ಭಾನುವಾರ, ಏಪ್ರಿಲ್ 27, 2025
HomeCinemaTribute to Puneeth Raj Kumar : ಅಪ್ಪುಗೆ ವಿಭಿನ್ನ ಗೌರವ ಸಲ್ಲಿಕೆ : ಜೇಮ್ಸ್...

Tribute to Puneeth Raj Kumar : ಅಪ್ಪುಗೆ ವಿಭಿನ್ನ ಗೌರವ ಸಲ್ಲಿಕೆ : ಜೇಮ್ಸ್ ಸಿನಿಮಾ ರಿಲೀಸ್ ವೇಳೆ ತೆರೆಗೆ ಬರಲ್ಲ ಬೇರೆ ಸಿನಿಮಾ !

- Advertisement -

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸ್ಯಾಂಡಲ್ ವುಡ್ ನ್ನು ಭೌತಿಕವಾಗಿ ಅಗಲಿ ಹೋಗಿದ್ದರು ಸಿನಿಪ್ರಿಯರು, ಸಿನಿಮಾ ಇಂಡಸ್ಡ್ರಿಯ ಎಲ್ಲರ ಮನದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಹೀಗಾಗಿ ಪುನೀತ್ ರಾಜ್ ಕುಮಾರ್ ಗೆ ಹಾಗೂ ಅವರ ಕೊನೆಯ ಚಿತ್ರಕ್ಕೆ ಗೌರವ ಸಲ್ಲಿಸುವ ಉದ್ದೇಶದಿಂದ ರಾಜ್ಯದ ಚಲನಚಿತ್ರ ವಿತರಕರು ಒಂದು ವಿಭಿನ್ನ ತೀರ್ಮಾನ ಕೈಗೊಂಡಿದ್ದಾರೆ. ಜೇಮ್ಸ್ ಸಿನಿಮಾ ರಿಲೀಸ್ ವೇಳೆ ಪುನೀತ್ ರಾಜ್ ಕುಮಾರ್ ಗೆ ವಿಶಿಷ್ಟವಾಗಿ ಗೌರವ (Tribute to Puneet Raj Kumar) ಸಮರ್ಪಣೆಯಾಗಲಿದೆ.

ಹೌದು ಅಗಲಿದ ಅಪ್ಪುಗೆ ವಿತರಕರ ತಂಡ ವಿಭಿನ್ನವಾಗಿ ಗೌರವ ಸಲ್ಲಿಸಲು ಮುಂದಾಗಿದೆ. ಜೇಮ್ಸ್‌ಸಿನಿಮಾ‌ತೆರೆಗೆ ಬರುವ ಮಾರ್ಚ್ ೧೭ ರಂದು ಹಾಗೂ ಆ ವಾರದಲ್ಲಿ ಅಥವಾ ಅದರ ಹಿಂದು ಮುಂದಿನ ವಾರದಲ್ಲಿ ಯಾವುದೇ ಸಿನಿಮಾ ವಿತರಣೆ ಮಾಡದಿರಲು ನಿರ್ಧರಿಸಿದೆ. ಮಾತ್ರವಲ್ಲ ಯಾವುದೇ ಸಿನಿಮಾ ರಿಲೀಸ್ ಕೂಡ ಮಾಡದಂತೆ ಮನವಿ‌ಮಾಡಿದ್ದಾರೆ.

ಜೇಮ್ಸ್ ಸಿನಿಮಾ ರಿಲೀಸ್ ವೇಳೆ ಬೇರೆ ಸಿನಿಮಾ‌ರಿಲೀಸ್ ಮಾಡದೇ ಪುನೀತ್ ರಾಜ್ ಕುಮಾರ್ ಗೆ ಗೌರವ ಸಲ್ಲಿಸಲು ಈ ನಿರ್ಣಯ ಕೈಗೊಳ್ಳಲಾಗುತ್ತಿದೆಯಂತೆ. ಈ ಬಗ್ಗೆ ವಿವರಣೆ ನೀಡಿದ
ಹಿರಿಯ ವಿತರಕ ಹಾಗೂ ಕರ್ನಾಟಕ ಚಲನಚಿತ್ರ ಮಂಡಳಿ ಹಾಗೂ ಸೌತ್ ಇಂಡಿ ಚಲನ ಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಎಚ್.ಡಿ.ಗಂಗರಾಜು, ಪುನೀತ್ ರಾಜ್ ಕುಮಾರ್ ಚಿಕ್ಕವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿ ನಮ್ಮನ್ನು ಅಗಲಿದ್ದಾರೆ.ಪುನೀತ್ ಸೈನಿಕನ ಪಾತ್ರದಲ್ಲಿ ಕಾಣಿಸಿರುವ ಚಿತ್ರ “ಜೇಮ್ಸ್”.ಜೇಮ್ಸ್ ರಿಲೀಸ್ ದಿನ ನಮ್ಮ ಕನ್ನಡದ  ವಿತರಕರು, ಪ್ರದರ್ಶಕರು,ನಿರ್ಮಾಪರು ಎಲ್ಲಾ ಸೇರಿ ಬೇರೆ ಸಿನಿಮಾಗಳು ರಿಲೀಸ್ ಆಗದ ರೀತಿಯಲ್ಲಿ ಸಹಕರಿಸುತ್ತಾರೆ ಅನ್ನೋ ನಂಬಿಕೆ ನನಗಿದೆ ಎಂದಿದ್ದಾರೆ.

