ಹ್ಯೂಮನ್‌ AI ಪಿನ್‌ : ನಿಮ್ಮ ಶರ್ಟ್​ನಲ್ಲಿರೋ ಪಿನ್ ಮೊಬೈಲ್​ನಂತೆ ಕಾರ್ಯನಿರ್ವಹಿಸುತ್ತೆ ಅಂದರೆ ನಂಬ್ತೀರಾ ? ಮೂಗಿನ ಮೇಲೆ ಬೆರಳಿಡುವಂತೆ ಮಾಡ್ತಿದೆ ಈ ಹೊಸ ಸ್ಮಾರ್ಟ್​ಫೋನ್​

ಒಂದು ವರ್ಷಗಳ ಕಾಲದ ಸಂಶೋಧನೆಯ ಬಳಿಕ ಹ್ಯೂಮನ್​ ಎಂಬ ಹೆಸರಿನ AI ಕಂಪನಿಯು (Humane AI pin) ಮುಂದಿನ ದಿನಗಳಲ್ಲಿ AI ಫಿನ್​ ಎಂಬ ತನ್ನ ಮೊಟ್ಟ ಮೊದಲ ಅತ್ಯಂತ ವಿಭಿನ್ನ ಸ್ಮಾರ್ಟ್ ಫೋನ್​ ಬಿಡುಗಡೆ ಮಾಡಲು ಎಲ್ಲಾ ರೀತಿಯ ತಯಾರಿಯನ್ನು ಮಾಡುತ್ತಿದೆ.

Humane AI pin : ಸುಮ್ಮನೇ ಹೀಗೆ ಇಮಾಜಿನ್​ ಮಾಡಿಕೊಳ್ಳಿ. ನಿಮ್ಮ ಶರ್ಟ್​ ಅಥವಾ ನೀವು ಧರಿಸಿರುವ ಯಾವುದೇ ಡ್ರೆಸ್​ನಲ್ಲಿ ಒಂದು ಸಣ್ಣ ಪಿನ್​ ಇರುತ್ತೆ ಅಂದುಕೊಳ್ಳೋಣ. ಆದರೆ ಈ ಪಿನ್​ ಸಾಮಾನ್ಯ ಪಿನ್​ ಅಲ್ಲ. ಬದಲಾಗಿ ಇದೊಂದು ಸ್ಮಾರ್ಟ್​ಫೋನ್​ ಆಗಿದ್ದರೇ..? ಈಗ ಇಮಾಜಿನೇಷನ್​ ಮಾಡಿಕೊಳ್ಳುವುದು ಕಷ್ಟ ಎನಿಸುತ್ತಿದೆ ಅಲ್ವೇ..? ಡಿಸ್​ಪ್ಲೇ ಇಲ್ಲದ ಸ್ಮಾರ್ಟ್​ಫೋನ್​ನನ್ನು ಕಲ್ಪನೆ ಮಾಡಿಕೊಳ್ಳುವುದೇ ಕಷ್ಟ.ಆದರೂ ಈ ಪಿನ್​ಗಳು ನಿಮಗೆ ಕರೆಗಳನ್ನು ಡಯಲ್​ ಮಾಡಲು, ಸಂದೇಶ ಕಳುಹಿಸಲು ಹಾಗೂ ಸ್ವೀಕರಿಸಲು, ಫೋಟೋ ತೆಗೆಯಲು ಸೇರಿದಂತೆ ನೀವು ಸ್ಮಾರ್ಟ್​ಪೋನ್​ನಲ್ಲಿ ಮಾಡಬಲ್ಲ ಎಲ್ಲಾ ಕೆಲಸಗಳನ್ನು ಒಂದು ಸಣ್ಣ ಹ್ಯೂಮನ್ ಪಿನ್​ ಮಾಡುತ್ತೆ ಅಂದರೆ ನಂಬೋಕೆ ಸಾಧ್ಯ ಇಲ್ಲ ಅಲ್ವೇ..?

Humane Launches AI pin No Apps No screen only voice here is all information
Image Credit to Original Source

ಬರೋಬ್ಬರಿ ಒಂದು ವರ್ಷಗಳ ಕಾಲದ ಸಂಶೋಧನೆಯ ಬಳಿಕ ಹ್ಯೂಮನ್​ ಎಂಬ ಹೆಸರಿನ AI ಕಂಪನಿಯು (Humane AI pin) ಮುಂದಿನ ದಿನಗಳಲ್ಲಿ AI ಫಿನ್​ ಎಂಬ ತನ್ನ ಮೊಟ್ಟ ಮೊದಲ ಅತ್ಯಂತ ವಿಭಿನ್ನ ಸ್ಮಾರ್ಟ್ ಫೋನ್​ ಬಿಡುಗಡೆ ಮಾಡಲು ಎಲ್ಲಾ ರೀತಿಯ ತಯಾರಿಯನ್ನು ಮಾಡುತ್ತಿದೆ. ಸ್ಮಾರ್ಟ್​ಫೋನ್​ಗಳ ನಂತರ ಈ ಜಗತ್ತಿನಲ್ಲಿ ಏನು ಬರಬಹುದು ಎಂಬುದರ ಬಗ್ಗೆ ಚರ್ಚೆ ಈಗಾಗಲೇ ನಡೆಯುತ್ತಿದೆ. ಆದರೆ ಇದೀಗ ಈ ಪಿನ್​ ಎಂಬ ಸ್ಮಾರ್ಟ್​ಫೋನ್​ ಪರಿಕಲ್ಪನೆಯು ಇದೀಗ ಜಗತ್ತನ್ನು ಹೊಸ ದಿಕ್ಕಿನಲ್ಲಿಯೇ ನೋಡುವಂತೆ ಮಾಡುತ್ತಿದೆ.

Humane Launches AI pin No Apps No screen only voice here is all information
Image Credit to Original Source

ಆದರೆ ನೀವು AI ಪಿನ್​​ನೊಂದಿಗೆ ಸಂವಹನ ನಡೆಸುವುದು ಹೇಗೆ..?
ಸ್ಮಾರ್ಟ್​ಫೋನ್​ಗಳಾದರೆ ಅವುಗಳನ್ನ ಕೈಯಲ್ಲಿ ಹಿಡಿದು ಆಪರೇಟ್​ ಮಾಡಬಹುದು ಅನ್ನೋದು ಎಲ್ಲರಿಗೂ ತಿಳಿದಿದೆ. ಅದರೆ AI ಪಿನ್​ನ್ನು ಹೇಗೆ ಸ್ಮಾರ್ಟ್​ಪೋನ್​ನಂತೆ ಬಳಸುವುದು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅಂದಹಾಗೆ ಈ AI ಪಿನ್​ ಒಂದು ರೀತಿಯಲ್ಲಿ ಮಾಗ್ನೆಟಿಕ್​ ಪವರ್​ ಹೊಂದಿದೆ. ಇದನ್ನು ನೀವು ಧರಿಸಿರುವ ಯಾವುದೇ ಬಟ್ಟೆಯ ಮೇಲೆ ಕ್ಲಿಪ್​ನಂತೆ ಅಂಟಿಸಿಕೊಳ್ಳಬಹುದು.

ಇದನ್ನೂ ಓದಿ : ಅಬ್ಬಬ್ಬಾ ಲಾಟರಿ…! ಕೇವಲ 2599 ರೂ.ಗೆ ಸ್ಮಾರ್ಟ್​ ಫೋನ್​ ಮಾರುಕಟ್ಟೆಗೆ ತಂದಿದೆ ರಿಲಯನ್ಸ್​ ಕಂಪನಿ..!

Humane Launches AI pin No Apps No screen only voice here is all information
Image Credit to Original Source

ಒಂದು ವೇಳೆ ನೀವು ಯಾವುದಾದರೂ ಟೇಬಲ್​ನ ಮುಂದೆ ಕುಳಿತಿದ್ದರೆ ನೀವು ಟೇಬಲ್​ನ ಮೇಲೆಯೂ ಈ AI ಪಿನ್​ಗಳನ್ನು ಇಟ್ಟು ಮೊಬೈಲ್​ನಂತೆಯೇ ಬಳಕೆ ಮಾಡಬಹುದಾಗಿದೆ. ಈ AI ಪಿನ್​ಗೆ ನಿಮ್ಮ ಧ್ವನಿಯ ಮೂಲಕ ಸೂಚನೆಗಳನ್ನು ನೀಡಬಹುದು. ಇದರ ಜೊತೆಯಲ್ಲಿ ಹಸಿರು ಲೇಸರ್ ಕೂಡ AI ಪಿನ್​ಗಳಿಗೆ ಅಜ್ಞೆ ನೀಡುವ ಕಾರ್ಯವನ್ನು ನಿರ್ವಹಿಸುತ್ತದೆ. ಈ ಹಸಿರು ಲೇಸರ್​ ಮೂಲಕ ನಿಮ್ಮ ಅಂಗೈಗೆ ಮೊಬೈಲ್​ನಲ್ಲಿ ಡಿಸ್​ಪ್ಲೇ ಬರುತ್ತದೆ.

ಇದನ್ನೂ ಓದಿ : ಐಫೋನ್​ 13ಗೆ 10,000 ರೂ. ಡಿಸ್ಕೌಂಟ್‌ : ಖರೀದಿಗೆ ಮುಗಿಬಿದ್ದ ಗ್ರಾಹಕರು , ಈ ಚಾನ್ಸ್​ ಮಿಸ್​ ಮಾಡ್ಲೇಬೇಡಿ

Humane Launches AI pin No Apps No screen only voice here is all information

Image Credit to Original Sourceಇದರರ್ಥ ನೀವು ನಿಮ್ಮ ಅಂಗೈ ಮೇಲೆ ಟ್ಯಾಪ್​ ಮಾಡುವ ಮೂಲಕ ಯಾರಿಗಾದರೂ ಫೋನ್​ ಮಾಡಬಹುದು . ಮೆಸೇಜ್​ ಮಾಡಬಹುದಾಗಿದೆ. ಒಂದು ರೀತಿಯಲ್ಲಿ ನಿಮ್ಮ ಅಂಗೈ ಮೊಬೈಲ್​ನಂತೆ ಕಾರ್ಯ ನಿರ್ವಹಿಸುತ್ತದೆ. ಈ ವರ್ಷದ ಏಪ್ರಿಲ್​ ತಿಂಗಳಲ್ಲಿ ಇದರ ಡೆಮೋವನ್ನು ಪ್ರದರ್ಶನ ಮಾಡಲಾಗಿತ್ತು. ಅಲ್ಲದೆ ಇದರಲ್ಲಿ ಧ್ವನಿ ಸೂಚನೆಯ ಜೊತೆಯಲ್ಲಿ ಟಚ್​ ಪ್ಯಾಡ್​ ಕೂಡ ಇದೆ ಎನ್ನಲಾಗಿದೆ. ಹೀಗಾಗಿ ನೀವು ನಿಮ್ಮ ಅಂಗೈ ಮೇಲೆ ಒತ್ತುವ ಮೂಲಕ ಈ ಸ್ಮಾರ್ಟ್​ಫೋನ್​ನ್ನು ಬಳಕೆ ಮಾಡಬಹುದಾಗಿದೆ.

ಇದನ್ನೂ ಓದಿ : ಈ ಮೊಬೈಲ್​ ಖರೀದಿ ಮಾಡಿದ್ರೆ ಸಾಕು : ಯಾವುದೇ ಭಾಷೆಯ ಕರೆಯನ್ನೂ ನಿಮ್ಮ ಭಾಷೆಗೆ ಅನುವಾದಿಸಿ ಕೊಡುತ್ತೆ..!

Humane Launches AI pin No Apps No screen only voice here is all information
Image Credit to Original Source

ಇದರಲ್ಲಿ ಹೇ ಸಿರಿ ಅಥವಾ ಓಕೆ ಗೂಗಲ್​ ಎಂಬಂತಹ ಪದಗಳನ್ನು ಬಳಕೆ ಮಾಡಬೇಕು ಎಂದು ಇರೋದಿಲ್ಲ. ನೀವು ಸಾಮಾನ್ಯವಾಗಿ ಮಾತನಾಡುವ ಮೂಲಕ ನಿಮ್ಮ ಎಐ ಸ್ಮಾರ್ಟ್​ಫೋನ್​ಗೆ ಕಮಾಂಡ್​ ನೀಡಬಹುದಾಗಿದೆ. ಭವಿಷ್ಯದಲ್ಲಿ ಈಗಿರುವ ಸ್ಮಾರ್ಟ್​ ಫೋನ್​ ಜಾಗವನ್ನು ಈ ಎಐ ಪಿನ್​ಗಳು ಆವರಿಸಬಹುದು ಎಂದು ಅಂದಾಜಿಸಲಾಗಿದೆ.

Humane Launches AI pin No Apps No screen only voice here is all information

Comments are closed.