Haripriya: ಕಿರುತೆರೆಗೆ ಬೆಲ್ ಬಾಟಂ ಬೆಡಗಿ…! ಹರಿಪ್ರಿಯಾ ಚಿತ್ತ ರಿಯಾಲಿಟಿ ಶೋನತ್ತ….!!

ಕೊರೋನಾದಿಂದ ಬಿಗ್ ಬಜೆಟ್ ಚಿತ್ರಗಳು ಸೆಟ್ಟೇರುತ್ತಿಲ್ಲ. ರೆಡಿಯಾಗಿರೋ ಸಿನಿಮಾಗಳು ಚಿತ್ರಮಂದಿರಕ್ಕೆ ಬರುತ್ತಿಲ್ಲ. ಹೀಗಾಗಿ ಸ್ಟಾರ್ ನಟ-ನಟಿಯರು ನಿಧಾನಕ್ಕೆ ಕಿರುತೆರೆಯತ್ತ ಮುಖಮಾಡುತ್ತಿದ್ದಾರೆ. ಪ್ರಜ್ವಲ್ ದೇವರಾಜ್ ಸ್ಮಾಲ್ ಸ್ಕ್ರೀನ್ ಗೆ ಎಂಟ್ರಿಕೊಟ್ಟ ಬೆನ್ನಲ್ಲೇ ಬೆಲ್ ಬಾಟಂ ಬೆಡಗಿಯೂ ಕಿರುತೆರೆಯತ್ತ ಚಿತ್ತ ಹರಿಸಿದ್ದಾರೆ.

ಹೌದು ಇದೇ ಮೊದಲ ಬಾರಿಗೆ ಚಂದನವನದ ಬಹುಬೇಡಿಕೆಯ ನಟಿ, ಕ್ಲಾಸ್ ಹಾಗೂ ಮಾಸ್ ಹೀರೋಯಿನ್ ಎನ್ನಿಸಿರುವ ಹರಿಪ್ರಿಯಾ ಕಿರುತೆರೆಯತ್ತ ಚಿತ್ತ ಹರಿಸಿದ್ದಾರೆ. ಮನೋರಂಜನಾ ವಾಹಿನಿಯ ರಿಯಾಲಿಟಿ ಶೋವೊಂದರ ಜಡ್ಜ್ ಸ್ಥಾನಕ್ಕೆ ಹರಿಪ್ರಿಯಾ ಆಯ್ಕೆಯಾಗಿದ್ದು, ಸದ್ಯದಲ್ಲೇ ಶೋ ಗ್ರ್ಯಾಂಡ್ ಓಫನಿಂಗ್ ಗೆ ಸಿದ್ಧವಾಗಿದೆ.

ಸುವರ್ಣ ವಾಹಿನಿ ಪ್ರಸ್ತುತ ಪಡಿಸುತ್ತಿರುವ ಡ್ಯಾನ್ಸ್ ರಿಯಾಲಿಟಿ ಶೋವೊಂದರ ಜಡ್ಜ್ ಆಗಿ ಡೈನಾಮಿಕ್ ಪ್ರಿನ್ಸ್ ಕಿರುತೆರೆ ಎಂಟ್ರಿಗೆ ಸಿದ್ಧವಾಗಿದ್ದರು. ಈಗ ಬಂದಿರೋ ಲೇಟೆಸ್ಟ್ ಅಪ್ಡೇಟ್ ಪ್ರಕಾರ ಇದೇ ಶೋಗೆ ಹರಿಪ್ರಿಯಾ ಕೂಡ ನಿರ್ಣಾಯಕರಾಗಿ ಆಯ್ಕೆಯಾಗಿದ್ದಾರೆ.

ಹರಿಪ್ರಿಯಾ, ಪ್ರಜ್ವಲ್ ದೇವರಾಜ್ ಜೊತೆ ಕೊರಿಯೋಗ್ರಾಫರ್ ಎ.ಹರ್ಷ ಕೂಡ ನಿರ್ಣಾಯಕರಾಗಿ ಕೆಲಸ ಮಾಡಲಿದ್ದಾರೆ. ಈಗಾಗಲೇ ಡ್ಯಾನ್ಸ ರಿಯಾಲಿಟಿ ಶೋ ಸಖತ್ ಸದ್ದು ಮಾಡ್ತಿದ್ದು, ಹರಿಪ್ರಿಯಾ, ಪ್ರಜ್ವಲ್ ಕೂಡ ತಂಡದಲ್ಲಿರೋದರಿಂದ ಸಹಜವಾಗಿಯೇ ಅಭಿಮಾನಿಗಳ ಕುತೂಹಲ ಹೆಚ್ಚಿದೆ.

2007 ರಲ್ಲಿ ಬದಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ಹರಿಪ್ರಿಯಾ ಬೆಲ್ ಬಾಟಂ, ಸಂಘರ್ಷ ಸೇರಿದಂತೆ ವಿಭಿನ್ನ ಕಥಾಹಂದರದ ಹಲವು ಚಿತ್ರಗಳಲ್ಲಿ ನಟಿಸಿದ್ದು, ಸದ್ಯ ಟಾಪ್ ನಟಿಯರ ಸಾಲಿನಲ್ಲಿ ಸ್ಥಾನ ಪಡೆದಿದ್ದಾರೆ.  

Comments are closed.