ಕನ್ನಡ ಚಿತ್ರರಂಗದ ಖ್ಯಾತ ನಟಿ ರಚಿತಾ ರಾಮ್ (Rachita Ram) ಹುಟ್ಟುಹಬ್ಬದ ಸಂಭ್ರಮ. ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರಾದ ರಚಿತಾಗೆ ಅಭಿಮಾನಿಗಳು, ಬಂಧುಗಳು ಹಾಗೂ ಸೆಲೆಬ್ರಿಟಿಗಳು ಶುಭ ಕೋರುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ರಚಿತಾ ರಾಮ್ ಅವರ ಮನೆಗೆ ವಿಶ್ ಮಾಡಲು ಅಭಿಮಾನಿಗಳ ದಂಡೇ ಹರಿದುಬರುತ್ತಿದೆ. ಕೇಕ್, ಹಾರ, ಉಡುಗೊರೆಗಳನ್ನು ನೀಡುವ ಮೂಲಕ ನೆಚ್ಚಿನ ನಟಿಗೆ ಅಭಿಮಾನಿಗಳು ಶುಭಾಶಯವನ್ನು ಕೋರುತ್ತಿದ್ದಾರೆ. ಇನ್ನೊಂದೆಡೆ “ಡಿಂಪಲ್ ಕ್ವಿನ್” ಗೆ ಸಿನಿಮಾ ತಂಡಗಳು ವಿಭಿನ್ನ ಪೋಸ್ಟರ್‌ಗಳ ಮೂಲಕ ಶುಭಾಶಯ ಹೇಳುತ್ತಿದ್ದಾರೆ.
Happy Birthday #DimpleQueen @RachitaRamDQ 🎉😍#HappyBirthdayRachitaram#HBDDimpleQueenRachitaRam#rachitaram #rachitaramfans#Kranti #Veeram #Matinee#BadManners pic.twitter.com/m0KHWOI8FO
— Rachitaram Fans (@Rachitaram10) October 3, 2022
ಭಾರತೀಯ ಶಾಸ್ತ್ರೀಯ ಭರತನಾಟ್ಯ ನೃತ್ಯಗಾರ್ತಿಯಾಗಿದ್ದ ರಚಿತಾ ರಾಮ್ (Rachita Ram) ಹಲವಾರು ಕಡೆಗಳಲ್ಲಿ 40ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ. ರಚಿತಾ ರಾಮ್ ಅವರ ತಂದೆ ಸ್ವತಃ ಭಾರತೀಯ ಶಾಸ್ತ್ರೀಯ ಭರತನಾಟ್ಯ ಕಲಾವಿದರಾಗಿದ್ದರು. ಕಿರುತೆರೆಯ “ಅರಸಿ” ಧಾರಾವಾಹಿಯ ಮೂಲಕ ನಟನೆಯನ್ನು ಆರಂಭಿಸಿದ್ದ ರಚಿತಾ, ನಂತರ ದರ್ಶನ್ ಅಭಿನಯದ “ಬುಲ್ ಬುಲ್” ಚಿತ್ರದ ನಾಯಕಿ ಪಾತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದರು. ಮೊದಲ ಸಿನಿಮಾದಲ್ಲಿ ತಮ್ಮ ಅಭಿನಯದ ಮೂಲಕ ಗೆಲುವನ್ನು ಕಂಡಿದ್ರು. ಅಷ್ಟೇ ಅಲ್ಲಾ ಕೆಲವೇ ಸಮಯದಲ್ಲಿ ಅವರು ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಸ್ಟಾರ್ ನಟರಾದ ಶಿವರಾಜ್ ಕುಮಾರ್, ಪುನೀತ್ ರಾಜ್‌ಕುಮಾರ್, ಸುದೀಪ್, ಧ್ರುವ ಸರ್ಜಾ, ದುನಿಯಾ ವಿಜಯ್, ಉಪೇಂದ್ರ ಸೇರಿದಂತೆ ಹಲವು ನಟರ ಜೊತೆಗೆ ರಚಿತಾ ಬಣ್ಣಹಚ್ಚಿದ್ದಾರೆ.
ಸ್ಯಾಂಡಲ್‌ವುಡ್‌ಗೆ ರಚಿತಾರಾಮ್ ಎಂಟ್ರಿ ಕೊಟ್ಟು9 ವರ್ಷಗಳು ಕಳೆದಿದೆ. ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ದಿನೇ ದಿನೇ ರಚಿತಾ ರಾಮ್ ಅಭಿಮಾನಿಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇತ್ತೀಚೆಗಷ್ಟೇ ರಿಲೀಸ್ ಆದ “ಮಾನ್ಸೂನ್ ರಾಗ” ಸಿನಿಮಾದಲ್ಲಿ ವೇಶ್ಯೆ ಪಾತ್ರದ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ.
ಇದನ್ನೂ ಓದಿ : Aishwarya Pise was eliminated :ಮೊದಲವಾರವೇ ಬಿಗ್ಬಾಸ್ ಮನೆಯಿಂದ ಹೊರಬಿದ್ದ ಲೇಡಿ ಬೈಕರ್ ಐಶ್ವರ್ಯಾ ಪಿಸೆ
ಇದನ್ನೂ ಓದಿ : ಸರ್ಜಾ ಫ್ಯಾಮಿಲಿಗೂ ಅಕ್ಟೋಬರ್ ಗೂ ಇದೆ ವಿಶೇಷ ನಂಟು ; ಇದು ಸರ್ಜಾ ಕುಟುಂಬದ ಸ್ಪೆಶಲ್ ಸ್ಟೋರಿ
ರಚಿತಾ ರಾಮ್‌ಗೆ ಟಾಲಿವುಡ್‌ನಲ್ಲಿಯೂ ಬೇಡಿಕೆ ಇರುವುದರಿಂದ ಪರಭಾಷೆ ಸಿನಿರಂಗಕ್ಕೂ ಕಾಲಿಟ್ಟಿದ್ದಾರೆ. ಇವರು ಸ್ಟಾರ್ ನಟರೊಂದಿಗೆ ನಟಿಸುವುದರ ಜೊತೆಗೆ, ಹೊಸ ನಟರ ಜೊತೆಗೂ ಯಾವುದೇ ತಾರತಮ್ಯ ಮಾಡದೇ ನಟಿಸಿ ಸಿನಿಪ್ರೇಕ್ಷಕರ ಮನ ರಂಜಿಸಿದ್ದಾರೆ. ರಚಿತಾರಾಮ್ ನಟನೆ ಜೊತೆಯಲ್ಲಿ ಕಿರುತೆರೆ ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಕೂಡ ಕೆಲಸ ಮಾಡಿದ್ದಾರೆ. ಮಜಾಭಾರತ, ಡ್ರಾಮ್ ಜೂರ್ನಿಯಸ್ ಕಾರ್ಯಕ್ರಮದ ಜಡ್ಜ್ ಆಗುವುದರ ಮೂಲಕ ಕಿರುತೆರೆಯಲ್ಲಿಯೂ ಸಕ್ರೀಯರಾಗಿದ್ದಾರೆ.
Sandalwood Dimple Queen Rachita Ram Birthday: Fans gathered in front of the house