ಬರ್ತಡೇ ಪಾರ್ಟಿಯಲ್ಲಿ ಬ್ಯೂಟಿಷಿಯನ್ ಗೆ ಡ್ರಿಂಕ್ಸ್ ಕುಡಿಸಿ ಗೆಳೆಯರಿಂದಲೇ ಅತ್ಯಾಚಾರ !!

0

ಲಖನೌ : ಹುಟ್ಟುಹಬ್ಬದ ಪಾರ್ಟಿಯ ನೆಪದಲ್ಲಿ ಗೆಳತಿಯನ್ನು ಕರೆಯಿಸಿಕೊಂಡಿದ್ದಾರೆ. ನಂತರ ಆಕೆಗೆ ಬಲವಂತವಾಗಿ ಕಂಠಪೂರ್ತಿ ಡ್ರಿಂಕ್ಸ್ ಮಾಡಿಸಿದ್ದಾರೆ. ಯುವತಿ ನಶೆಯಲ್ಲಿ ತೇಲಾಡುತ್ತಿದ್ದಂತೆಯೇ ಗೆಳೆಯರು ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ.

ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಘಟನೆ ನಡೆದಿದ್ದು, ಧೂಮನ್ ಗಂಜ್ ಠಾಣೆಯ ಪೊಲೀಸರು ಯುವತಿಯ ಸ್ನೇಹಿತರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. 20 ವರ್ಷದ ಯುವತಿ ಬ್ಯೂಟಿಷಿಯನ್ ಕೆಲಸ ಮಾಡಿಕೊಂಡಿದ್ದಳು.

ತನ್ನ ಗೆಳೆಯರು ಹುಟ್ಟು ಹಬ್ಬ ಆಚರಣೆಯ ಪಾರ್ಟಿ ಮಾಡೋಣಾ ಅಂತಾ ಹೇಳಿ ಕರೆಯಿಸಿಕೊಂಡಿದ್ದಾರೆ. ನಂತರ ಆಕೆಗೆ ಬಲವಂತವಾಗಿ ಮದ್ಯ ಕುಡಿಸಿದ್ದಾರೆ. ಆದರೆ ಗೆಳೆಯರು ನೀಡಿದ ಡ್ರಿಂಕ್ಸ್ ಸೇವಿಸುತ್ತಿದ್ದಂತೆಯೇ ಯುವತಿ ಪುಲ್ ಟೈಟ್ ಆಗಿದ್ದಾಳೆ.

ಗೆಳತಿಗೆ ಮತ್ತೇರುತ್ತಿದ್ದಂತೆಯೇ ಯುವಕರು ಅತ್ಯಾಚಾರವೆಸಗಿದ್ದಾರೆ. ಘಟನೆಯಿಂದಾಗಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಯುವತಿ ಮಧ್ಯರಾತ್ರಿಯಲ್ಲಿಯೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಕೂಡಲೇ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದರೂ ಕೂಡ ಆರೋಪಿಗಳು ಮಾತ್ರ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಯುವತಿ ನೀಡಿದ ದೂರಿನ ಆಧಾರದ ಮೇಲೆ ಧೂಮನ್ ಗಂಜ್ ಠಾಣೆಯ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

Leave A Reply

Your email address will not be published.