ಪತ್ರಿಕೆ ಸಂಪಾದಕನ ಕುಟುಂಬದ ಐವರು ಆತ್ಮಹತ್ಯೆ : ಐಎಎಸ್‌ ಕನಸು ಕಂಡವರು ಸಾವಿಗೆ ಶರಣಾಗಿದ್ಯಾಕೆ

ಬೆಂಗಳೂರು : ಪತ್ರಿಕೆಯ ಸಂಪಾದಕನೋರ್ವನ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಐದು ದಿನಗಳ ಕಾಲ ಹಾಲು, ಆಹಾರ ಸಿಗದೆ ಒಂಬತ್ತು ತಿಂಗಳ ಮಗು ವೊಂದು ಸಾವನ್ನಪ್ಪಿರುವ ಧಾರುಣ ಘಟನೆ ಸಿಲಿಕಾನ್‌ ಸಿಟಿ ಬೆಂಗಳೂರಿನ ತಿಗಳರ ಪಾಳ್ಯದಲ್ಲಿ ನಡೆದಿದೆ. ಅದೃಷ್ಟವಶಾತ್‌ ಎರಡೂವರೆ ವರ್ಷ ಮಗುವೊಂದು ಪ್ರಾಣಾಪಾಯದಿಂದ ಪಾರಾಗಿದೆ.

ಭಾರತಿ (50 ವರ್ಷ), ಮಗಳು ಸಿಂಚನ(33 ವರ್ಷ), 2ನೇ ಮಗಳು ಸಿಂಧುರಾಣಿ (30 ವರ್ಷ), ಮಗ ಮಧುಸಾಗರ್(27 ವರ್ಷ) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಅಲ್ಲದೇ 9 ತಿಂಗಳ ಮಗು ಸಾವನ್ನಪ್ಪಿದೆ. ತಿಗಳರಪಾಳ್ಯದಲ್ಲಿ ವಾಸವಿದ್ದ ಸ್ಥಳೀಯ ಪತ್ರಿಕೆ ಸಂಪಾದಕ ಶಂಕರ್ ಪತ್ನಿ ಹಾಗೂ ಮಕ್ಕಳು ಎಂದು ಗುರುತಿಸಲಾಗಿದೆ.

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸಿಂಧೂರಾಣಿ ತನ್ನ ಒಂಬತ್ತು ತಿಂಗಳ ಮಗುವಿಗೆ ಹಾಲುಣಿಸಿದ್ದಾಳೆ. ನಂತರ ಮಗುವನ್ನು ಮಲಗಿಸಿದ್ದಾಳೆ. ಅಲ್ಲದೇ ಎರಡೂವರೆ ವರ್ಷದ ಸಿಂಚನಾಗೆ ಕೂಡ ಊಟ ಮಾಡಿಸಿ ಮಲಗಿಸಿದ್ದಾರೆ. ನಂತರ ತಾಯಿ ಹಾಗೂ ಮಕ್ಕಳು ಪ್ರತ್ಯೇಕ ಕೋಣೆಗಳಲ್ಲಿ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ. ಆದರೆ ಮಧು ಸಾಗರ್‌ ಎರಡು ದಿನಗಳ ನಂತರ ನೇಣಿಗೆ ಶರಣಾಗಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ನಿದ್ದೆಯಿಂದ ಎದ್ದ ಎರಡೂ ಮಕ್ಕಳು ಅಳುವುದಕ್ಕೆ ಶುರು ಮಾಡಿವೆ. ಆದರೆ ಮಕ್ಕಳ ಸಹಾಯಕ್ಕೆ ಯಾರೂ ಬಾರಲೇ ಇಲ್ಲ. ಒಂಬತ್ತು ತಿಂಗಳ ಮಗು ಹಸಿವಿನಲ್ಲಿಯೇ ಪ್ರಾಣ ಬಿಟ್ಟಿತ್ತು. ಆದ್ರೆ ಎರಡೂವರೆ ವರ್ಷದ ಮಗು ಅದೃಷ್ಟವಶಾತ್‌ ಬದುಕುಳಿದಿದೆ. ಪತ್ನಿ, ಮಕ್ಕಳ ಜೊತೆಗೆ ಜಗಳವಾಡಿಕೊಂಡು ಹೋಗಿದ್ದ ಶಂಕರ್‌ ಮನೆಗೆ ಬಂದು ನೋಡಿದಾಗ ಬಾಗಿಲು ಹಾಕಿತ್ತು. ಹೀಗಾಗಿ ಎರಡು ಬಾರಿ ವಾಪಾಸ್‌ ಹೋಗಿದ್ದಾರೆ. ನಂತರ ಯಾರೂ ಕಾಲ್‌ ರಿಸೀವ್‌ ಮಾಡದೇ ಇರೋದ್ರಿಂದಾಗಿ ಅನುಮಾನಗೊಂಡ ಶಂಕರ್‌, ಮನೆಯ ಕಿಟಕಿ ಗ್ಲಾಸ್‌ ಒಡೆದು ನೋಡಿದ್ದಾರೆ. ಒಳಗಿನಿಂದ ವಾಸನೆ ಬರೋದಕ್ಕೆ ಶುರುವಾಗಿತ್ತು. ನಂತರ ಮನೆಯ ಬಾಗಿಲು ಒಡೆದಾಗ ದುರಂತ ಬೆಳಕಿಗೆ ಬಂದಿದೆ.

