ಇತ್ತೀಚಿಗೆ ಅತಿಹೆಚ್ಚು ಚರ್ಚೆಯಾಗ್ತಿರೋ ಸಂಗತಿಗಳಲ್ಲಿ ಒಂದು ದೇಶಭಕ್ತಿ ಇನ್ನೊಂದು ಬ್ರಾಹ್ಮಣ್ಯ. ಆದರೆ ಈ ಸೂಕ್ಷ್ಮ ವಿಚಾರದ ಬಗ್ಗೆ ಸ್ಯಾಂಡಲ್ ವುಡ್ ನಟ-ನಟಿಯರು ಮೌನವಾಗಿರೋದೇ ಹೆಚ್ಚು. ಆದರೆ ನಟಿ ಅನಿತಾ ಭಟ್ ಮಾತ್ರ ಬೋಲ್ಡ್ ಓಪಿನಿಯನ್ ಹಂಚಿಕೊಂಡು ಚರ್ಚೆ ಹುಟ್ಟುಹಾಕಿದ್ದಾರೆ.

ಗಾಂಧಿಯನ್ನು ಕೊಂದು ಎಂತ ದುರಂತಕ್ಕೆ ಸಿಕ್ಕಿ ಹಾಕಿಕೊಳ್ಳಬಹುದು ಎಂಬುದು ಗೊತ್ತಿದ್ದು ಅದನ್ನು ಮಾಡಿದ ಗೋಡ್ಸೆ ದೇಶಪ್ರೇಮಕ್ಕೆ ಜೈ. ದೇಶಕ್ಕಿಂತ ಯಾವುದು ದೊಡ್ಡದಲ್ಲ.ಇನ್ನೆಷ್ಟೂ ಚೂರಾಗ್ತಾ ಇತ್ತೋ ಭಾರತ ಎಂಬ ಕಾಳಜಿಯೊಂದಿಗೆ ಮೊದಲ ಟ್ವೀಟ್ ಮಾಡಿದ್ದಾರೆ ಅನಿತಾ ಭಟ್.

ಇದಲ್ಲದೇ, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಗೋಡ್ಸೆಯವರು ದೇಶಭಕ್ತನೇ. ಅವರನ್ನು ಭಯೋತ್ಪಾದಕ ಅಂತ ಕರಿಯೋದು ನಿಮ್ಮ ಅಜ್ಞಾನ. ಯಾರೋ ಒಬ್ಬರಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿಲ್ಲ. ಕೋಟಿಗಟ್ಟಲೇ ಜನರು ಅದಕ್ಕಾಗಿ ಬಲಿದಾನ ಮಾಡಿದ್ದಾರೆ. ಅಲ್ಲದೇ ಈ ಬಗ್ಗೆ ಸರಿಯಾಗಿ ತಿಳಿದುಕೊಳ್ಳಲು ನಾಥೂರಾಮ್ ಗೋಡ್ಸೆಬರೆದ ವೈ ಆಯ್ ಅಸಾಸಿನೇಟೆಡ್ ಗಾಂಧಿ ಪುಸ್ತಕ ಓದುವಂತೆ ಸಲಹೆ ಕೊಟ್ಟಿದ್ದಾರೆ.

ಬ್ರಾಹ್ಮಣರು ತೋರಿಸೋದು ಬ್ರಾಹ್ಮಣತ್ವ, ಗೌಡ್ರು ತೋರಿಸೋದು ಗೌಡತ್ವ,ದಲಿತರು ತೋರಿಸೋದು ದಲಿತತ್ವ. ದಲಿತರಲ್ಲೂ ಒಳಜಾತಿ ಇದೆ ಅಂತ ಕೇಳಪಟ್ಟಿದ್ದೀನಿ. ಅದನ್ನು ತೊಲಗಿಸೋದು ಯಾವಾಗ ಎಂದು ಅನಿತಾ ಭಟ್ ಪ್ರಶ್ನಿಸಿದ್ದಾರೆ.
ಅಲ್ಲದೇ ತಮ್ಮ ಮನೆಯಲ್ಲಿ ಜಾತಿ ವ್ಯವಸ್ಥೆ ಆಚರಣೆಯಲ್ಲಿ ಇಲ್ಲ ಎಂದಿರುವ ಅನಿತಾ ಭಟ್, ಮಡಿ-ಮೈಲಿಗೆ ಎಲ್ಲರ ಮನೆಲೂ ಆಚರಿಸುತ್ತಾರೆ. ಅದಕ್ಕೆ ಕೇವಲ ಬ್ರಾಹ್ಮಣರನ್ನು ಯಾಕೆ ಹೊಣೆ ಮಾಡ್ತೀರಿ ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.
ಅನಿತಾ ಬೋಲ್ಡ್ ಟ್ವೀಟ್ ಗಳಿಗೆ ಪರ-ವಿರೋಧ ಚರ್ಚೆಗಳು ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದ್ದು, ಹಲವರು ಅನಿತಾ ವಾದ ಬೆಂಬಲಿಸಿದ್ರೇ ಇನ್ನು ಕೆಲವರು ನಿಮಗೆ ಓದಿನ,ಮಾಹಿತಿಯ ಕೊರತೆ ಇದೆ ಎಂದಿದ್ದಾರೆ.