ಬಿಗ್ ಬಾಸ್ ಶೋ ಗ್ರ್ಯಾಂಡ್ ಫಿನಾಲೆಗೆ ದಿನಗಣನೆ….! ವಿನ್ನರ್ ಯಾರು? ಇಲ್ಲಿದೆ ಡಿಟೇಲ್ಸ್…!!

ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ರ ಮುಕ್ತಾಯಕ್ಕೆ ದಿನಗಣನೆ ಆರಂಭವಾಗಿದ್ದು, ಇನ್ನೆರಡು ವಾರದಲ್ಲಿ ಶೋ ಮುಕ್ತಾಯಗೊಳ್ಳಲಿದೆ. ಈ ಮಧ್ಯೆ ಸೀಸನ್ 8 ರ ವಿನ್ನರ್ ಯಾರು ಎಂಬ ಚರ್ಚೆಗೆ ಉತ್ತರ ಸಿಕ್ಕಿದ್ದು, ಆ ಅದೃಷ್ಟಶಾಲಿ ಮಂಜು ಪಾವಗಡ್ ಎನ್ನಲಾಗುತ್ತಿದೆ.

ಈಗಾಗಲೇ ಎಲಿಮಿನೇಶನ್ ಗಳ ಕೊನೆಗೊಳ್ಳುವ ಹಂತ ತಲುಪಿದ್ದು, ಕೆ.ಪಿ.ಅರವಿಂದ್, ಮಂಜುಪಾವಗಡ್, ವೈಷ್ಣವಿ ಹಾಗೂ ದಿವ್ಯಾ ಉರುಡುಗ ಫೈನಲ್ ತಲುಪೋದು ಬಹುತೇಕ ಖಚಿತ ಎನ್ನಲಾಗಿದೆ. ಈ ಪೈಕಿ ಮಂಜು ಪಾವಗಡ್  ವಿನ್ನರ್ ಎಂಬ ಸುದ್ದಿ ಖಚಿತ ಮೂಲಗಳಿಂದ ಕೇಳಿಬರುತ್ತಿದೆ.

ಇತ್ತೀಚಿಗೆ ಮಾಧ್ಯಮಗಳ ಜೊತೆ ಮಾತನಾಡಿನ ಬಿಗ್ ಬಾಸ್ ಶೋ  ನಿರ್ದೇಶಕ ಶ್ರೀನಿವಾಸ್ ಮಂಜು ಪಾವುಗಡ್ ಬಗ್ಗೆ ತುಂಬ ಒಳ್ಳೆಯ ಮಾತುಗಳನ್ನಾಡಿದ್ದು, ಮಂಜು ಒಳ್ಳೆಯ ವಿನಮ್ರ ಹಿನ್ನೆಲೆಯ ಸಿಂಪಲ್ ವ್ಯಕ್ತಿ ಎಂದು ಹೇಳಿದ್ದು ಹೀಗಾಗಿ ಮಂಜು ಪಾವುಗಡ್ ತಲೆಗೆ ಬಿಗ್ ಬಾಸ್ ಕೀರಿಟ ತೊಡಿಸೋದು ಬಹುತೇಕ ಖಚಿತವಾಗಿದೆ.

https://kannada.newsnext.live/sannidhi-agnisakshi-vishnavi-gowda-hot-photo-shoot/

ಕೆ.ಪಿ.ಅರವಿಂದ್ ಹಾಗೂ ಮಂಜು ಪಾವುಗಡ ನಡುವೆ ಫೈನಲ್  ಹಂತದಲ್ಲಿ ಜಟಾಪಟಿ ನಡೆಯೋದು ಖಚಿತ ಎನ್ನಲಾಗ್ತಿದೆ. ಕೆ.ಪಿ.ಅರವಿಂದ್ ಹಾಗೂ ದಿವ್ಯಾ ಉರುಡುಗ ನಡುವಿನ ಲವ್ ಸ್ಟೋರಿ ಪ್ರೇಕ್ಷಕರ ಮನ ಗೆದ್ದಿದೆ. ಆದರೆ ಆರಂಭದಲ್ಲಿ ಮಂಜು ಪಾವಗಡ್ ಹೆಸರು ದಿವ್ಯಾ ಸುರೇಶ್ ಜೊತೆ ಕೇಳಿಬಂದಿದ್ದರೂ ಬಳಿಕ ಮಂಜು ಪಾವುಗಡ್  ದಿವ್ಯಾ ಸುರೇಶ್ ಜೊತೆ ಅಂತರ ಕಾಯ್ದುಕೊಂಡು ಗಂಭೀರವಾಗಿ ಆಟವಾಡುತ್ತಿದ್ದಾರೆ.

ಹೀಗಾಗಿ ಈ ಭಾರಿ ಕಿರೀಟ್ ಮಂಜು ಪಾವುಗಡ್ ತಲೆಗೇರಲಿದೆ ಎನ್ನಲಾಗ್ತಿದೆ. ಏನೇ ಆದರೂ ಸೋಷಿಯಲ್ ಮೀಡಿಯಾದಲ್ಲಿ ಫೈನಲ್ ಹಂತದ ಸ್ಪರ್ಧಿಗಳ ಹೆಸರಿನಲ್ಲಿ ಅಭಿಯಾನ ಜೋರಾಗಿದ್ದು, ಯಾರು ವಿನ್ನರ್ ಅನ್ನೋದನ್ನು ಅರಿಯಲು ಇನ್ನೆರಡು ವಾರ ಕಾಯೋದು ಅನಿವಾರ್ಯವಾಗಲಿದೆ.

Comments are closed.