kn mohan kumar passes away : ಸ್ಯಾಂಡಲ್​ವುಡ್​ ನಿರ್ದೇಶಕ ಕೆ.ಎನ್​ ಮೋಹನ್​ಕುಮಾರ್​ ಇನ್ನಿಲ್ಲ

ಬೆಂಗಳೂರು: kn mohan kumar passes away : ಕಿರುತೆರೆ ಹಾಗೂ ಚಲನಚಿತ್ರ ಹಿರಿಯ ನಿರ್ದೇಶಕ ಕೆ.ಎನ್​ ಮೋಹನ್​ಕುಮಾರ್​ ತೀವ್ರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. 56 ವರ್ಷ ಪ್ರಾಯದವರಾಗಿದ್ದ ಮೋಹನ್​ಕುಮಾರ್​​ ಬೆಂಗಳೂರಿನ ಎನ್​.ಆರ್​ ಕಾಲೋನಿಯ ರಾಮಲೀಲಾ ಅಪಾರ್ಟ್​ಮೆಂಟ್​ನಲ್ಲಿ ನೆಲೆಸಿದ್ದರು. ನಿನ್ನೆ ಸ್ನಾನದ ಕೋಣೆಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದ ತಕ್ಷಣವೇ ಅಸ್ವಸ್ಥರಾಗಿದ್ದ ಮೋಹನ್​ಕುಮಾರ್​ರನ್ನು ಸಮೀಪದ ರಂಗ ದೊರೈ ಆಸ್ಪತ್ರೆಗೆ ದಾಖಲು ಮಾಡಬೇಕೆಂದು ಕುಟುಂಬಸ್ಥರು ಕರೆದುಕೊಂಡು ಹೋಗುತ್ತಿದ್ದ ವೇಳೆಯಲ್ಲಿ ಮಾರ್ಗ ಮಧ್ಯದಲ್ಲಿಯೇ ಅವರು ನಿಧನರಾಗಿದ್ದಾರೆ.


ನಿರ್ದೇಶಕ ಮೋಹನ್​ಕುಮಾರ್​​ರ ಅಂತಿಮ ದರ್ಶನಕ್ಕೆ ಜಯನಗರ ಮೂರನೇ ಬ್ಲಾಕ್​​ ಪೂರ್ವ 8ನೇ ಮುಖ್ಯರಸ್ತೆಯಲ್ಲಿರುವ ಅವರ ನಿವಾಸದಲ್ಲಿಯೇ ವ್ಯವಸ್ಥೆ ಮಾಡಲಾಗಿದೆ. ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಆನೇಕಲ್​ ತಾಲೂಕಿನ ಸಮಂದೂರಿನಲ್ಲಿ ಮೋಹನ್​ಕುಮಾರ್​ರ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.


ನಿರ್ದೇಶಕ ಮೋಹನ್​ಕುಮಾರ್​​ ಖ್ಯಾತ ನಿರೂಪಕಿ ಹಾಗೂ ನಟಿ ವತ್ಸಲಾ ಮೋಹನ್​​ರ ಪತಿಯಾಗಿದ್ದಾರೆ. ಕೇವಲ ಸಿನಿಮಾ , ಕಿರುತೆರೆ ಮಾತ್ರವಲ್ಲದೇ ನಾಟಕಗಳಲ್ಲಿಯೂ ಮೋಹನ್​ ಕುಮಾರ್​​​ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ತಾವು ನಿರ್ದೇಶಿಸಿದ ಬೊಂಬೆಯಾಟ ಸಿನಿಮಾಗೆ ಮೋಹನ್​ ಕುಮಾರ್​ ಪ್ರಶಸ್ತಿಯನ್ನು ಪಡೆದಿದ್ದಾರೆ. ಮೃತ ಮೋಹನ್​ ಕುಮಾರ್​ ಕುಟುಂಬಸ್ಥರು, ಸ್ನೇಹಿತರು, ಸಹೋದ್ಯೋಗಿಗಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ನಿರ್ದೇಶಕ ಮೋಹನ್​ ಕುಮಾರ್​ ನಿಧನಕ್ಕೆ ಚಂದನವನ ಕಂಬನಿ ಮಿಡಿದಿದೆ.

ಇದನ್ನು ಓದಿ : Bus Lorry Accident : ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ : ಬಸ್‌ -ಲಾರಿ ಢಿಕ್ಕಿ, 9 ಸಾವು, 24 ಮಂದಿಗೆ ಗಾಯ

ಇದನ್ನೂ ಓದಿ : Harshal Patel injured : ಆರ್‌ಸಿಬಿ ತಂಡಕ್ಕೆ ಬಿಗ್‌ ಶಾಕ್‌ : ಖ್ಯಾತ ಬೌಲರ್‌ ಹರ್ಷಲ್‌ ಪಟೇಲ್‌ಗೆ ಗಾಯ

sandalwood director kn mohan kumar passes away

Comments are closed.