ಮಲೆನಾಡ ಭೂಗತ ಲೋಕವನ್ನು ಅನಾವರಣಗೊಳಿಸಿದ “ಕಾರ್ಗಲ್ ನೈಟ್ಸ್”

ಮುಂಬೈ, ಮಂಗಳೂರು, ಬೆಂಗಳೂರಿನ ಭೂಗತಲೋಕದ ಕಥೆಗಳು ಈಗಾಗಲೇ ಚಂದನವನದಲ್ಲಿ ಕಾಣಿಸಿಕೊಂಡಿತ್ತು. ಆದ್ರೆ ಮಲೆನಾಡಲ್ಲೂ ನಡೆದ ಭೂಗತಲೋಕದ ಅನಾವರಣ ಮಾಡೋದಕ್ಕೆ ಹೊರಟಿದ್ದಾರೆ ನಿರ್ದೇಶಕ ದೇವರಾಜ್ ಪೂಜಾರಿ ಮತ್ತು ತಂಡ. ಹತ್ತೊಂಬತ್ತನೇ ಶತಮಾನದಲ್ಲಿ ಪಶ್ಚಿಮ ಘಟ್ಟದ ದಟ್ಟವಾದ ಕಾಡುಗಳ ನೆರಳಲ್ಲಿ ಬೆಳೆದ ಕಳ್ಳಸಾಗಾಣಿಕೆಯ ನೈಜವಾದ ಘೋರ ಅನುಭವಗಳನ್ನು ಆಧಾರಿಸಿ “ಕಾರ್ಗಲ್ ನೈಟ್ಸ್” ಚಿತ್ರ ತೆರೆಗೆ ಬರುತ್ತಿದೆ.

ಓಂಕಾರ್ ಪ್ರೊಡಕ್ಷನ್ ಮತ್ತು ಕಾಳಿಕಾ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ ಸಿನಿಮಾದ ಟ್ರೈಲರ್‌ ಈಗಾಗಲೇ ಬಿಡುಗಡೆಯಾಗಿದ್ದು ಹಲವು ಕುತೂಹಲವನ್ನು ಹುಟ್ಟುಹಾಕಿದೆ. ಹರ್ಶಿಲ್‌ ಕೌಶಿಕ್‌ ಕಾರ್ಗಲ್‌ ನೈಟ್ಸ್‌ ಸಿನಿಮಾದ ಮೂಲಕ ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡ್ತಿದ್ದಾರೆ. ಪಶ್ಚಿಮ ಘಟ್ಟದಲ್ಲಿ ನಡೆಯುತ್ತಿದ್ದ ಭೂಗತ ಲೋಕ ಕಥೆಯನ್ನು ಅದ್ಬುತವಾಗಿ ಚಿತ್ರೀಕರಿಸಿದ್ದಾರೆ. ಅರುಣ್ ಎಎನ್ಆರ್ ಮತ್ತು ನಿರ್ದೇಶಕ ದೇವರಾಜ್ ಪೂಜಾರಿ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವಿಶ್ವವಿಖ್ಯಾತ ಜೋಗ ಜಲಪಾತದ ಸನಿಹದಲ್ಲೇ ಇರುವ ಕಾರ್ಗಲ್‌ನಲ್ಲಿ 90 ರ ದಶಕದಲ್ಲಿ ನಿಗೂಢವಾಗಿ ನಡೆಯುತ್ತಿದ್ದ ಶ್ರೀಗಂಧದ ಮರಗಳ ಕಳ್ಳ ಸಾಗಾಣಿಕೆಯ ಹಿಂದಿನ ಭೂಗತ ಲೋಕದ ಅನಾವರಣವೇ ಕಾರ್ಗಲ್‌ ನೈಟ್ಸ್‌ ಸಿನಿಮಾ ಕಥಾ ಹಂದರ.

ನೈಜ ಕಥೆಯನ್ನೇ ಇದೀಗ ಸಿನಿಮಾ ರೂಪದಲ್ಲಿ ತೆರೆಗೆ ತರಲು ಸಿದ್ದವಾಗಿದೆ ಚಿತ್ರ ತಂಡ. ಕಳೆದ ಮೂರು ದಶಕಗಳ ಹಿಂದೆ ನಡೆಯುತ್ತಿದ್ದ ಗಂಧದ ಮರಗಳ ಕಳ್ಳಸಾಗಾಣಿಕೆಯ ಕಥೆಯ ಸಾಕ್ಷ್ಯಗಳನ್ನು ಸಂಗ್ರಹಿಸಿ ಸಿನಿಮಾವನ್ನು ಅದ್ಬುತವಾಗಿ ಚಿತ್ರೀಕರಿಸಲಾಗಿದೆ. ಈಗಾಗಲೇ ಟ್ರೈಲರ್‌ ಸಾಕಷ್ಟು ಕುತೂಹಲವನ್ನು ಹುಟ್ಟುಹಾಗಿದೆ. ಭೂಗತ ಲೋಕದ ಕಥೆಯ ಜೊತೆಗೆ ನವಿರಾದ ಪ್ರೇಮ ಕಥೆ ಸಿನಿಮಾದಲ್ಲಿದೆ. ಮಲ್ಲಿಕಾರ್ಜುನ್ ಮತ್ತು ಅವರ ತಂಡ ಮರಗಳ ಕಳ್ಳಸಾಗಾಣಿಕೆಯ ದೃಶ್ಯಗಳನ್ನು ಅದ್ಭುತವಾಗಿ ಮರುಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರವನ್ನು ರೋಷನ್ ಲೋಕೇಶ್ ಸಂಕಲಿಸಿದ್ದು ಸುರೇಂದ್ರನಾಥ್ ಬಿಆರ್ ಸಂಗೀತವನ್ನು ರಚಿಸಿದ್ದಾರೆ .

ಹರ್ಶಿಲ್ ಕೌಶಿಕ್ , ರಾಗ್ ಯುಆರ್ಎಸ್ , ಕಿಶೋರ್, ಪ್ರಶಾಂತ್ ಸಿದ್ದಿ, ನಾಗರಾಜ್ ಬೈಂದೂರ್, ಹರೀಶ್ ಭಟ್ ನೀನಾಸಂ, ಸಂದೀಪ್ ಪರಶುರಾಮ್, ವರುಣ್ ಹೆಗ್ಡೆ, ಅಕ್ಷತಾ ಅಶೋಕ್, ಚಂದ್ರಕಾಂತ್, ರಾಜೇಶ್ ರಾಮಕೃಷ್ಣ, ಶಶಿಧರ್ ಗೌಡ, ಶ್ರೀಗಂಧ್ ನಾಗ್, ನರೇಂದ್ರ ಕಬ್ಬಿನಾಲೆ ಈ ಚಿತ್ರದ ಮೂಲಕ ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಓಂಕಾರ್ ಪ್ರೊಡಕ್ಷನ್ ಮತ್ತು ಕಾಳಿಕಾ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಚಿತ್ರದ ಟ್ರೈಲರ್ A2 music YouTube ಚಾನಲ್ ನಲ್ಲಿ ಇಂದು ಬಿಡುಗಡೆಯಾಗಿದೆ.

ಇದನ್ನೂ ಓದಿ : 24 ಗಂಟೆ 200 ಕಿ.ಮೀ. ವೇಗದಲ್ಲಿ ಕಾರು ಚಲಾಯಿಸಿದ ಅರವಿಂದ್‌ : ಸಹಚಾಲಕಿಯಾದ ದಿವ್ಯ ಉರುಡುಗ

ಇದನ್ನೂ ಓದಿ : ಕನ್ನಡದಲ್ಲೂ ಸದ್ದು ಮಾಡಿದೆ ಮಣಿಕೆ ಮಗೇ ಹಿತೆ ಸಾಂಗ್‌ : ಮೋಡಿ ಮಾಡಿದ ರಾಪಿಡ್‌ ರಶ್ಮಿ

(“Kargal Nights” unveils story of the underworld )

Comments are closed.