Tokyo Olympics : ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದ ಭಾರತ ಮಹಿಳಾ ಹಾಕಿ ತಂಡ

ಟೋಕಿಯೊ : ಭಾರತೀಯ ವನಿತೆಯರ ಹಾಕಿ ತಂಡ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದೆ. ಮೂರು ಬಾರಿಯ ಚಾಂಪಿಯನ್‌ ಆಸ್ಟ್ರೇಲಿಯಾ ತಂಡವನ್ನು ರೋಚಕವಾಗಿ ಸೋಲಿಸುವ ಮೂಲಕ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಮೂಲಕ ಒಲಿಂಪಿಕ್ಸ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.

49 ವರ್ಷಗಳ ಅಂತರದ ನಂತರ ಭಾರತೀಯ ಪುರುಷರ ತಂಡ ಒಲಿಂಪಿಕ್ ಸೆಮಿಫೈನಲ್ ಪ್ರವೇಶಿಸಿದ ಬೆನ್ನಲ್ಲೇ ಮಹಿಳಾ ಹಾಕಿ ತಂಡ ಕೂಡ ಮತ್ತೊಂದು ದಾಖಲೆ ಬರೆದಿದೆ. ಪ್ರಬಲ ಎದುರಾಳಿ ಆಸ್ಟ್ರೇಲಿಯಾ ತಂಡವನ್ನು ಒಂದು ಗೋಲುಗಳಿಂದ ಬಗ್ಗು ಬಡಿಯುವ ಮೂಲಕ ವನಿತೆಯರು ಪದಕದ ನಿರೀಕ್ಷೆಯನ್ನು ಹುಟ್ಟು ಹಾಕಿದ್ದಾರೆ.

ಪಂದ್ಯದ ಆರಂಭದಿಂದಲೂ ಆಸ್ಟೇಲಿಯಾ ತಂಡಕ್ಕೆ ಪ್ರಬಲ ಪೈಪೋಟಿಯನ್ನು ನೀಡುತ್ತಾ ಬಂದಿದ್ದ ಭಾರತೀಯ ವನಿತೆಯರು ಅಂತಿಮವಾಗಿ ಗೆಲುವನ್ನು ಧಕ್ಕಿಸಿ ಕೊಂಡಿದ್ದಾರೆ. ವಿಶ್ವದ ನಂ.2 ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾವನ್ನು ಭಾರತೀಯ ಮಹಿಳೆಯರು ಸೋಲಿಸಿದ ಬೆನ್ನಲ್ಲೇ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

Comments are closed.