Bharat Jodo Yatra :ರಾಹುಲ್ ಭಾರತ್​ ಜೋಡೋ ಯಾತ್ರೆ ನಿಮಿತ್ತ ಕರ್ನಾಟಕಕ್ಕೆ ಆಗಮಿಸಲಿದ್ದಾರೆ ಸೋನಿಯಾ, ಪ್ರಿಯಾಂಕಾ ಗಾಂಧಿ

ಮೈಸೂರು/ಕೊಡಗು : Bharat Jodo Yatra : ಕಾಂಗ್ರೆಸ್​ನ ಭಾರತ್​ ಜೋಡೋ ಯಾತ್ರೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ನಾಲ್ಕನೇ ದಿನವಾದ ಇಂದು ಭಾರತ್​ ಜೋಡೊ ಯಾತ್ರೆ ರೂವಾರಿ ರಾಹುಲ್​ ಗಾಂಧಿ ಜೊತೆಯಲ್ಲಿ ಕಾಂಗ್ರೆಸ್​ ನಾಯಕರು ಕೂಡ ಭಾಗಿಯಾಗಿದ್ದಾರೆ. ಮುಸ್ಲಿಂ ಮಹಿಳೆಯರಿಂದ ರಾಹುಲ್​ ಗಾಂಧಿಗೆ ಪೋಸ್ಟರ್​ ಮೂಲಕ ಬೆಂಬಲ ಘೋಷಿಸಲಾಗಿದೆ. ಉದ್ಯೋಗಕ್ಕಾಗಿ ನಡಿಗೆ ಎಂದು ರಾಹುಲ್​​ ಜೊತೆ ಹೆಜ್ಜೆ ಹಾಕಿದ್ದಾರೆ. ವಿ ಆರ್​ ವಾಕಿಂಗ್​ ಫಾರ್​ ಜಾಬ್​ ಎಂಬ ಪ್ಲೇ ಕಾರ್ಡ್​ ಹಿಡಿದು ಮೈಸೂರಿನಲ್ಲಿ ಕಾಂಗ್ರೆಸ್​ ಕಾರ್ಯಕರ್ತರು ಹೆಜ್ಜೆ ಹಾಕಿದ್ದಾರೆ.


ಇದೇ ಮೊದಲ ಬಾರಿಗೆ ಭಾರತ್​ ಜೋಡೋ ಯಾತ್ರೆಯಲ್ಲಿ ಸೋನಿಯಾ ಗಾಂಧಿ ಕುಟುಂಬ ರಾಜ್ಯದಲ್ಲಿ ಹೆಜ್ಜೆ ಹಾಕಲಿದೆ. ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್​ ಗಾಂಧಿ, ಪ್ರಿಯಾಂಕ ಗಾಂಧಿ ಎಲ್ಲರೂ ಒಟ್ಟಾಗಿ ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಪಕ್ಷವು ಭಾರತ್​ ಜೋಡೋ ಯಾತ್ರೆಯ ಮೂಲಕ ಜನರ ವಿಶ್ವಾಸವನ್ನು ಗಳಿಸಿಕೊಳ್ಳುವ ಪ್ರಯತ್ನದಲ್ಲಿದೆ.


ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಸೋನಿಯಾ ಗಾಂಧಿ ಮೈಸೂರಿಗೆ ಆಗಮಿಸಲಿದ್ದಾರೆ. ಇಲ್ಲಿಂದ ಹೆಲಿಕಾಪ್ಟರ್​ನಲ್ಲಿ ಸೋನಿಯಾ ಗಾಂಧಿ ಮಡಿಕೇರಿಗೆ ಪ್ರಯಾಣ ಬೆಳೆಸಲಿದ್ದಾರೆ. ಇತ್ತ ರಾಹುಲ್​ ಗಾಂಧಿ ಕೂಡ ತಮ್ಮ ಪಾದಯಾತ್ರೆ ಮುಗಿಸಿ ಕೊಡಗಿಗೆ ಪ್ರಯಾಣ ಬೆಳೆಸಲಿದ್ದಾರೆ. ನಾಳೆ ಹಾಗೂ ನಾಡಿದ್ದು ಭಾರತ್​ ಜೋಡೋ ಯಾತ್ರೆಗೆ ರಜಾ ಇರಲಿದೆ.


ಹೀಗಾಗಿ ನಾಳೆ ಹಾಗೂ ನಾಡಿದ್ದು ಸೋನಿಯಾ ಗಾಂಧಿ ಹಾಗೂ ರಾಹುಲ್​ ಕೊಡಗಿನಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಅಕ್ಟೋಬರ್​ ಆರರಿಂದ ಮಂಡ್ಯ ಜಿಲ್ಲೆಯ ಮಹದೇಶ್ವರಿ ದೇವಸ್ಥಾನದಿಂದ ಮತ್ತೆ ಪಾದಯಾತ್ರೆ ಆರಂಭಗೊಳ್ಳಲಿದೆ. ಮೇಲುಕೋಟೆಯಲ್ಲಿ ರಾಹುಲ್​ ಗಾಂಧಿಗೆ ಸೋನಿಯಾ ಗಾಂಧಿ ಸಾಥ್​ ನೀಡಲಿದ್ದಾರೆ. ಇದಾದ ಬಳಿಕ ಅಕ್ಟೋಬರ್​ ಏಳರಂದು ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ರಾಹುಲ್​ ಗಾಂಧಿ ಜೊತೆ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಲು ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ನಾಗಮಂಗಲದಲ್ಲಿ ಪಾದಯಾತ್ರೆಯಲ್ಲಿ ಭಾಗಿಯಾಗಲಿರುವ ಪ್ರಿಯಾಂಕಾ ಗಾಂಧಿ ಬಳಿಕ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ.

ಇದನ್ನು ಓದಿ : Road Safety World Series 2022: ಸಚಿನ್ ನಾಯಕತ್ವದಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಇಂಡಿಯಾ ಲೆಜೆಂಡ್ಸ್

ಇದನ್ನೂ ಓದಿ : Aishwarya Pise was eliminated :ಮೊದಲವಾರವೇ ಬಿಗ್​ಬಾಸ್​ ಮನೆಯಿಂದ ಹೊರಬಿದ್ದ ಲೇಡಿ ಬೈಕರ್​ ಐಶ್ವರ್ಯಾ ಪಿಸೆ

Sonia, Priyanka Gandhi will arrive in Karnataka for Rahul Bharat Jodo Yatra

Comments are closed.