ಬೆಂಗಳೂರು : ಡ್ರಗ್ಸ್ ದಂಧೆಗೂ ನನಗೂ ಯಾವುದೇ ಸಂಬಂಧವಿಲ್ಲ. ಪಾರ್ಟಿಗೆ ಹೋಗಿದ್ದು ನಿಜ ಆದರೆ ಡ್ರಗ್ಸ್ ವಿಚಾರ ನನಗೆ ಗೊತ್ತೇ ಇಲ್ಲಾ ಎಂದು ಸ್ಯಾಂಡಲ್ ವುಡ್ ನಟಿ ರಾಗಿಣಿ ಹೇಳಿಕೆ ನೀಡಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ನಡೆಯುತ್ತಿರುವ ಡ್ರಗ್ಸ್ ದಂಧೆಯಲ್ಲಿ ಹೆಸರು ಕೇಳಿಬಂದ ಬೆನ್ನಲ್ಲೇ ನಟಿ ರಾಗಿಣಿ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದರು.

ಕಳೆದ ಮೂರು ದಿನಗಳಿಂದಲೂ ವಿಚಾರಣೆ ನಡೆಸಿರುವ ಸಿಸಿಬಿ ಅಧಿಕಾರಿಗಳು ಇದೀಗ ಮತ್ತೆ 5 ದಿನಗಳ ಕಾಲ ನಟಿ ರಾಗಿಣಿಯನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಆದರೆ ಕಳೆದ ಮೂರು ದಿನಗಳಿಂದಲೂ ನಡೆದ ವಿಚಾರಣೆಯ ವೇಳೆಯಲ್ಲಿ ರಾಗಿಣಿ ಯಾವುದೇ ವಿಚಾರವನ್ನೂ ಬಾಯ್ಬಿಟ್ಟಿಲ್ಲ ಎನ್ನಲಾಗಿದೆ.

ಸ್ಯಾಂಡಲ್ ವುಡ್ ಸ್ಟಾರ್ ನಟಿಯಾಗಿರುವ ನಾನು ಬೆಳೆಯುತ್ತಿರುವುದನ್ನು ಸಹಿಸದವರು ಸಾಕಷ್ಟು ಮಂದಿಯಿದ್ದಾರೆ. ಹೀಗಾಗಿ ಅವರೆಲ್ಲಾ ಸೇರಿಕೊಂಡು ನನ್ನ ಮೇಲೆ ಇಂತಹ ಗಂಭೀರ ಆರೋಪವನ್ನು ಹೊರಿಸುತ್ತಿದ್ದಾರೆ. ಓರ್ವ ನಟಿಯಾಗಿ ನಾನು ಪಾರ್ಟಿಗಳಲ್ಲಿ ಪಾಲ್ಗೊಂಡಿರುವುದು ನಿಜ.

ಆದರೆ ಡ್ರಗ್ಸ್ ವಿಚಾರ ನನಗೆ ಗೊತ್ತೆ ಇಲ್ಲಾ ಎಂದು ಅಧಿಕಾರಿಗಳ ಮುಂದೆ ಹೇಳಿದ್ದಾರೆ. ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆಗೆ ಸಂಬಂಧಿಸಿದಂತೆ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ರಾಗಿಣಿ ವಿಚಾರ ಎಲ್ಲಿಗೆ ಮುಟ್ಟುತ್ತೋ ಅನ್ನೋದನ್ನು ಕಾದುನೋಡಬೇಕಿದೆ.