ಸ್ಯಾಂಡಲ್‌ವುಡ್‌ ಕ್ರೇಜಿ ಕ್ವೀನ್‌ ರಕ್ಷಿತಾ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ ಪತಿ ಪ್ರೇಮ್‌

ಸ್ಯಾಂಡಲ್‌ವುಡ್‌ನಲ್ಲಿ ಕ್ರೇಜಿ ಕ್ವೀನ್‌ ಎಂದೇ ಪ್ರಖ್ಯಾತಿ ಪಡೆದಿರುವ ನಟಿ ರಕ್ಷಿತಾಗೆ (Crazy Queen Rakshita’s birthday) ಇಂದು (ಮಾರ್ಚ್‌ 31) 39 ರ ವಸಂತಕ್ಕೆ ಕಾಲಿಟ್ಟಿದ್ದಾರೆ. ನಟಿ ರಕ್ಷಿತಾ ನಟ ಪುನೀತ್‌ ರಾಜ್‌ಕುಮಾರ್‌ ಅಭಿನಯದ ಅಪ್ಪು ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ನಂತರ ಅನೇಕ ಸೂಪರ್‌ಹಿಟ್‌ ಸಿನಿಮಾಗಳಲ್ಲಿ ಸ್ಟಾರ್‌ ನಟರ ಜೊತೆ ನಟಿಸಿ ಅಭಿನಯದಲ್ಲಿ ಸೈ ಎಸಿನಿಕೊಂಡಿದ್ದಾರೆ. ನಟಿ ರಕ್ಷಿತಾ ಹುಟ್ಟುಹಬ್ಬಕ್ಕೆ ಕುಟುಂಬಸ್ಥರು, ಸ್ನೇಹಿತರು, ಸಿನಿಗಣ್ಯರು, ಅಭಿಮಾನಿಗಳು ಸೇರಿದಂತೆ ಅನೇಕರು ಶುಭ ಕೋರಿದ್ದಾರೆ. ಅಷ್ಟೇ ಅಲ್ಲದೇ ನಟಿ ರಕ್ಷಿತಾ ಗಂಡ ಪ್ರೇಮ್‌ ಅವರು ಬಹಳ ವಿಶೇಷವಾಗಿ ಶುಭ ಹಾರೈಸಿದ್ದಾರೆ.

ನಿರ್ದೇಶಕ ಪ್ರೇಮ್‌ ತಮ್ಮ ಸಾಮಾಜಿಕ ಜಾಲತಾಣದಲ್ಲಿ, “ನಿಮಗೆ ಹುಟ್ಟುಹಬ್ಬದ ಶುಭಾಶಯಗಳು ರಕ್ಷಿತಾ ಪ್ರೇಮ್ ಕ್ರೇಜಿ ಡಾನ್”‌ ಎಂದು ಹುಟ್ಟುಹಬ್ಬ ಸಂಭ್ರಮದ ಪೋಟೋಗಳನ್ನು ಹಂಚಿಕೊಳ್ಳುವ ಮೂಲಕ ಬಹಳ ವಿಶೇಷವಾಗಿ ಶುಭ ಹಾರೈಸಿದ್ದಾರೆ. ನಟಿ ರಕ್ಷಿತಾ ಕನ್ನಡ ಸಿನಿರಂಗದ ಹೆಸರಾಂತ ಛಾಯಾಗ್ರಾಹಕ ಬಿ.ಸಿ. ಗೌರಿಶಂಕರ್‌ ಹಾಗೂ ತಾಯಿ ಮಮತಾ ರಾವ್‌ ಅವರ ಮಗಳಾಗಿ ಜನಿಸಿದ್ದರು. ಅವರು ಬಾಲ್ಯವನ್ನು ಬೆಂಗಳೂರಿನಲ್ಲಿ ಕಳೆದಿದ್ದಾರೆ. ನಟಿ ರಕ್ಷಿತಾ ಅವರು ಸಿನಿಮಾಗಳಿಗೆ ಪ್ರವೇಶಿಸುವ ಮೊದಲು ಸುಮಾರು 15 ದಿನಗಳ ಕಾಲ ಕೃಷ್ಣಮೂರ್ತಿ ಕವತಾರ್ ಅವರ ಮಾರ್ಗದರ್ಶನದಲ್ಲಿ ನಟನಾ ಕೋರ್ಸ್‌ಗೆ ಒಳಗಾಗಿದ್ದರು.

