ಎಣ್ಣೆ ಸಾಂಗ್ ಅಂದ್ರೇನೇ ಸಿನಿಮಾಗೊಂದು ಕಿಕ್ ಏರುತ್ತೆ. ಅಷ್ಟೇ ಅಲ್ಲ ಮಾಸ್ ಸಿನಿಮಾಗಳಿಗೆ ಗೆಲುವನ್ನು ತಂದುಕೊಡುತ್ತೆ. ಅದರಲ್ಲೂ ಗುಳಿ ಕೆನ್ನೆ ಚೆಲುವೆ ರಚಿತಾ ರಾಮ್ ಎಣ್ಣೆ ಹಾಡಿಗೆ ಕುಣದ್ರೇ ಹೇಗಿರುತ್ತೇ ಹೇಳಿ. ಸ್ಯಾಂಡಲ್ ವುಡ್ ಗೆ ಮತ್ತೇರಿಸಿದ ಡಿಂಪಲ್ ಕ್ವೀನ್ ರಚಿತಾ ರಾಮ ಎಣ್ಣೆ ಬಾಟಲಿ ಜೊತೆ ಮೈ ಬಳುಕಿಸಿದ ಹೆಣ್ಣಿಗೂ ಎಣ್ಣೆಗೂ ಎಲ್ಲಿಂದ ಲಿಂಕ್ ಇಟ್ಟೇ ಭಗವಂತ ಸಾಂಗ್ ಸಖತ್ ಹಿಟ್ ಆಗಿದ್ದು ಹೊಸ ದಾಖಲೆ ಬರೆದಿದೆ. ಏಕ್ ಲವ್ ಯಾ (Ek Love Ya Songs) ಸಿನಿಮಾದ ಹೆಣ್ಣಿಗೂ ಎಣ್ಣೆಗೂ ಸಾಂಗ್ ನಲ್ಲಿ ಇದೇ ಮೊದಲ ಬಾರಿಗೆ ನಟಿ ರಚಿತಾ ರಾಮ್ ಎಣ್ಣೆ ಬಾಟಲಿ ಹಿಡಿದು ಶರಾಬಿನ ಗುಂಗಲ್ಲಿ ಕುಣಿದಿದ್ದಾರೆ.
ಕಳೆದ ವಾರ ರಿಲೀಸ್ ಆಗಿರೋ ಈ ಹಾಡು ಈಗಾಗಲೇ ಪಡ್ಡೆ ಹೈಕಳ ಬಾಯಲ್ಲಿ ನಲಿದಾಡುತ್ತಿದ್ದು, ಒಂದೇ ವಾರಕ್ಕೆ ಬರೋಬ್ಬರಿ ೬ ಮಿಲಿಯನ್ ವೀವ್ಸ್ ಪಡೆದುಕೊಳ್ಳುವ ಮೂಲಕ ಧೂಳೆಬ್ಬಿಸಿದೆ. ಜೋಗಿ ಖ್ಯಾತಿಯ ನಿರ್ದೇಶಕ ಪ್ರೇಮ್ ಆಕ್ಷ್ಯನ್ ಕಟ್ ಹೇಳಿರೋ ಈ ಸಿನಿಮಾವನ್ನು ಕ್ರೇಜಿ ಕ್ವಿನ್ ರಕ್ಷಿತಾ ಪ್ರೇಮ್ ತನ್ನ ತಮ್ಮನಿಗಾಗಿ ನಿರ್ಮಿಸಿದ್ದಾರೆ.

ಈ ಸಿನಿಮಾದಲ್ಲಿ ರಾಣಾಗೆ ನಾಯಕಿಯಾಗಿ ರಚಿತಾರಾಮ್ ನಟಿಸಿದ್ದಾರೆ. ಈ ಸಿನಿಮಾದ ಇನ್ನೊಂದು ವಿಶೇಷತೆಯೆಂದರೇ ರಾಬರ್ಟ್ ಸಿನಿಮಾದ ಕಣ್ಣೇ ಅದಿರಿಂದಿ ಹಾಡಿನ ಮೂಲಕ ಫೇಮಸ್ ಆದ ಗಾಯಕಿ ಮಂಗ್ಲಿ ಏಕ್ ಲವ್ ಯಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟಿದ್ದಾರೆ.

ಹೆಣ್ಣಿಗೂ ಎಣ್ಣೆಗೂ ಸಾಂಗ್ ಮಂಗ್ಲಿಯ ಧ್ವನಿಯಲ್ಲಿ ಸಖತ್ತಾಗಿ ಮೂಡಿಬಂದಿದ್ದು, ಹೊಸ ವರ್ಷಕ್ಕೆ ಪಾರ್ಟಿ ಸಾಂಗ್ ಆಗೋದ್ರಲ್ಲಿ ಸಂಶಯವೇ ಇಲ್ಲ. ಲವ್ ಫೆಲ್ಯೂರ್ ಸೇರಿದಂತೆ ಹಲವು ಸೋಷಿಯಲ್ ಸಂಗತಿಗಳನ್ನು ಜೋಡಿಸಿ ಹೆಣೆಯಲಾದ ಈ ಹಾಡು ಸಖತ್ ಕ್ಯಾಚಿಯಾಗಿದ್ದು ರಚಿತಾ ರಾಮ್ ಕೂಡ ಹಾಡಿನಲ್ಲಿ ನಶೆ ಏರಿದವರಂತೆ ಕುಣಿದು ಅಭಿಮಾನಿಗಳಿಗೆ ಮತ್ತೇರಿಸಿದ್ದಾರೆ.

ಕೇವಲ ಹೆಣ್ಣಿಗೂ ಎಣ್ಣೆಗೂ ಮಾತ್ರವಲ್ಲದೇ, ಏಕ್ ಲವ್ ಯಾ ಸಿನಿಮಾದ ಯಾರೇ ಯಾರೇ ಸಾಂಗ್ ಕೂಡ 60 ಲಕ್ಷ ವೀಕ್ಷಣೆ ಪಡೆದುಕೊಂಡಿದೆ. ನಗರದಲ್ಲಿ ಏಕ್ ಲವ್ ಯಾ ತಂಡ ಸಾಂಗ್ ಸಕ್ಸಸ್ ಮೀಟ್ ಕೂಡ ನಡೆಸಿದ್ದು ಒಂದೇ ವಾರದಲ್ಲಿ ಸಾಂಗ್ ಗಳಿಸಿದ ಮೆಚ್ಚುಗೆಗೆ ಸಂಭ್ರಮಿಸಿದೆ. ಮಾತ್ರವಲ್ಲ ಸದ್ಯದಲ್ಲೇ ಸಿನಿಮಾ ರಿಲೀಸ್ ಡೇಟ್ ಘೋಷಿಸುವುದಾಗಿಯೂ ಹೇಳಿಕೊಂಡಿದೆ.
ಇದನ್ನೂ ಓದಿ : ‘ಏಕ್ ಲವ್ ಯಾ’ ನಲ್ಲಿ ರಚ್ಚು ಸಖತ್ ಹಾಟ್ : ವೈರಲ್ ಆಯ್ತು ಲಿಪ್ ಲಾಕ್ ಸೀನ್
ಇದನ್ನೂ ಓದಿ : Rachita Ram : Expose ಬಳಿಕ ಎಣ್ಣೆ ಹಾಡು : ಡಿಂಪಲ್ ಕ್ವೀನ್ ಅವತಾರಕ್ಕೆ ಮೆಚ್ಚಿದ ಫ್ಯಾನ್ಸ್
(Ek Love Ya Songs Super Hit, Rachitha Ram Bottle Dance)