ಕೊರೊನಾ ಭೀತಿ : ಸದ್ಯಕ್ಕಿಲ್ಲ ಭಕ್ತರಿಗೆ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲ ಪ್ರವೇಶ

0

ಹೊರನಾಡು : ಲಾಕ್ ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಇಂದಿನಿಂದ ದೇಶದಾದ್ಯಂತ ದೇವಸ್ಥಾನಗಳನ್ನು ತೆರೆಯಲಾಗುತ್ತಿದೆ. ಆದರೆ ರಾಜ್ಯದ ಪವಿತ್ರ ಪುಣ್ಯಕ್ಷೇತ್ರವಾಗಿರುವ ಚಿಕ್ಕಮಗಳೂರು ಜಿಲ್ಲೆಯ ಅನ್ನಪೂರ್ಣೇಶ್ವರಿ ದೇಗುಲದ ಭಕ್ತರಿಗೆ ಸದ್ಯ ದೇವರ ದರ್ಶನದ ಭಾಗ್ಯ ಇಲ್ಲ.

ಕೋವಿಡ್-19 ತಡೆಗಟ್ಟಲು ದೇಗುಲದಲ್ಲಿ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಹೆಚ್ಚಿನ ಕಾಲಾವಕಾಶ ಬೇಕಿರುವುದರಿಂದ ದೇಗುಲದಲ್ಲಿ ಭಕ್ತರಿಗೆ ಅವಕಾಶ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ದೇಗುಲಕ್ಕೆ ಆಗಮಿಸುವ ಭಕ್ತರು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ದೇವರ ದರ್ಶನ, ಪೂಜೆ ಮತ್ತು ವಾಸ್ತವ್ಯದ ಅವಕಾಶಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಹೊರನಾಡು ದೇವಸ್ಥಾನದ ಧರ್ಮಕರ್ತರಾದ ಡಾ.ಜಿ.ಭೀಮೇಶ್ವರ ಜೋಷಿ ತಿಳಿಸಿದ್ದಾರೆ.

ಲಾಕ್ ಡೌನ್ ಆರಂಭದಿಂದಲೂ ಹೊರನಾಡಿನಲ್ಲಿ ನಿತ್ಯ ನಡೆಯುವ ಪೂಜೆಯನ್ನು ಫೇಸ್ ಬುಕ್ ಲೈವ್ ಮೂಲಕ ಭಕ್ತರಿಗೆ ನೋಡಲು ಅವಕಾಶವನ್ನು ಕಲ್ಪಿಸಲಾಗಿದೆ. ಭಕ್ತರ ಅನುಕೂಲಕ್ಕಾಗಿ ಇದೇ ವ್ಯವಸ್ಥೆಯನ್ನೇ ಮುಂದುವರಿಸಲಾಗುವುದು.

ಫೇಸ್ ಬುಕ್ ನಲ್ಲಿ ಲೈವ್ ನಲ್ಲಿ ಆನ್ ಲೈನ್ ಮಂಗಳಾರತಿ ಕಣ್ತುಂಬಿಕೊಳ್ಳಬಹುದಾಗಿದೆ. ಅಲ್ಲದೇ ಭಕ್ತರು ದೇಗುಲದ ವೆಬ್ ಸೈಟ್ ಇಲ್ಲವೇ ಕಚೇರಿಗೆ ( 9448282410/9900076410) ನೇರ ಕರೆ ಮಾಡಿ ಸೇವೆಗಳನ್ನು ಮಾಡಿಸಬಹುದು ಎಂದು ಪ್ರಕಟಣೆ ಮಾಹಿತಿ ನೀಡಿದೆ.

https://www.facebook.com/asathoranadu/videos/272016640891329/?t=281
Leave A Reply

Your email address will not be published.