Biggboss:ಕ್ಲೈಮ್ಯಾಕ್ಸ್ ಹಂತಕ್ಕೆ ಬಿಗ್ ಬಾಸ್….! ಸೀಸನ್ 8 ಫಿನಾಲೆ ವೀಕ್ ನಲ್ಲೇ ಹೊರಬಿದ್ದ ಶುಭಾ,ಶಮಂತ್….!!

ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಖ್ಯಾತಿಯ ಬಿಗ್ ಬಾಸ್ ಕೊನೆಯ ಹಂತಕ್ಕೆ ತಲುಪಿದೆ. ಇನ್ನೇನು ಗ್ರ್ಯಾಂಡ್ ಫಿನಾಲೆಗೆ ದಿನಗಣನೆ ನಡೆದಿದ್ದು, ಫಿನಾಲೆ ವೀಕ್ ಆರಂಭವಾಗಿದೆ. ಕೊನೆಯ ಹಂತದಲ್ಲಿ ಐವರು ಸ್ಪರ್ಧಿಗಳು ಉಳಿದುಕೊಂಡು ವಾರದ ಮಧ್ಯೆಯೇ ಎಲಿಮಿನೇಶನ್ ನಲ್ಲಿ ಹೊರಬೀಳೋದ್ಯಾರು ಗೆಲ್ಲೋದ್ಯಾರು ಎಂಬ ಕುತೂಹಲ ಮನೆ ಮಾಡಿದೆ.

ಬಿಗ್ ಬಾಸ್ ವಾರದ ಕತೆ ಕಿಚ್ಚನ ಜೊತೆಯಲ್ಲಿ ಶನಿವಾರ ನಟಿ ಶುಭಾಪೂಂಜಾ ಹೊರಬಂದ್ರೇ, ಭಾನುವಾರ ಬ್ರೋಗೌಡ ಖ್ಯಾತಿಯ ಶಮಂತ್ ಹೊರ ಬಿದ್ದಿದ್ದಾರೆ. ಅಲ್ಲಿಗೆ ಶಮಂತ್ ತಮ್ಮ 113 ದಿನಗಳ ಬಿಗ್ ಬಾಸ್ ಜರ್ನಿಯನ್ನು ಕೊನೆಗೊಳಿಸಿದ್ದು, 47 ದಿನಕ್ಕೆ ಮೊದಲ ಬಾರಿಗೆ ಎಲಿಮಿನೇಟ್ ಆಗಿದ್ದು ಶಮಂತ್, ಗ್ರ್ಯಾಂಡ್ ಫಿನಾಲೆಗೆ ವಾರವಿರುವಾಗ ಹೊರಬಂದಿದ್ದಾರೆ.

ಇನ್ನು ಬಿಗ್ ಬಾಸ್ ಮನೆಯಲ್ಲಿ ಗೆಲ್ಲುವ ಕುದುರೆ ಎಂದೇ ಹೇಳಲಾಗುತ್ತಿದ್ದ ಶುಭಾ ಪೂಂಜಾ ಕೂಡ ಟಾಸ್ಕ್ ಗಳಲ್ಲಿ ತೋರಿದ ನಿರಾಸಕ್ತಿ ಕಾರಣಕ್ಕೆ ಎಲಿಮಿನೇಟ್ ಆಗಿ ಹೊರಬಿದ್ದಿದ್ದಾರೆ. ಇನ್ನು ಗ್ರ್ಯಾಂಡ್ ಫಿನಾಲೆ ವೀಕ್ ಆರಂಭವಾಗಿದ್ದು, ವಾರದ ಮಧ್ಯೆ ನಡೆಯೋ ಎಲಿಮಿನೇಶನ್ ನಲ್ಲಿ ದಿವ್ಯಾ ಉರುಡುಗ ಅಥವಾ ದಿವ್ಯಾ ಸುರೇಶ್ ಹೊರಬೀಳೋದು ಖಚಿತ ಎನ್ನಲಾಗ್ತಿದೆ.

ಒಮ್ಮೆಯೂ ಕ್ಯಾಪ್ಟನ್ ಆಗದ ವೈಷ್ಣವಿ, ಪ್ರಶಾಂತ್ ಸಂಬರಗಿ. ಮಂಜುಪಾವಗಡ್. ಕೆ.ಪಿ.ಅರವಿಂದ್ ಸೇಫ್ ಆಗಿದ್ದಾರೆ. ಮಂಗಳವಾರ ರಾತ್ರಿ ನಡೆಯೋ ರಹಸ್ಯ ಎಲಿಮಿನೇಶನ್ ನಲ್ಲಿ ದಿವ್ಯಾ ಸುರೇಶ್ ಅಥವಾ ದಿವ್ಯಉರುಡುಗ ಹೊರಬಿದ್ದರೇ ಐವರು ಸ್ಪರ್ಧಿಗಳ ನಡುವೆ ಟೈಟಲ್ ಗಾಗಿ ಹಣಾಹಣಿ ನಡೆಯಲಿದೆ.

ಕೊನೆಯ ವಾರದ ಟಾಸ್ಕ್ ಗಳು ಕುತೂಹಲ ಮೂಡಿಸಿದ್ದು, ಬಿಗ್ ಬಾಸ್ ಸೀಸನ್ 8 ವಿನ್ನರ್ ಪಟ್ಟಕ್ಕಾಗಿ ಕೆ.ಪಿ.ಅರವಿಂದ್ ಹಾಗೂ ಮಂಜುಪಾವಗಡ್ ನಡುವೆ ಹಣಾಹಣಿ ನಡೆಯಲಿದೆ ಎನ್ನಲಾಗುತ್ತಿದೆ.  

Comments are closed.