ಸೋಮವಾರ, ಏಪ್ರಿಲ್ 28, 2025
HomeCinemaಇನ್ ಸ್ಟಾಗ್ರಾಂ‌ನಲ್ಲೂ ಮಿಂಚಿದ ಸನ್ನಿಧಿ : ವೈಷ್ಣವಿಗೌಡಗೆ 1 ಮಿಲಿಯನ್ ಫಾಲೋವರ್ಸ್

ಇನ್ ಸ್ಟಾಗ್ರಾಂ‌ನಲ್ಲೂ ಮಿಂಚಿದ ಸನ್ನಿಧಿ : ವೈಷ್ಣವಿಗೌಡಗೆ 1 ಮಿಲಿಯನ್ ಫಾಲೋವರ್ಸ್

- Advertisement -

ಅಗ್ನಿ ಸಾಕ್ಷಿ ಧಾರಾವಾಹಿ ಮೂಲಕ ಹಲವು ವರ್ಷಗಳ ಕಾಲ ಕನ್ನಡಿಗರ ಮನಗೆದ್ದ ನಟಿ ವೈಷ್ಣವಿ ಈಗ ಇನ್ ಸ್ಟಾಗ್ರಾಂನಲ್ಲೂ ಹೊಸ ಸಾಧನೆ ಬರೆದಿದ್ದು ಬರೋಬ್ಬರಿ ಒಂದು ಮಿಲಿಯನ್ ಹಿಂಬಾಲಕರನ್ನು ಪಡೆದ ಸಂಭ್ರಮದಲ್ಲಿದ್ದಾರೆ.

ಇನ್ ಸ್ಟಾಗ್ರಾಂನಲ್ಲಿ ತಾವು ಒಂದು ಮಿಲಿಯನ್ ಫಾಲೋವರ್ಸ್ ಪಡೆದಿರುವ ಸಂಗತಿಯನ್ನು ಸ್ವತಃ ವೈಷ್ಣವಿ ಇನ್ ಸ್ಟಾಗ್ರಾಂ ಪೋಸ್ಟ್ ಮೂಲಕ ಹಂಚಿಕೊಂಡಿದ್ದು, 1 ಮಿಲಿಯನ್ ಸಿಂಬಾಲ್ ಹಿಡಿದು ಪೋಟೋಗೆ ಪೋಸ್ ನೀಡಿದ್ದಾರೆ.

vaishnavi sannidi

ಮಾತ್ರವಲ್ಲ ತಮ್ಮ ಈ ಸಾಧನೆಗೆ ಕಾರಣವಾದ ಅಭಿಮಾನಿಗಳಿಗೆ ಧನ್ಯವಾದ ಹೇಳಿರೋ ವೈಷ್ಣವಿ, ಹೌದು ಒಂದು ಮಿಲಿಯನ್. ನನ್ನ ಕಡೆಯಿಂದ ಒಂದು ಮಿಲಿಯನ್ ಹಾರ್ಟ್. ನಿಮ್ಮ ಪ್ರೀತಿ ಬೆಂಬಲಕ್ಕೆ ಧನ್ಯವಾದಗಳು. ಯಾವಾಗಲೂ ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇನ್ನೂ ವೈಷ್ಣವಿ ಗೌಡ ಈ ಸಾಧನೆಗೆ ಸ್ನೇಹಿತರು, ಆಪ್ತರು ವೈಷ್ಣವಿಗೆ ಶುಭಹಾರೈಸಿದ್ದು ನಟಿ ಅಮೂಲ್ಯ ಕೂಡ ಕಂಗ್ರಾಟ್ಸ್ ಹೇಳಿದ್ದಾರೆ.

ಅಗ್ನಿ ಸಾಕ್ಷಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ವೈಷ್ಣವಿ ಸನ್ನಿಧಿ ಪಾತ್ರದ ಮೂಲಕ ಕನ್ನಡಿಗರ ಮನಗೆದ್ದಿದ್ದರು. ಆರು ವರ್ಷಗಳ ಕಾಲ ಸನ್ನಿಧಿ ಪಾತ್ರದಲ್ಲಿ ವೈಷ್ಣವಿ ಮೆಚ್ಚಿದ ಪ್ರೇಕ್ಷಕರಿಗೆ ಸೀರಿಯಲ್ ಕೊನೆಯವರೆಗೂ ವೈಷ್ಣವಿ ಮನಮುಟ್ಟುವ ಅಭಿನಯದ ಮೂಲಕ ಮನಗೆದ್ದಿದ್ದರು.

ಬಳಿಕ ಬಿಗ್ ಬಾಸ್ ಸೀಸನ್ 8 ರಲ್ಲಿ ಪಾಲ್ಗೊಂಡಿದ್ದ ವೈಷ್ಣವಿ ತಮ್ಮ ಸಹನೆ ಹಾಗೂ ಪ್ರತಿಭೆಯಿಂದ ಕೊನೆಯ ಹಂತದವರೆಗೂ ತಲುಪಿದ್ದು ಐದು ಕಂಟೆಸ್ಟೆಂಟ್ ಗಳಲ್ಲಿ ಸ್ಥಾನ ಪಡೆದಿದ್ದರು. ಬಿಗ್ ಬಾಸ್ ನಿಂದ ಹೊರಬಂದ ಬಳಿಕವೂ ಮನಸೆಳೆಯುವ ಪೋಟೋ ಶೂಟ್ ಮೂಲಕ ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದರು.

ಇದನ್ನೂ ಓದಿ : ಪರಮ ಸುಂದರಿಯಾದ್ರು ಅಗ್ನಿಸಾಕ್ಷಿ ಚೆಲುವೆ: ವೈಷ್ಣವಿ ಡ್ಯಾನ್ಸ್ ಗೆ ಫ್ಯಾನ್ಸ್ ಫಿದಾ

ಇದನ್ನೂ ಓದಿ : ಇಷ್ಟು ದಿನ ಒಂಟಿಯಾಗಿದ್ದೇ ಈಗ ಜಂಟಿಯಾಗೋಕೆ ಕಾದಿದ್ದೇನೆ…! ಸಪ್ತಪದಿ ತುಳಿಯೋಕೆ ಸಿದ್ಧ ಎಂದ ಅಗ್ನಿಸಾಕ್ಷಿ ಸುಂದರಿ…!!

ಇದನ್ನೂ ಓದಿ : ಪಡ್ಡೆ ಹುಡುಗರ ಹೃದಯಕ್ಕೆ ಕಿಚ್ಚಿಟ್ಟ ಅಗ್ನಿಸಾಕ್ಷಿಯ ಸನ್ನಿಧಿ !

( Agni Sakshi Sannidi Shine in Instagram: 1 million followers to Vaishnavi Gowda )

RELATED ARTICLES

Most Popular