ಕೌಟುಂಬಿಕ ಕಲಹಕ್ಕೆ ಕುಟುಂಬವೇ ಬಲಿ

ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಕೌಟುಂಬಿಕ ಕಲಹವೇ ಕಾರಣವೆನ್ನಲಾಗುತ್ತಿದೆ. ಸಂಪಾದಕ ಶಂಕರ್‌ ಹಾಗೂ ಪತ್ನಿ ಮಕ್ಕಳ ಜೊತೆಗೆ ಆಗಾಗ ಜಗಳವಾಗುತ್ತಿತ್ತು. ಇನ್ನು ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆಯಾಗಿದ್ದರೂ ಕೂಡ ಪತಿಯಿಂದ ದೂರವಾಗಿ ತವರು ಸೇರಿದ್ದಾರೆ. ಇದೇ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು ಎನ್ನಲಾಗುತ್ತಿದೆ. ಅದ್ರಲ್ಲೂ ಕಳೆದ ಐದು ದಿನಗಳ ಹಿಂದೆಯಷ್ಟೇ ಶಂಕರ್‌ ಜಗಳ ಮಾಡಿಕೊಂಡು ಮನೆಯಿಂದ ಹೊರ ನಡೆದಿದ್ದರು. ಈ ಹಿಂದೆ ಕೂಡ ಕೌಟುಂಬಿಕ ಕಲಹ ಪೊಲೀಸ್‌ ಠಾಣೆಯ ಮೆಟ್ಟಿಲೇರಿತ್ತು. ಪೊಲೀಸರು ಮಾತುಕತೆಯ ಮೂಲಕ ಸಮಸ್ಯೆ ಪರಿಹಾರ ಮಾಡಿಕೊಳ್ಳುವಂತೆ ಸೂಚನೆಯನ್ನು ನೀಡಿದ್ದರೂ ಎನ್ನಲಾಗುತ್ತಿದೆ.

ಐಎಎಸ್‌ ಕನಸು ಕಂಡವರು ಸಾವಿಗೆ ಶರಣು

ಸಂಪಾದಕ ಶಂಕರ್‌ ಅವರ ಮಕ್ಕಳಿಗೆ ಉತ್ತಮ ವಿದ್ಯಾಬ್ಯಾಸವನ್ನು ಕೊಡಿಸಿದ್ದರು. ಹಿರಿಯ ಮಗಳು ಇಂಜಿನಿಯರಿಂಗ್‌ ಪದವಿ ಪಡೆದುಕೊಂಡಿದ್ರೆ, ಎರಡನೇ ಮಗಳು ಎಂಬಿಎ ಪದವೀಧರೆಯಾಗಿದ್ದಾಳೆ. ಇನ್ನು ಮಗ ಮಧು ಸಾಗರ್‌ ಸಾಫ್ಟವೇರ್‌ ಡೆವಲಪರ್‌ ಆಗಿ ಕೆಲಸ ಮಾಡ್ತಿದ್ದ. ಈ ಪೈಕಿ ಹೆಣ್ಣು ಮಕ್ಕಳಿಬ್ಬರು ಐಎಎಸ್‌ ಆಗುವ ಕನಸು ಕಂಡಿದ್ದರು. ಅಲ್ಲದೇ ಅದಕ್ಕೆ ಬೇಕಾದ ಸಿದ್ದತೆಯನ್ನೂ ಮಾಡಿಕೊಳ್ಳುತ್ತಿದ್ದರು.

ಅನ್ನ, ಆಹಾರವಿಲ್ಲದೇ ಶವದ ಜೊತೆ ಬದುಕಿ ಬಂದ ಮಗು

ಇನ್ನು ಶಂಕರ್‌ ಅವರ ಮೊಮ್ಮಗಳು ಸಿಂಚನಾಳ ಎರಡೂವರೆ ವರ್ಷದ ಮಗಳು ಪ್ರೇಕ್ಷ ಐದು ದಿನಗಳ ಕಾಲ ಅನ್ನ, ನೀರು ಇಲ್ಲದಿದ್ದರೂ ಬದುಕುಳಿದಿದ್ದಾಳೆ. ತಾಯಿ, ಚಿಕ್ಕಮ್ಮ, ಅಜ್ಜಿ ಹಾಗೂ ಮಾವನ ಶವದ ನಡುವಲ್ಲೇ ಐದು ದಿನಗಳ ಕಾಲ ಬದುಕಿದ್ದಾಳೆ. ಆಹಾರ ಹಾಗೂ ಭಯದಿಂದ ಆಕೆ ಕೂಡಿಕೊಂಡಿದ್ರೂ ಕೂಡ ಮನೆ ಸಂಪೂರ್ಣವಾಗಿ ಸೌಂಡ್‌ ಪ್ರೂಪ್‌ ಆಗಿದ್ದರಿಂದ ಹೊರಗಿನ ಜನರಿಗೆ ಇದು ಗೊತ್ತೇ ಆಗಿರಲಿಲ್ಲ.

ಇದನ್ನೂ ಓದಿ : ತಲೆಗೆ ಗುಂಡು ಹಾರಿಸಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ

ಇದನ್ನೂ ಓದಿ : ಡ್ರಗ್ಸ್‌ ಫ್ಯಾಕ್ಟರಿ ಆಯ್ತಾ ಬೆಂಗಳೂರು : ಮನೆಯಲ್ಲಿಯೇ ಸಿದ್ದವಾಗ್ತಿತ್ತು ಡ್ರಗ್ಸ್‌, ಸಿಸಿಬಿಯಿಂದ ಮೆಗಾ ರೈಡ್‌

(Bengaluru 5 members of same family committed suicide in Byadarahalli, police save child)

Comments are closed.