KGF-2: ಕೆಜಿಎಫ್ ಮೊದಲ ಶೋ ಗೆ ಉಚಿತ ಟಿಕೇಟ್…! ಟಿಕೇಟ್ ಪಡೆಯುವ ಅದೃಷ್ಟಶಾಲಿ ಯಾರು? ಯಾಕೆ ? ಇಲ್ಲಿದೆ ಡಿಟೇಲ್ಸ್…!!

ಕೆಜಿಎಫ್-2 ಪ್ಯಾನ್ ಇಂಡಿಯಾ ಸಿನಿಮಾಗೆ ಭಾರತದ ಚಿತ್ರರಂಗ ಕಾಯುತ್ತಿದೆ. ಸಿನಿಮಾ ರಿಲೀಸ್ ಆದ ದಿನ ಟಿಕೇಟ್ ಗಾಗಿ ಜನ ಮುಗಿಬೀಳೋದು ಗ್ಯಾರಂಟಿ. ಆದರೆ ಈ ಬಾಲಕನಿಗೆ ಮಾತ್ರ  ಕೆಜಿಎಫ್-2 ಮೊದಲ ಶೋದ ಫ್ರೀ ಟಿಕೇಟ್ ಸಿಗಲಿದ್ದು, ಸ್ವತಃ ನಿರ್ದೇಶಕ ಪ್ರಶಾಂತ್ ನೀಲ್ ಇಂತಹದೊಂದು ಲಕ್ಕಿ ಆಫರ್ ನೀಡಿದ್ದಾರೆ.

ಹೌದು ವೈವಸ್ವತ್ ತಾಂಡುಲ್ ಎಂಬ  12 ನೇ ತರಗತಿಯ ಬಾಲಕ ಕೆಜಿಎಫ್-2 ನಿರ್ಮಿಸಿರುವ ಹೊಂಬಾಳೆ ಫಿಲ್ಸ್ಮಂಗೆ  ಪ್ರೀತಿಯಿಂದ ಪತ್ರವೊಂದನ್ನು ಬರೆದಿದ್ದಾನೆ. ಮಾತ್ರವಲ್ಲ ಅಕ್ಕಿ ಕಾಳಿನ ಮೇಲೆ ಕೆಜಿಎಫ್-2 ಹಾಗೂ ಹೊಂಬಾಳೆ ಎಂದು ಸೂಕ್ಷ್ಮವಾಗಿ ಕೆತ್ತನೆ ಮಾಡಿ ಕಳುಹಿಸಿದ್ದಾನೆ. ‘

ಪತ್ರದಲ್ಲಿ ಹೊಂಬಾಳೆ ಸಿನಿಮಾ ಸಂಸ್ಥೆಯಿಂದ  ಹೊರಬರುತ್ತಿರುವ ಸಿನಿಮಾಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ವೈವಸ್ವತ್, ನಿಮ್ಮ ಎಲ್ಲ ಸಿನಿಮಾಗಳನ್ನು ನೋಡಿದ್ದೇನೆ. ಮೆಚ್ಚಿಕೊಂಡಿದ್ದೇನೆ. ಕೆಜಿಎಫ್-2 ಸಿನಿಮಾವೂ ದೊಡ್ಡ ಯಶಸ್ಸು ಗಳಿಸಲಿ ಎಂದು ಹಾರೈಸಿದ್ದಾನೆ.

ಈ ಪುಟ್ಟ ಬಾಲಕನ ಹಾರೈಕೆ ಹಾಗೂ ಗಿಫ್ಟ್ ನಿಂದ ಖುಷಿಯಾಗಿರುವ ನಿರ್ದೇಶಕ ಪ್ರಶಾಂತ್ ನೀಲ್, ಕೆಜಿಎಫ್-2 ಮೊದಲ ಶೋದ ಟಿಕೇಟ್ ಉಚಿತವಾಗಿ ನೀಡುವುದಾಗಿ ಟ್ವೀಟ್ ನಲ್ಲಿ ಘೋಷಿಸಿದ್ದಾರೆ.

https://twitter.com/prashanth_neel/status/1418476537578356738?s=08

ಅಲ್ಲದೇ ವೈವಸ್ವತ್ ಕಳಿಸಿರುವ ಪತ್ರ ಹಾಗೂ ಗಿಫ್ಟ್ ಹಂಚಿಕೊಂಡಿದ್ದಾರೆ.

ವೈವಸ್ವತ್ ತಾಂಡುಲ್ ಅಕ್ಕಿಕಾಳಿನ ಮೇಲೆ ಬರವಣಿಗೆ ಮಾಡುವ ಅಪರೂಪದ ಕಲಾವಿದನಾಗಿದ್ದು, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ರಾಜ್ಯ ಪ್ರಶಸ್ತಿ ಗೌರವಕ್ಕೂ ವೈವಸ್ವತ್ ಪಾತ್ರನಾಗಿದ್ದಾನೆ.

Comments are closed.