ಸೋಮವಾರ, ಏಪ್ರಿಲ್ 28, 2025
HomeCinemaಮೊದಲ ಸಿನಿಮಾದಲ್ಲೇ ಮುತ್ತಿನ ಮಳೆ : ಧಿರೇನ್- ಮಾನ್ವಿತಾ ಹಾಟ್ ಅವತಾರ ರಿಲೀಸ್

ಮೊದಲ ಸಿನಿಮಾದಲ್ಲೇ ಮುತ್ತಿನ ಮಳೆ : ಧಿರೇನ್- ಮಾನ್ವಿತಾ ಹಾಟ್ ಅವತಾರ ರಿಲೀಸ್

- Advertisement -

ಸ್ಯಾಂಡಲ್ ವುಡ್ ಈಗ ವಿಶ್ವ ಮಟ್ಟದಲ್ಲಿ ಸುದ್ದಿ ಮಾಡ್ತಿದೆ. ಕನ್ನಡದಲ್ಲೂ ಪ್ಯಾನ್ ಇಂಡಿಯಾ ಸಿನಿಮಾಗಳ ಕಾಲ ಆರಂಭವಾಗಿದೆ. ಇದರೊಂದಿಗೆ ಪ್ರೇಮಿಗಳ ದಿನಾಚರಣೆಯಂದು ರಿಲೀಸ್ ಆಗಿರೋ ಸಿನಿಮಾದ ಹಾಡೊಂದು ಸ್ಯಾಂಡಲ್ ವುಡ್ ನಲ್ಲೂ ಮೈಚಳಿ ಬಿಟ್ಟು ಹಸಿ ಬಿಸಿ ದೃಶ್ಯದ ಪರ್ವ ಕಾಲ ಆರಂಭವಾಗಿದೆ ಎಂಬ ಸೂಚನೆ ನೀಡಿದೆ. ಶಿವ 143 ಸಿನಿಮಾದಲ್ಲಿ (Shiva 143) ಹೊಸ ಹೀರೋ ಧಿರೇನ್ ಜೊತೆ ಟಗರುಪುಟ್ಟಿ ಮಾನ್ವಿತಾ ಕಾಮನ್ ಮೈಚಳಿ ಬಿಟ್ಟು ತುಟಿಗೆ ತುಟಿ ಬೆಸೆದು ಕನ್ನಡಿಗರು ಅಚ್ಚರಿ ಪಡುವಂತೆ ಮಾಡಿದ್ದಾರೆ.

ಬಾಲಿವುಡ್ ನಲ್ಲಿ ಕಾಮನ್ ಆಗಿದ್ದ ಲಿಪ್ ಲಾಕ್ ದೃಶ್ಯಗಳು ಈಗ ಚಂದನವನಕ್ಕೂ ಕಾಲಿಟ್ಟಿದೆ. ಪ್ರೇಮಿಗಳ ದಿನಾಚರಣೆಯಂದು ರಿಲೀಸ್ ಆಗಿರೋ ಶಿವ 143 ಸಿನಿಮಾದ ಹಾಡು ಈ ಹೊಸತನಕ್ಕೆ ಸಾಕ್ಷಿ ಒದಗಿಸಿದೆ. ಶಿವ143 ಸಿನಿಮಾದ ಸಾಂಗ್‌ನ್ನು ಕೇವಲ ಮುತ್ತುಗಳಿಗಾಗಿಯೇ ಹೆಣೆದಂತಿದ್ದು, ಹಾಟ್ ,ಹಾಟ್ ದೃಶ್ಯಗಳು,ಚುಂಬನ, ಬೋಲ್ಡ್ ಸೀನ್ ಗಳಿಂದ ಈ ಹಾಡು ಸಖತ್ ಹವಾ ಸೃಷ್ಟಿಸಿದೆ. ಮಾತ್ರವಲ್ಲ ಪಡ್ಡೆಗಳ ನಿದ್ದೆ ಕದ್ದಿದೆ.

ಈ ಸಿನಿಮಾದ ರಿಲೀಸ್ ಆಗಿರೋ ಹಾಟ್ ಹಾಡಿನಲ್ಲಿ ಟಗರು ಪುಟ್ಟಿ ಮಾನ್ವಿತಾ ಕಾಮತ್ ನಟಿಸಿದ್ದು, ಬೋಲ್ಡ್ ಪಾತ್ರಗಳಲ್ಲಿ ಮೈಚಳಿ ಬಿಟ್ಟು ನಟಿಸಿ ಧಿರೇನ್ ತುಟಿಗೆ ತುಟಿ ಬೆಸೆದು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಮಳೆ‌ ಹನಿಯೇ ಮಳೆ ಹನಿಯೇ ಧರೆ ಯಾಕೋ ಬೆವರಿ ನಿಂತಂತೆ ಎಂದು ಆರಂಭವಾಗೋ ಈ ಹಾಡು ನೋಡುಗರ ಎದೆಯಲ್ಲೂ ತಲ್ಲಣ ಮೂಡಿಸುವಂತಿದ್ದು, ಯುವಜನತೆಯನ್ನು, ಪಡ್ಡೆ ಹೈಕಳ ಮೈ ಏರಿಸುವಷ್ಟು ರಸಮಯವಾಗಿ ಹಾಡು ಚಿತ್ರೀಕರಣಗೊಂಡಿದೆ. ಗ್ಲಾಮರಸ್ ಬಟ್ಟೆ, ಮಾದಕ ಅವತಾರ, ಬೋಲ್ಡ್ ನಟನೆಯ ಮೂಲಕ ಈ‌ ಚಿತ್ರದಲ್ಲಿ ತಮ್ಮ‌ಮತ್ತೊಂದು ಅವತಾರವನ್ನು ಕನ್ನಡಿಗರಿಗೆ ಪರಿಚಯಿಸಿದ್ದಾರೆ.

ಹಾಡು ಎಷ್ಟು ಹಾಟ್ ಹಾಟ್ ಲುಕ್‌ನಲ್ಲಿ ಬಂದಿದೆ ಎಂದರೇ ಈ ಹಾಡನ್ನು ಒಬ್ಬರೇ ಕೂತು ನೋಡುವಂತಿದೆ ಅಂತ ಯುವಜನತೆ ಅಭಿಪ್ರಾಯಿಸುತ್ತಿದ್ದಾರೆ. ಈ ಸಿನಿಮಾದ ಮೂಲಕ ಡಾ.ರಾಜ್ ಕುಮಾರ್ ಕುಟುಂಬದ ಕುಡಿ ಹಾಗೂ ನಟ ರಾಮ್ ಕುಮಾರ್ ಪುತ್ರ ಧಿರೇನ್ ಕುಮಾರ್ ಚಂದನವನಕ್ಕೆ ಕಾಲಿಡುತ್ತಿದ್ದಾರೆ.‌ಮೊದಲ ಚಿತ್ರದಲ್ಲೇ ಮತ್ತೇರಿಸುವ ಮುತ್ತಿನ ಹಾಡುಗಳ ಜೊತೆ ಮೋಡಿ ಮಾಡಲು ಸಿದ್ಧವಾಗಿದ್ದಾರೆ.

3.45 ನಿಮಿಷದ ಈ ಹಾಡಿನಲ್ಲಿ ಬರೋಬ್ಬರಿ 30 ಕ್ಕೂ ಹೆಚ್ಚು ಕಿಸ್ಸಿಂಗ್ ಸೀನ್ ಅಳವಡಿಸಲಾಗಿದ್ದು, ಈ ಹಸಿ ಬಿಸಿ ಹಾಡಿನ ಮೂಲಕ ಧಿರೇನ್ ಕನ್ನಡಿಗರ ಮನ ಗೆಲ್ಲುತ್ತಾರಾ ಎಂಬುದನ್ನು ಕಾದುನೋಡಬೇಕಿದೆ. ಇನ್ನು ಶಿವ 143 ತೆಲುಗಿನ ಆರ್ ಎಕ್ಸ್ 143 ಸಿನಿಮಾದ ರೀಮೇಕ್ ಎನ್ನಲಾಗಿದೆ. ಈ ಸಿನಿಮಾಕ್ಕೆ ಜಯಣ್ಣ ಹಾಗೂ ಬೋಗೆಂದ್ರ್ ಹಾಗೂ ಡಾ.ಸೂರಿ ಬಂಡವಾಳ ಹೂಡಿದ್ದಾರೆ. ಅನಿಲ್ ನಿರ್ದೇಶನವಿದ್ದು ಅರ್ಜುನ್ ಜನ್ಯ ಸಂಗೀತವಿದೆ.

ಇದನ್ನೂ ಓದಿ : ಮೆಜೆಸ್ಟಿಕ್ ಸಿನಿಮಾ ಮತ್ತೆ ಬಿಡುಗಡೆಗೆ ಸಜ್ಜು; ಫೆ.16ಕ್ಕೆ ನಿಮ್ಮ ನೆಚ್ಚಿನ ಥಿಯೇಟರ್‌ಗಳಲ್ಲಿ ದರ್ಶನ್ ಅಬ್ಬರ

ಇದನ್ನೂ ಓದಿ : ಕನ್ನಡತಿ ಆದ್ಯಾ ಆನಂದ್ ಆಗಿದ್ದಾರೆ ಪಡ್ಡೆ ಹುಡುಗರ ಹೊಸ ‘ಕ್ರಷ್’!

( Manvitha Kamath and Dheeren Ramkumar Starrer Shiva 143 Movie First Song Released)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular