ಕೊರೋನಾ ಲಾಕ್ ಡೌನ್ ತೆರವಿನ ಬಳಿಕ ಖುಷಿ ಖುಷಿಯಾಗಿ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದ ನಟಿ ಸಾನ್ವಿ ಶ್ರೀವಾಸ್ತವ್ ಗೆ ಅದೃಷ್ಟ ಕೈಕೊಟ್ಟಿದ್ದು, ಶೂಟಿಂಗ್ ವೇಳೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಾನ್ವಿ ಶ್ರೀವಾಸ್ತವ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಕೊಂಚ ಡಾರ್ಕ್ ಶೇಡ್ ಇರುವ ಸಾಹಸಮಯ ಚಿತ್ರದ ಫೈಟಿಂಗ್ ಸೀನ್ ಶೂಟಿಂಗ್ ವೇಳೆ ಸಾನ್ವಿ ಶ್ರೀವಾಸ್ತವ್ ಕೆಳಕ್ಕೆ ಬಿದ್ದಿದ್ದು, ಈ ವೇಳೆ ಅವರ ಕೈಗೆ ಗಾಯವಾಗಿದೆ.

ತಕ್ಷಣ ಚಿತ್ರತಂಡ ಸಾನ್ವಿ ಶ್ರೀವಾಸ್ತವ್ ಅವರಿಗೆ ಪ್ರಥಮ ಚಿಕಿತ್ಸೆ ಕೊಡಿಸಿದ್ದು, ಸಾನ್ವಿ ಶೂಟಿಂಗ್ ಮುಂದುವರೆಸಲು ಆಸಕ್ತರಾಗಿದ್ದರೂ ಚಿತ್ರತಂಡ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದೆ. ಸದ್ಯ ಸಿನಿಮಾ ಶೂಟಿಂಗ್ ಸ್ಥಗಿತಗೊಂಡಿದೆ.

ಬ್ಯಾಂಗ್ ಸಿನಿಮಾದಲ್ಲಿ ಸಾನ್ವಿ ಶ್ರೀವಾಸ್ತವ್ ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದೇ ಸೀನ್ ಶೂಟಿಂಗ್ ವೇಳೆ ಅವಘಡ ನಡೆದಿದೆ. ಯುಕೆ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಪೂಜಾ ವಸಂತ ಕುಮಾರ್ ಹಾಗೂ ವಸಂತ್ ಕುಮಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಶ್ರೀಗಣೇಶ್ ಪರಶುರಾಮ್ ಸಿನಿಮಾ ನಿರ್ದೇಶಿಸುತ್ತಿದ್ದು, ರಿತ್ವಿಕ್ ಮುರುಳಿಧರ್ ನಟನೆ ಜೊತೆ ಸಂಗೀತ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಯೋಗರಾಜ್ ಭಟ್ ಸಾಹಿತ್ಯ ರಚಿಸಿದ್ದಾರೆ. ಚೇತನ್ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡದ ಜೊತೆ ತೆಲುಗಿನಲ್ಲೂ ಏಕಕಾಲದಲ್ಲಿ ಬ್ಯಾಂಗ್ ಸಿನಿಮಾ ತೆರೆಗೆ ಬರಲಿದೆ.