ಸ್ಯಾಂಡಲ್ ವುಡ್ ನ ಸ್ವೀಟಿ ರಾಧಿಕಾ ಕುಮಾರಸ್ವಾಮಿ (Radhika kumaraswamy ) ಕೆಲ ವರ್ಷಗಳಿಂದ ಸೈಲೆಂಟ್ ಆಗಿದ್ದರು. ಸಿನಿಮಾಗಳಿದ್ದರೂ ಸ್ಯಾಂಡಲ್ ವುಡ್ ನಲ್ಲಿ ರಾಧಿಕಾ ಸದ್ದಿರಲಿಲ್ಲ. ಆದರೆ ಈಗ ಹುಟ್ಟುಹಬ್ಬದ ನೆಪದಲ್ಲಿ ರಾಧಿಕಾ ಕುಮಾರಸ್ವಾಮಿ ಮತ್ತೆ ಸಕ್ರಿಯವಾಗ್ತಿದ್ದು, ಈ ಭಾರಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳೋದಾಗಿ ರಾಧಿಕಾ ಘೋಷಿಸಿದ್ದಾರೆ. ಈ ಹೊತ್ತಲ್ಲೇ ರಾಧಿಕಾ ಬಿಗ್ ಬ್ರೇಕಿಂಗ್ ನ್ಯೂಸ್ ನೀಡಲಿದ್ದಾರಾ ಎಂಬ ಕುತೂಹಲ ಮೂಡಿದೆ.

ರಾಧಿಕಾ ಕುಮಾರಸ್ವಾಮಿ ಸ್ಯಾಂಡಲ್ ವುಡ್ ಕಂಡ ಸುಂದರಿ ನಟಿ ಹಾಗೂ ನಿರ್ಮಾಪಕಿ. ಕೆಲ ವರ್ಷಗಳಿಂದ ಸಿನಿಮಾ,ಜಾಹೀರಾತು ಹಾಗೂ ರಿಯಾಲಿಟಿ ಶೋಗಳಿಂದಲೂ ದೂರವಿದ್ದ ನಟಿ ರಾಧಿಕಾ ದಿಢೀರ್ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.
ನವೆಂಬರ್ 11 ರಂದು ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಳ್ಳೋದಾಗಿ ಘೋಷಿಸಿದ್ದಾರೆ. ಸ್ವತಃ ತಾವೇ ಇನ್ ಸ್ಟಾಗ್ರಾಂ ವಿಡಿಯೋದಲ್ಲಿ ಅಭಿಮಾನಿಗಳಿಗೆ ಆಹ್ವಾನ ನೀಡಿರೋ ರಾಧಿಕಾ ,ಹಲವು ವರ್ಷಗಳಿಂದ ನಾನು ಅಭಿಮಾನಿಗಳನ್ನು ಭೇಟಿ ಮಾಡಲು ಆಗಿರಲಿಲ್ಲ. ಹೀಗಾಗಿ ಈ ಭಾರಿಯ ಹುಟ್ಟುಹಬ್ಬವನ್ನು ನಾನು ಅಭಿಮಾನಿಗಳ ಜೊತೆ ಆಚರಿಸಿಕೊಳ್ಳಲು ಇಚ್ಛಿಸುತ್ತೇನೆ.
ಇದನ್ನೂ ಓದಿ : ಸ್ಯಾಂಡಲ್ ವುಡ್ ಕ್ವೀನ್ ರಮ್ಯ ಕೊಟ್ರು ಸಿಹಿಸುದ್ದಿ: ಸ್ವಾತಿ ಮುತ್ತಿನ ಮಳೆಹನಿಯೇ ನವೆಂಬರ್ 24 ರಂದು ತೆರೆಗೆ
ಹೀಗಾಗಿ ನವೆಂಬರ್ 11 ರಂದು ನನ್ನ ಹುಟ್ಟುಹಬ್ಬದ ಪ್ರಯುಕ್ತ ತಮ್ಮ ನಿವಾಸದಲ್ಲಿ ಸಂಜೆ ಆರು ಮೂವತ್ತರಿಂದ ರಾತ್ರಿ 9.30 ರವರೆಗೆ ಅಭಿಮಾನಿಗಳು ಬನ್ನಿ ನನ್ನನ್ನು ಭೇಟಿ ಮಾಡಿ ಹರಸಿ ಎಂದು ರಾಧಿಕಾ ವಿಡಿಯೋದಲ್ಲಿ ಮನವಿ ಮಾಡಿದ್ದಾರೆ. ರಾಧಿಕಾ ಸೋಷಿಯಲ್ ಮೀಡಿಯಾದಲ್ಲಿ ಈ ಆಹ್ವಾನದ ಜೊತೆಗೆ ಮನೆ ವಿಳಾಸವನ್ನು ಶೇರ್ ಮಾಡಿದ್ದಾರೆ.
ಇಷ್ಟು ವರ್ಷಗಳ ಕಾಲ ಹುಟ್ಟುಹಬ್ಬ ಆಚರಿಸಿಕೊಳ್ಳದ ರಾಧಿಕಾ ಈ ಭಾರಿ ಸಾರ್ವಜನಿಕವಾಗಿ ಹುಟ್ಟುಹಬ್ಬ ಆಚರಿಸಿಕೊಳ್ತಿರೋದು ರಾಧಿಕಾ ಸ್ಪೆಶಲ್ ಅನೌನ್ಸ್ ಮೆಂಟ್ ಮಾಡೋದಕ್ಕಾ ಅನ್ನೋ ಅನುಮಾನ ಮೂಡಿಸಿದೆ. ಲಈ ಹಿಂದೆಯೇ ರಾಧಿಕಾ ತಮಗೆ ರಾಜಕಾರಣದಲ್ಲಿ ಆಸಕ್ತಿ ಇದೆ. ಅವಕಾಶ ಸಿಕ್ಕರೇ ಚುನಾವಣೆ ಹಾಗೂ ರಾಜಕೀಯ ಎರಡರಲ್ಲೂ ಸಕ್ರಿಯವಾಗೋಕೆನಾನು ಸಿದ್ಧ ಎಂದಿದ್ದರು.

