ಸ್ಯಾಂಡಲ್ ವುಡ್ ನಟಿಯರು ಆಕ್ಟಿಂಗ್ ನಲ್ಲಿ ಹೆಸರು ಗಳಿಸಿದ್ದರೇ ನಟಿ ರಾಧಿಕಾಕುಮಾರಸ್ವಾಮಿ ಮಾತ್ರ ತಮ್ಮ ಫಿಟನೆಸ್,ಸೌಂದರ್ಯ ಹಾಗೂ ನೃತ್ಯದಿಂದಲೇ ಮನಸೆಳೆಯುತ್ತಾರೆ. ಪ್ರೊಪೆಶನಲ್ ಡ್ಯಾನ್ಸರ್ ಗಳಂತೆ ಸೊಂಟ ಬಳುಕಿಸೋ ರಾಧಿಕಾ ಕುಮಾರಸ್ವಾಮಿ ( Radhika Kumaraswamy ) ಗೆ ಡ್ಯಾನ್ಸ್ ಎಂದರೇ ಪ್ರಾಣವಂತೆ. ಯಾವುದೇ ಟ್ರೆಂಡಿ ಹಾಡು ಬಂದರೂ ಅದಕ್ಕೇ ನೃತ್ಯ ಮಾಡಿ ಎಂಜಾಯ್ ಮಾಡ್ತಾರೆ. ಈಗ ಈ ಸಾಲಿಗೆ ಹೊಸ ಹಾಡು ಸೇರ್ಪಡೆಯಾಗಿದ್ದು ರಾಧಿಕಾ ಕುಮಾರಸ್ವಾಮಿ ಸಮುದ್ರತೀರದಲ್ಲಿ ಡ್ಯಾನ್ಸ್ ಮಾಡಿ ಎಂಜಾಯ್ ಮಾಡಿದ್ದಾರೆ.
ರ್ಯಾಪರ್ ಬಾದ್ ಶಾ ಜುಗ್ನು ಹಾಡಿಗೆ ಬಹುತೇಕ ಸೆಲೆಬ್ರೇಟಿಗಳು ಕುಣಿದು ಎಂಜಾಯ್ ಮಾಡಿದ್ದಾರೆ. ಕನ್ನಡದಲ್ಲಿ ರಾಗಿಣಿ,ವೈಷ್ಣವಿ ಸೇರಿದಂತೆ ಸಾಕಷ್ಟು ನಟಿಯರು ಜುಗ್ನು ಹಾಡಿಗೆ ಡ್ಯಾನ್ಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ಸಾಲಿಗೆ ಸ್ಯಾಂಡಲ್ ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಹೊಸ ಸೇರ್ಪಡೆ. ಹೊಸ ವರ್ಷವನ್ನು ಎಂಜಾಯ್ ಮಾಡೋಕೆ ಸಮುದ್ರತೀರದಲ್ಲಿ ಬೀಡು ಬಿಟ್ಟಿದ್ದು, ಆ ವೇಳೆ ತಿಳಿನೀರ ಸಮುದ್ರದ ಎದುರು ಮೈಬಳುಕಿಸಿ ಡ್ಯಾನ್ಸ್ ಮಾಡೋ ಮೂಲಕ ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದಾರೆ.
ಇನ್ ಸ್ಟಾಗ್ರಾಂ ನಲ್ಲಿ 10.6 ಫಾಲೋವರ್ಸ್ ಹೊಂದಿರೋ ರಾಧಿಕಾ ಕುಮಾರಸ್ವಾಮಿ ಈ ವಿಡಿಯೋಗೆ ಸಾವಿರಾರು ಜನರು ಲೈಕ್ಸ್ ಒತ್ತಿದ್ದಾರೆ. ಇನ್ನು ಕೆಲವರು ಕಮೆಂಟ್ ಮಾಡಿದ್ದಾರೆ. ಸದ್ಯ ನಾಲ್ಕು ಕನ್ನಡ ಸಿನಿಮಾದಲ್ಲಿ ಬ್ಯುಸಿಯಾಗಿರೋ ರಾಧಿಕಾ ಕುಮಾರಸ್ವಾಮಿ ಯಾವಾಗಲೂ ಸೋಷಿಯಲ್ ಮೀಡಿಯಾದಿಂದ ಅಂತರ ಕಾಯ್ದುಕೊಳ್ಳುತ್ತಾರೆ. ಆದರೆ ಹೊಸ ವರ್ಷದ ಹೊಸ್ತಿಲಲ್ಲಿ ಮಾತ್ರ ಸಖತ್ ವಿಡಿಯೋ ಹರಿಬಿಡೋ ಮೂಲಕ ಸಂಚಲನ ಮೂಡಿಸಿದ್ದಾರೆ.
ಕಳೆದ ವರ್ಷ ವಂಚಕ ಯುವರಾಜ್ ಸ್ವಾಮಿ ಕೇಸ್ ನಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಹೆಸರು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ನಟಿ ರಾಧಿಕಾ ಸಿಸಿಬಿ ವಿಚಾರಣೆ ಸಹ ಎದುರಿಸಿದ್ದರು. ಮಾತ್ರವಲ್ಲ ವಿಚಾರಣೆ ಬಳಿಕ ಸುದ್ದಿಗೋಷ್ಟಿ ನಡೆಸಿ, ಯುವರಾಜ್ ಸ್ವಾಮಿ ಗೂ ನಮಗೂ ಯಾವುದೇ ಸಂಬಂಧವಿಲ್ಲ. ಅವರು ನನ್ನ ತಂದೆಯೊಂದಿಗೆ ಸ್ನೇಹ ಹೊಂದಿದ್ದು ಹಣಕಾಸು ವ್ಯವಹಾರವೂ ಇತ್ತು. ನನಗಾಗಿ ಒಂದೆರಡು ಸಿನಿಮಾ ಮಾಡೋದಾಗಿ ಕಾಲ್ ಶೀಟ್ ಕೇಳಿದ್ದರು ಎಂದು ವಿವರಣೆ ನೀಡಿದ್ದರು. ಸಾಕಷ್ಟು ಸಿನಿಮಾದಲ್ಲಿ ನಟಿಸಿದ ಬಳಿಕ ಸದ್ಯ ರಾಧಿಕಾ ಚ್ಯೂಸಿಯಾಗಿದ್ದು ಕೆಲವೇ ಕೆಲವು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮಾತ್ರವಲ್ಲ ಖಾಸಗಿ ವಾಹಿನಿಯ ಡ್ಯಾನ್ಸಿಂಗ್ ಸ್ಟೋರಿಗೆ ನಿರ್ಣಾಯಕರಾಗಿಯೂ ಪಾಲ್ಗೊಂಡಿದ್ದರು.
ಇದನ್ನೂ ಓದಿ : ದೇಶದ ಗಡಿ ದಾಟಿದ ರಾಜಕುಮಾರ : ಶ್ರೀಲಂಕಾದಲ್ಲಿ ಪುನೀತ್ ರಾಜ್ ಕುಮಾರ್ ಗೆ ಸಿಕ್ತು ವಿಶೇಷ ಗೌರವ
ಇದನ್ನೂ ಓದಿ : pushpa 2 ಸಿನಿಮಾದಲ್ಲಿ ಕನ್ನಡಿಗರ ಕಾರುಬಾರು : ರಶ್ಮಿಕಾಗೆ ಜೊತೆಯಾಗ್ತಾರಂತೆ ಕೃತಿ ಶೆಟ್ಟಿ
( Sandalwood Actress Radhika Kumaraswamy dance Video Shared)