ನಮ್ಮ ಎಲ್ಲಾ ವಿತರಕರು,ನಿರ್ಮಾಪಕರು,ಪ್ರದರ್ಶಕರಲ್ಲಿಆ ಒಗ್ಗಟ್ಟಿದೆ ಹಾಗೂ ಸ್ವಾಭಿಮಾನ‌ ಇದೆ.ಅಲ್ಲದೆ ಮಾರ್ಚ್ 1 ರಿಂದ 23 ರವರೆಗೆ  ಯಾರು ಬೇರೆ ಚಿತ್ರ ರಿಲೀಸ್ ಮಾಡಲ್ಲ ಮಾರ್ಚ್ 17 ಕ್ಕೆ ಯಾರಾದ್ರೂ ತಮ್ಮ ಸಿನಿಮಾ ರಿಲೀಸ್ ಪ್ಲಾನ್ ಮಾಡಿದ್ದರೇ ಅಂತಹವರಿಗೆ   ಒಂದು ವಾರ ಮೊದಲು ಇಲ್ಲ ತಡವಾಗಿ ಸಿನಿಮಾ  ರಿಲೀಸ್ ಮಾಡುವಂತೆ ಹೇಳ್ತಿವಿ ಎಂದಿದ್ದಾರೆ.

ನಮ್ಮ ಈ ಮನವಿಗೆ ನಮ್ಮ ಇಂಡಸ್ಟ್ರಿಯವರು ಖಂಡಿತಾ ಒಪ್ಪಿಕೊಳ್ತಾರೆ ಎಂಬ ನಂಬಿಕೆ ಇದೆ. ಇದು ಅಗಲಿದ ಆ ಮಹಾತ್ಮನಿಗೆ ನಾವು ಸಲ್ಲಿಸುವ ಕಿಂಚಿತ್ತ ಗೌರವ. ಒಂದು ವೇಳೆ ಅವಶ್ಯಕತೆ ಇದ್ರೆ ನಿರ್ಮಾಪಕರು, ವಿತರಕರು, ಚೇಂಬರ್ ನವರು ಪ್ರದರ್ಶಕರ ಸಭೆ ಮಾಡಿ ಈ ನಿರ್ಧಾರವನ್ನು ಅಂತಿಮಗೊಳಿಸಿ ಪ್ರಕಟಿಸುತ್ತೀವಿ ಎಂದಿದ್ದಾರೆ. ಆ ಮೂಲಕ ಮಾರ್ಚ್ ೧೭ ರಂದು ಜೇಮ್ಸ್ ತೆರೆಗೆ ಬರೋದು ಬಹುತೇಕ ಖಚಿತವಾಗಿದ್ದು ಅಭಿಮಾನಿಗಳಲ್ಲಿ ಸಂಭ್ರಮ ಮನೆಮಾಡಿದೆ.

ಇದನ್ನೂ ಓದಿ : ಪುಷ್ಪಾ ಸಿನಿಮಾ ಸಕ್ಸಸ್‌ ಬೆನ್ನಲ್ಲೇ ಜಾಹೀರಾತಲ್ಲಿ ಬ್ಯುಸಿಯಾದ ಸಮಂತಾ

ಇದನ್ನೂ ಓದಿ : ಸುದೀಪ್ ಅಭಿಮಾನಿಗಳಿಗೆ‌ ಮತ್ತೊಮ್ಮೆ ನಿರಾಸೆ : ವಿಕ್ರಾಂತ್ ರೋಣ ರಿಲೀಸ್ ಮುಂದೂಡಿಕೆ

( Distinguished tribute to Puneet Raj Kumar, others cinema releases if James Cinema is released date)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular