Teachers Suspended : ABCD ಬರೆಯಲು ಬಾರದ ಶಿಕ್ಷಕ, ಶಿಕ್ಷಕಿ ಸಸ್ಪೆಂಡ್‌ : ವಿಡಿಯೋ ವೈರಲ್‌

ವಿಜಯಪುರ : ಎಬಿಸಿಡಿ ಅಕ್ಷರ ಬರೆಯಲು ಬಾರದ ಇಬ್ಬರು ಶಿಕ್ಷಕರು ಮಕ್ಕಳಿಗೆ ತಪ್ಪಾಗಿ ವಿದ್ಯಾಭ್ಯಾಸವನ್ನು ನೀಡುತ್ತಿದ್ದರು. ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಪೋಷಕರ ದೂರಿನ ಹಿನ್ನೆಲೆಯಲ್ಲೀಗ ಶಿಕ್ಷಕಿ ಹಾಗೂ ಶಿಕ್ಷಕರನ್ನು ಶಿಕ್ಷಣ ಇಲಾಖೆ ಅಮಾನತ್ತು(Teachers Suspended) ಮಾಡಿ ಆದೇಶ ಹೊರಡಿಸಿದೆ.

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗುಂದಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಹಾಗೂ ಶಿಕ್ಷಕಿಗೆ ಇಂಗ್ಲೀಷ್‌ ವರ್ಣಮಾಲೆಯ ಎಬಿಸಿಡಿಯ ಗಂಧ ಗಾಳಿಯೇ ತಮಗೆ ಗೊತ್ತಿಲ್ಲ ಅನ್ನುವಂತೆ ವರ್ತಿಸುತ್ತಿದ್ದರು. ಮಕ್ಕಳಿಗೆ ತಪ್ಪಾಗಿ ಎಬಿಸಿಡಿಯನ್ನು ಹೇಳಿ ಕೊಡುತ್ತಿದ್ದರು.

ಪೋಷಕರು ಈ ಕುರಿತು ಶಿಕ್ಷಕರನ್ನು ಪ್ರಶ್ನಿಸಿದ್ದಾರೆ. ಆದರೆ ಮಕ್ಕಳಿಗೆ ಹೇಳಿ ಕೊಡುವುದೇ ಸರಿ ಎಂದು ವಾದಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಶಿಕ್ಷಕರ ಎಬಿಸಿಡಿ ಪಾಠದ ವಿಡಿಯೋ ವೈರಲ್‌ ಆಗಿತ್ತು. ಇದರ ಬೆನ್ನಲ್ಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಕುರಿತು ವರದಿಯೊಂದನ್ನು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸಲ್ಲಿಕೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರು ಶಿಕ್ಷಕರನ್ನು ಸಸ್ಪೆಂಡ್‌ ಮಾಡಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಮುಂದಾಗಿದೆ. ಅದ್ರಲ್ಲೂ ಶಿಕ್ಷಕರಿಗೆ ತರಬೇತಿಯನ್ನು ಕೊಡಿಸಿ ಮಕ್ಕಳ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಈ ನಡುವಲ್ಲೇ ಈ ಘಟನೆ ಇತರ ಶಿಕ್ಷಕರಿಗೆ ಪಾಠವಾಗಿದೆ. ಇನ್ನೊಂದೆಡೆಯಲ್ಲಿ ಶಿಕ್ಷಣದ ಬಗ್ಗೆ ಅಸಡ್ಡೆ ತೋರಿಸುವ ಶಿಕ್ಷಕರ ವಿರುದ್ದ ಇಲಾಖೆ ಮುಂದಿನ ದಿನಗಳಲ್ಲಿ ಇಂತಹ ಕಠಿಣ ಕ್ರಮಕ್ಕೆ ಮುಂದಾಗುವ ಸಾಧ್ಯತೆಯಿದೆ.

ಇದನ್ನೂ ಓದಿ : Children’s Day : ಮಕ್ಕಳಿಗಾಗಿ ನರ್ತಿಸಿದ ಶಿಕ್ಷಕರು : ಹೀಗೊಂದು ವಿಶಿಷ್ಟ ಮಕ್ಕಳ ದಿನಾಚರಣೆ

ಇದನ್ನೂ ಓದಿ : ವಿಜ್ಞಾನ, ಗಣಿತ ಪಠ್ಯ ಪೂರ್ಣಕ್ಕೆ ಮಾತ್ರವೇ ಒತ್ತು : ಸಚಿವ ಬಿ.ಸಿ.ನಾಗೇಶ್‌

(Two teachers suspended for not writing ABCD)

Comments are closed.