ಆ ಸಮಯದಲ್ಲಿ ಬೆಂಗಳೂರಿನ ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜಿನಲ್ಲಿ ಕಂಪ್ಯೂಟರ್ ಅಪ್ಲಿಕೇಷನ್ಸ್ (BCA) ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಿದ್ದ ಅವರು, 2001 ರಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿಗಾಗಿ ಪತ್ರ ವ್ಯವಹಾರ ಕೋರ್ಸ್‌ಗೆ ದಾಖಲಾಗುವ ಮೊದಲು ಮೊದಲ ವರ್ಷದಲ್ಲಿ ನಿಲ್ಲಿಸಿದರು. ಈ ಸಮಯದಲ್ಲಿ, ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಅವರಿಂದ ಅಪ್ಪು (2002) ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಎದುರು ನಾಯಕಿಯಾಗಿ ನಟಿಸಲು ಅವರು ಸಹಿ ಹಾಕಿದರು. ನಂತರ ಪಾರ್ವತಮ್ಮ ರಾಜ್‌ಕುಮಾರ್‌ ಅವರಿಗೆ ರಕ್ಷಿತಾ ಎಂದು ಹೆಸರಿಟ್ಟಿದ್ದಾರೆ.

ರಕ್ಷಿತಾ ತಮ್ಮ ವೃತ್ತಿಜೀವನವನ್ನು ಕನ್ನಡ ಸಿನಿಮಾ ಅಪ್ಪು ಮೂಲಕ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಪ್ರಾರಂಭಿಸಿದರು. ಕಲಾಸಿಪಾಳ್ಯ ದೊಡ್ಡ ಹಿಟ್ ಆದಾಗ ಕನ್ನಡದ ಟಾಪ್ ಹೀರೋಯಿನ್ ಆಗಿ ಬಡ್ತಿ ಪಡೆದುಕೊಂಡಿರು. ಪುನೀತ್ ರಾಜ್‌ಕುಮಾರ್ ಹೊರತುಪಡಿಸಿ, ಅವರು ಆ ಕಾಲದ ಎಲ್ಲಾ ಅಗ್ರ ಕನ್ನಡ ನಾಯಕರಾದ ಉಪೇಂದ್ರ, ಸುದೀಪ್, ದರ್ಶನ್ ಮತ್ತು ಆದಿತ್ಯರೊಂದಿಗೆ ಯಶಸ್ವಿ ಜೋಡಿಯಾಗಿ ನಟಿಸಿದ್ದಾರೆ.

ಇದನ್ನೂ ಓದಿ : ರಾಮನವಮಿ 2023 : ನಟ ಪ್ರಭಾಸ್‌ ಅಭಿನಯದ “ಆದಿಪುರುಷ” ಸಿನಿಮಾದ ಹೊಸ ಪೋಸ್ಟರ್‌ ರಿಲೀಸ್

ಇದನ್ನೂ ಓದಿ : ಡಾಲಿ ಧನಂಜಯ ಅಭಿನಯದ “ಗುರುದೇವ ಹೊಯ್ಸಳ” ಸಿನಿಮಾಕ್ಕೆ ಶುಭ ಹಾರೈಸಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌

ನಟಿ ರಕ್ಷಿತಾ 2007ಕ್ಕೆ ನಿರ್ದೇಶಕ ಪ್ರೇಮ್ ಅವರನ್ನು ವಿವಾಹವಾದರು. ನಿರ್ದೇಶಕ ಪ್ರೇಮ್ ಅವರೊಂದಿಗಿನ ವಿವಾಹದ ನಂತರ, ಅವರು ತಮ್ಮ ನಟನಾ ಕಾರ್ಯಗಳನ್ನು ನಿಲ್ಲಿಸಿದ್ದು, ಆದರೆ ನಂತರ ದಿನಗಳಲ್ಲಿ ಸಿನಿಮಾ ನಿರ್ಮಾಣವನ್ನು ವಹಿಸಿಕೊಂಡಿದ್ದಾರಡೆ. ಅವರು ಪ್ರೇಮ್ ನಿರ್ದೇಶನದ ಪ್ರತಿಷ್ಠಿತ ಜೋಗಯ್ಯ ಸಿನಿಮಾಕ್ಕೆ ನಿರ್ಮಾಪಕರಾದರು. ಇತ್ತೀಚೆಗೆ ಕಿರುತೆರ ರಿಯಾಲಿಟಿ ಶೋಗಳಲ್ಲಿ ಜೆಡ್ಜ್‌ ಆಗಿ ಕಾಣಿಸಿಕೊಂಡು, ಕರ್ನಾಟಕದ ಮನೆ ಮಗಳಾಗಿದ್ದಾರೆ.

Sandalwood crazy queen Rakshita’s birthday was specially celebrated by her husband Prem.

Comments are closed.