ಸ್ಯಾಂಡಲ್‌ವುಡ್‌ ನಟಿ ಮಾನ್ವಿತಾ ಕಾಮತ್‌ಗೆ ಮಾತೃವಿಯೋಗ

ಸ್ಯಾಂಡಲ್‌ವುಡ್‌ ನಟಿ ಮಾನ್ವಿತಾ ಕಾಮತ್‌ ವಿಭಿನ್ನ ಪಾತ್ರಗಳಲ್ಲಿ ನಟಿಸುವ ಮೂಲಕ ತಮ್ಮದೇ ಆದ ಅಭಿನಯ ಚಾತುರ್ಯವನ್ನು ಹೊಂದಿದ್ದಾರೆ. ಇದೀಗ ನಟಿ ಮಾನ್ವಿತಾ ಕಾಮತ್‌ ತನ್ನ ತಾಯಿಯನ್ನು(Manvitha Kamath’s mother passed away) ಕಳೆದುಕೊಂಡಿದ್ದಾರೆ. ಹಲವು ದಿನಗಳಿಂದ ನಟಿ ಮಾನ್ವಿತಾ ತಾಯಿ ಸುಜಾತಾ ಕಾಮತ್‌ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು (ಏಪ್ರಿಲ್‌ 15)ರಂದು ನಟಿ ಮಾನ್ವಿತಾ ತಾಯಿ ಸುಜಾತಾ ಕಾಮತ್‌ ಇಹಲೋಕವನ್ನು ತ್ಯಜಿಸಿದ್ದಾರೆ.

ನಟಿ ಮಾನ್ವಿತಾ ತಾಯಿ ಸುಜಾತಾ ಕಾಮತ್‌ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಅವರಿಗೆ ಕಿಟ್ನಿ ಕಸಿ ಕೂಡ ಮಾಡಲಾಗಿತ್ತು. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಸುಜಾತಾಗೆ ಚಿಕಿತ್ಸೆ ನೀಡಲಾಗುತ್ತಿತ್ತು ತಾಯಿಯನ್ನು ಉಳಿಸಿಕೊಳ್ಳಲು ಮಗಳು ಮಾನ್ವಿತಾ ಕಾಮತ್‌ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರು. ಆದರೆ, ಮಗಳ ಪ್ರಯತ್ನಕ್ಕೆ ತಾಯಿ ಜೀವ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ಮಾನ್ವಿತಾ ಕಾಮತ್ ಅವರ ಆರಂಭಿಕ ಹೆಸರು ಶ್ವೇತಾ ಕಾಮತ್ ಎಂದು ಕರೆಯಲಾಗುತ್ತಿತ್ತು. ತಂದೆ ಹರೀಶ್ ಕಾಮತ್ ಮತ್ತು ತಾಯಿ ಸುಜಾತಾ ಕಾಮತ್ ದಂಪತಿಗೆ ಏಪ್ರಿಲ್ 13 ರಂದು ಮಂಗಳೂರಿನಲ್ಲಿ ಜನಿಸಿದರು. ಎಸ್‌ಎಸ್‌ಎಲ್‌ಸಿವರೆಗೆ ಚಿಕ್ಕಮಗಳೂರಿನ ಕಳಸದಲ್ಲಿ ಬೆಳೆದ ಅವರು ನಂತರ ಶಾರದ ಪಿಯು ಕಾಲೇಜಿನಲ್ಲಿ ಪಿಯು ಮತ್ತು ಪದವಿಯನ್ನು ಪಡೆದರು ಮತ್ತು ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪತ್ರಿಕೋದ್ಯಮ, ಅನಿಮೇಷನ್ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದರು.

ಇದನ್ನೂ ಓದಿ : ಕೆಜಿಎಫ್ 2 ಸೆಟ್‌ನಲ್ಲಿ ಯಶ್ ಭೇಟಿಯಾದ ರಾಧಿಕಾ ಪಂಡಿತ್‌ : ವಿಡಿಯೋ ಸಖತ್‌ ವೈರಲ್

ಇದನ್ನೂ ಓದಿ : ಮೊದಲ ದಿನವೇ 5 ಕೋಟಿ ರೂ. ಭರ್ಜರಿ ಕಲೆಕ್ಷನ್ ಕಂಡ ಸಮಂತಾ ಅಭಿನಯದ ಶಾಕುಂತಲಂ

ಮಾನ್ವಿತಾ ಕಾಮತ್ ಕನ್ನಡ ಸಿನಿರಂಗದಲ್ಲಿ ಕೆಲಸ ಮಾಡುವ ಭಾರತೀಯ ನಟಿಯಾಗಿದ್ದಾರೆ. ನಟಿ ಮಾನ್ವಿತಾ ಮೊದಲು ರೇಡಿಯೋ ಮಿರ್ಚಿಯಲ್ಲಿ ರೇಡಿಯೋ ಜಾಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಮಂಗಳೂರಿನ ರೇಡಿಯೋ ಮಿರ್ಚಿಯಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಕೆಲಸ ಮಾಡಿದರು ಮತ್ತು ಕಿಲಾಡಿ 983 ಎಂಬ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದರು. ನಂತರದ ದಿನಗಳಲ್ಲಿ ದುನಿಯಾ ಸೂರಿ ನಿರ್ದೇಶನದ ಕನ್ನಡ ಸಿನಿಮಾ ಕೆಂಡಸಂಪಿಗೆ (2015) ಮೂಲಕ ನಟನ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ.

Sandalwood actress Manvitha Kamath’s mother passed away

Comments are closed.