ಹೀಗಾಗಿ ತಮ್ಮ ಹುಟ್ಟುಹಬ್ಬದಂದು ರಾಧಿಕಾ ರಾಜಕೀಯ ಪ್ರವೇಶಿಸುವ ಘೋಷಣೆ ಮಾಡಲಿದ್ದಾರಾ ಅನ್ನೋ ಅನುಮಾನ ಮೂಡಿದೆ. ಇದನ್ನು ಹೊರತುಪಡಿಸಿದರೇ ರಾಧಿಕಾ ಸಖತ್ ಸ್ಲಿಮ್ ಆಗಿದ್ದು, ಹೊಸ ಸಿನಿಮಾದ ಘೋಷಣೆಗಾಗಿ ಅದ್ದೂರಿ ಹುಟ್ಟುಹಬ್ಬ ಆಚರಿಸಿಕೊಳ್ತಿರೋ ಸಾಧ್ಯತೆಯೂ ಇದೆ. ಒಟ್ಟಿನಲ್ಲಿ ರಾಧಿಕಾ ಕುಮಾರಸ್ವಾಮಿ ಅಲಿಯಾಸ್ ಸ್ಯಾಂಡಲ್ ವುಡ್ ಸ್ವೀಟಿಯ ಈ ಹೊಸ ಘೋಷಣೆ ಹಲವು ಪ್ರಶ್ನೆ ಹುಟ್ಟುಹಾಕಿದ್ದು, ರಾಧಿಕಾ ಅಭಿಮಾನಿಗಳು ಮಾತ್ರ ಶನಿವಾರ ರಾಧಿಕಾ ಹುಟ್ಟುಹಬ್ಬ ಆಚರಿಸೋಕೆ ಕಾತುರರಾಗಿ ಕಾಯ್ತಿದ್ದಾರೆ.
ಇದನ್ನೂ ಓದಿ : ಶೂಟಿಂಗ್ ಸೆಟ್ ನಲ್ಲಿ ಪುನೀತ್ ಪುತ್ರಿ: ನಟನೆಗೆ ಎಂಟ್ರಿಕೊಟ್ಟರಾ ವಂದಿತಾ ಪುನೀತ್ ರಾಜ್ ಕುಮಾರ್
ನಿನಗಾಗಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ರಾಧಿಕಾ ಅಣ್ಣ ತಂಗಿ ಸಿನಿಮಾದ ಮೂಲಕ ಕನ್ನಡಿಗರ ಮನಗೆದ್ದರು.ಹ್ಯಾಟ್ರಿಕ್ ಹೀರೋ ಶಿವ ರಾಜ್ ಕುಮಾರ್ ಜೊತೆ ನಟಿಸಿದ ಈ ಸಿನಿಮಾ ರಾಧಿಕಾಗೆ ಸಖತ್ ಹೆಸರು ತಂದುಕೊಟ್ಟಿತು. ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಕನ್ನಡದ ಬಹುತೇಕ ಸ್ಟಾರ್ ನಟರ ಜೊತೆ ನಟಿಸಿದ ರಾಧಿಕಾ ಕೆಲ ವರ್ಷಗಳಿಂದ ಸಿನಿಮಾ ನಿರ್ಮಾಣದಲ್ಲೂ ತೊಡಗಿಕೊಂಡಿದ್ದಾರೆ

ಇತ್ತೀಚಿಗೆ ಸಿನಿಮಾದ ಜೊತೆಗೆ ಸೋಷಿಯಲ್ ಮೀಡಿಯಾದಲ್ಲೂ ಆಕ್ಟಿವ್ ಆಗಿರೋ ನಟಿ ರಾಧಿಕಾ ಕುಮಾರ್ ಸ್ವಾಮಿ, ರೀಲ್ಸ್, ವರ್ಕೌಟ್,ಹಬ್ಬ,ಯೋಗಾಭ್ಯಾಸ ಹೀಗೆ ಸಾಕಷ್ಟು ವೈರೈಟಿ ವೈರೈಟಿ ವೀಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ. ಈಗ ಗ್ರ್ಯಾಂಡ್ ಬರ್ತಡೇ ಮೂಲಕ ರಾಧಿಕಾ ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ ನೀಡೋ ಸಿದ್ಧತೆಯಲ್ಲಿದ್ದು, ಏನಿರಬಹುದು ಗುಡ್ ನ್ಯೂಸ್ ಅನ್ನೋ ಕುತೂಹಲದಲ್ಲಿದ್ದಾರೆ ಫ್ಯಾನ್ಸ್.
ಇದನ್ನೂ ಓದಿ : ಮತ್ತೆ ನಟನೆಗೆ ಮರಳಿದ್ರಾ ನಟಿ ಅಮೂಲ್ಯ ? ಶೇರ್ ಮಾಡಿದ್ರು ಸ್ಪೆಷಲ್ ವಿಡಿಯೋ
Sandalwood Actress Radhika Kumaraswamy for politics ! Big announcement on birthday ?