Virat Kohli 11000 runs : ಟಿ20 ಕ್ರಿಕೆಟ್: ಕೊಹ್ಲಿ@11000, ವಿರಾಟ ದಾಖಲೆ ಬರೆದ ಕಿಂಗ್

ಗುವಾಹಟಿ: ಆಧುನಿಕ ಕ್ರಿಕೆಟ್’ನ ಬ್ಯಾಟಿಂಗ್ ಗ್ರೇಟ್ ವಿರಾಟ್ ಕೊಹ್ಲಿ(Virat Kohli) ಟಿ20 ಕ್ರಿಕೆಟ್’ನಲ್ಲಿ 11 ಸಾವಿರ ರನ್ ಪೂರ್ತಿಗೊಳಿಸಿದ ಭಾರತದ ಮೊದಲ ಆಟಗಾರನೆಂಬ ದಾಖಲೆ ಬರೆದಿದ್ದಾರೆ. ಗುವಾಹಟಿಯ ಬರ್ಸಪರ ಕ್ರಿಕೆಟ್ ಮೈದಾನದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟಿ20 (India Vs South Africa T20 Series) ಪಂದ್ಯದಲ್ಲಿ ವಿರಾಟ್ ಕೊಹ್ಲಿ ಈ ದಾಖಲೆ ಬರೆದರು. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೂ ಮುನ್ನ ಟಿ20 ಕ್ರಿಕೆಟ್’ನಲ್ಲಿ 10,981 ರನ್ ಗಳಿಸಿದ್ದ ವಿರಾಟ್ ಕೊಹ್ಲಿ, ಹರಿಣಗಳ ವಿರುದ್ಧ 19 ರನ್ ಗಳಿಸಿದಾಗ ಟಿ20 ಕ್ರಿಕೆಟ್’ನಲ್ಲಿ 11 ಸಾವಿರ ರನ್ (Virat Kohli 11000 runs) ಪೂರ್ತಿಗಳಿಸಿದರು.

ಇದರೊಂದಿಗೆ ಟಿ20 ಕ್ರಿಕೆಟ್’ನಲ್ಲಿ 11 ಸಾವಿರ ರನ್ ಪೂರ್ತಿಗೊಳಿಸಿದ ಜಗತ್ತಿನ ನಾಲ್ಕನೇ ಆಟಗಾರನೆಂಬ ಹಿರಿಮೆಗೆ ವಿರಾಟ್ ಕೊಹ್ಲಿ ಪಾತ್ರರಾದರು. ಇದುವರೆಗೆ ವೆಸ್ಟ್ ಇಂಡೀಸ್’ನ ಕ್ರಿಸ್ ಗೇಲ್, ಕೀರನ್ ಪೊಲಾರ್ಡ್ ಪಾಕಿಸ್ತಾನದ ಶೋಯೆಬ್ ಮಲಿಕ್ ಮತ್ತು ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. ತಮ್ಮ 354ನೇ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ 11000 ರನ್’ಗಳ ಗಡಿ ದಾಟಿದರು.

2007ರ ಏಪ್ರಿಲ್ 3ರಂದು ದೆಹಲಿ ಪರ ಟಿ20 ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ವಿರಾಟ್ ಕೊಹ್ಲಿ, ತಮ್ಮ ಚೊಚ್ಚಲ ಪಂದ್ಯದಲ್ಲಿ 26 ಎಸೆತಗಳಲ್ಲಿ 35 ರನ್ ಗಳಿಸಿದ್ದರು. ನಂತರ ಅಂತಾರಾಷ್ಟ್ರೀಯ ಟಿ20, ಐಪಿಎಲ್ ಹಾಗೂ (Team India) ದೇಶೀಯ ಟಿ20 ಸೇರಿದಂತೆ ವೃತ್ತಿಜೀವನದಲ್ಲಿ ಇದುವರೆಗೆ 354 ಟಿ20 ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ, 40.25ರ ಸರಾಸರಿಯಲ್ಲಿ 11,030 ರನ್ ಕಲೆ ಹಾಕಿದ್ದಾರೆ. ಇದರಲ್ಲಿ ಆರು ಶತಕಗಳು ಹಾಗೂ 81 ಅರ್ಧಶತಕಗಳು ಸೇರಿವೆ.

ಟಿ20 ಕ್ರಿಕೆಟ್’ನಲ್ಲಿ ವಿರಾಟ್ ಕೊಹ್ಲಿ ಸಾಧನೆ
ಪಂದ್ಯ: 354, ರನ್: 11,030, ಶತಕ: 06, ಅರ್ಧಶತಕ: 81, ಸರಾಸರಿ: 40.25, ಸ್ಟ್ರೈಕ್’ರೇಟ್: 132.92

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ವಿರಾಟ್ ಕೊಹ್ಲಿ ಸಾಧನೆ
ಪಂದ್ಯ: 109, ರನ್: 3,712, ಶತಕ: 01, ಅರ್ಧಶತಕ: 33, ಸರಾಸರಿ: 50.84, ಸ್ಟ್ರೈಕ್’ರೇಟ್: 138.09

ಐಪಿಎಲ್’ನಲ್ಲಿ ವಿರಾಟ್ ಕೊಹ್ಲಿ ಸಾಧನೆ
ಪಂದ್ಯ: 223, ರನ್: 6,624, ಶತಕ: 05, ಅರ್ಧಶತಕ: 44, ಸರಾಸರಿ: 36.20, ಸ್ಟ್ರೈಕ್’ರೇಟ್: 129.15

ಟಿ20 ಕ್ರಿಕೆಟ್’ನಲ್ಲಿ ಅತೀ ಹೆಚ್ಚು ರನ್ (ಟಾಪ್-5)
• 14,562: ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್); 463 ಪಂದ್ಯ, 22 ಶತಕ, 88 ಅರ್ಧಶತಕ
• 11,902: ಶೋಯೆಬ್ ಮಲಿಕ್ (ಪಾಕಿಸ್ತಾನ); 481 ಪಂದ್ಯ, 73 ಅರ್ಧಶತಕ
• 11,871: ಕೀರನ್ ಪೊಲಾರ್ಡ್ (ವೆಸ್ಟ್ ಇಂಡೀಸ್): 612 ಪಂದ್ಯ, 01 ಶತಕ, 56 ಅರ್ಧಶತಕ
• 11,030: ವಿರಾಟ್ ಕೊಹ್ಲಿ (ಭಾರತ); 354 ಪಂದ್ಯ, 06 ಶತಕ, 81 ಅರ್ಧಶತಕ
• 10,870: ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ); 328 ಪಂದ್ಯ, 08 ಶತಕ, 91 ಅರ್ಧಶತಕ

ಇದನ್ನೂ ಓದಿ : India vs South Africa T20 series : ಭಾರತ Vs ದಕ್ಷಿಣ ಆಫ್ರಿಕಾ ಟಿ20 ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಹಾವು !

ಇದನ್ನೂ ಓದಿ : ವಿರಾಟ್ ಕೊಹ್ಲಿ ಸೆಲ್ಫಿಗಾಗಿ ಬರೋಬ್ಬರಿ 23 ಸಾವಿರ ಖರ್ಚು ಮಾಡಿದ ಅಸ್ಸಾಂ ಹುಡುಗ, ಅಭಿಮಾನಿಯ ಆಸೆ ನೆರವೇರಿಸಿದ ಕಿಂಗ್

Virat Kohli completes 11000 runs in T20 Cricket

Comments are closed.