯ್ತಾ ಅನ್ನುವ ಅನುಮಾನ ವ್ಯಕ್ತವಾಗುತ್ತಿದೆ. ನಟ ಜಗ್ಗೇಶ್ ಅವರೇ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಚಿರು ಕುರಿತು ಬರಹಗಳನ್ನು ಬರೆದಿದ್ದು, ತಮ್ಮ ಬರಹಗಳಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಮೇಘನಾ ಚಿರು ಮದುವೆ ಪ್ರಸ್ತಾಪದ ಸಂದರ್ಭದಲ್ಲಿಯೇ ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಅವರಲ್ಲಿ ಜಾತಕ ಓದಿಸಿದಾಗ ಅಷ್ಟಮ ಕುಜ ದೋಷವಿದ್ದು, ಪರಿಹಾರ ಪೂಜೆಗಳನ್ನು ಮಾಡಿಸಿಕೊಳ್ಳುವಂತೆ ಸೂಚನೆಯನ್ನು ನೀಡಿದ್ದರಂತೆ. ಇದೀಗ ಚಿರು ಅಕಾಲಿಕ ಮರಣಕ್ಕೂ ಜಾತಕಕ್ಕೂ ಹೊಂದಾಣಿಕೆಯ ಮಾತು ಕೇಳಿಬರುತ್ತಿದೆ.

ಏನೇ ಆದ್ರೂ ಚಿರಂಜೀವಿ ಸರ್ಜಾ ಬದುಕಲ್ಲಿ ವಿಧಿಘೋರ ಅನ್ಯಾಯವನ್ನ ಎಸಗಿದೆ. ಕೇವಲ 39 ವಯಸ್ಸಿನಲ್ಲಿಯೇ ಚಿರು ಬಾರದ ಲೋಕಕ್ಕೆ ಪಯಣಿಸಿಬಿಟ್ಟಿದ್ದಾರೆ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಚಿರು, ಹುಟ್ಟೂರು ಹಾಗೂ ಚಿರುವಿನ ಮನೆಯಲ್ಲೀಗ ಸೂತಕದ ಛಾಯೆ ಆವರಿಸಿದೆ.