Helicopter Crash : ಹೆಲಿಕಾಪ್ಟರ್‌ ಪತನ, ನಾಲ್ವರ ದುರ್ಮರಣ

ಕ್ಯಾಲಿಫೋರ್ನಿಯಾ : ಹೆಲಿಕಾಪ್ಟರ್‌ವೊಂದು ಪತನವಾಗಿ ನಾಲ್ವರು ಸಾವನ್ನಪ್ಪಿರುವ ಘಟನೆ ಕ್ಯಾಲಿಫೋರ್ನಿಯಾದ ಕೊಲುಸಾ ಕೌಂಟಿಯಲ್ಲಿ ನಡೆದಿದೆ.

ಮಧ್ಯಾಹ್ನ ಸುಮಾರು 1:15 ರ ಸುಮಾರಿಗೆ ರಾಬಿನ್ಸನ್ ಆರ್ 66 ಹೆಸರಿನ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. ಯುಎಸ್ ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ ಪ್ರಕಾರ, ಸ್ಯಾಕ್ರಮೆಂಟೊದ ಉತ್ತರದ ಕೌಂಟಿಯ ದೂರದ ಪ್ರದೇಶದಲ್ಲಿ ಪತನವಾಗಿದ್ದು, ಹೆಲಿಕಾಫ್ಟರ್‌ನಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದಾರೆ.

ಕ್ಯಾಲಿಫೋರ್ನಿಯಾದ ಕೊಲುಸಾ ಬಳಿ ನಡೆದಿರುವ ರಾಬಿನ್ಸನ್ ಆರ್ 66 ಹೆಲಿಕಾಪ್ಟರ್ ಅಪಘಾತದ ಬಗ್ಗೆ ತನಿಖೆ ನಡೆಯುತ್ತಿದೆ. ಸುಮಾರು ಹದಿನೈದು ದಿನಗಳಲ್ಲಿ ತನಿಖೆಯ ಮೊದಲ ವರದಿ ಲಭ್ಯವಾಗಲಿದೆ. ನಂತರ ಒಂದು ವರ್ಷದಿಂದ ಎರಡು ವರ್ಷದ ಒಳಗೆ ಸಂಪೂರ್ಣ ವರದಿ ನೀಡುವ ಸಾಧ್ಯತೆಯಿದೆ. ಸದ್ಯಕ್ಕೆ ಹೆಲಿಕಾಪ್ಟರ್ ಪತನಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ.

Comments are closed.