Degree Exams Postpone : ಪದವಿ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್ : ಪರೀಕ್ಷೆ ಒಂದು ತಿಂಗಳು ಮುಂದೂಡಿಕೆ

ಬೆಂಗಳೂರು : ಕೊರೋನಾ ಹಾಗೂ ಓಮೈಕ್ರಾನ್ ನಿಂದಾಗಿ ಶಿಕ್ಷಣ ಕ್ಷೇತ್ರ ನಲುಗಿ ಹೋಗಿದ್ದು ವಿದ್ಯಾರ್ಥಿಗಳು ಆಫ್ ಲೈನ್ ಹಾಗೂ ಆನ್ ಲೈನ್ ಕ್ಲಾಸ್ ಗಳ ಗೊಂದಲದ ನಡುವೆ ಹೈರಾಣಾಗಿದ್ದಾರೆ. ಇನ್ನೇನು ಓಮೈಕ್ರಾನ್ ಹಾಗೂ ಕೊರೋನಾ ಭೀತಿ ಕಡಿಮೆಯಾಗಿದ್ದು ಆಫ್ ಲೈನ್ ತರಗತಿಗಳು ಸರಿಯಾಗಿ ಆರಂಭವಾಗ್ತಿದೆ ಎನ್ನುವಾಗಲೇ ಹಿಜಾಬ್ ಪ್ರಕರಣ ಮಕ್ಕಳ ಎಜ್ಯುಕೇಶನ್ ಮೇಲೆ ಪರಿಣಾಮ ಬೀರಲಾರಂಭಿಸಿದೆ. ಇದರ ಮಧ್ಯೆ ಸರ್ಕಾರ ವಿದ್ಯಾರ್ಥಿಗಳ ಕಷ್ಟಕ್ಕೆ ಸ್ಪಂದಿಸಿದೆ. ಹೀಗಾಗಿ ಪರೀಕ್ಷೆಗಳನ್ನು(Degree Exams Postpone) ಮುಂದೂಡಲು ನಿರ್ಧರಿಸಿದೆ.

ಕೊರೋನಾ ಮತ್ತು ಓಮೈಕ್ರಾನ್ ಸೋಂಕು ಹೆಚ್ಚಳ ಹಾಗೂ ಅತಿಥಿ ಉಪನ್ಯಾಸಕರ ಮುಷ್ಕರದಿಂದಾಗಿ ಈ ವರ್ಷ ಪದವಿ ಕಾಲೇಜುಗಳ ಪಾಠಪ್ರವಚನದ ಮೇಲೆ ಪರಿಣಾಮ ಬೀರಿದೆ. ಶೈಕ್ಷಣಿಕ ವರ್ಷ ಕೊನೆಗೊಳ್ಳುತ್ತ ಬಂದರೂ ಇನ್ನು ಕಾಲೇಜುಗಳಲ್ಲಿ ನೀರಿಕ್ಷಿತ ಪ್ರಮಾಣದ ಪಾಠ-ಪ್ರವಚನಗಳು ಮುಗಿಯದಿಲ್ಲ. ಹೀಗಾಗಿ ವಿದ್ಯಾರ್ಥಿಗಳ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ, ಉನ್ನತ ಶಿಕ್ಷಣ ಇಲಾಖೆಗೆ ಒಳಪಡುವ ಎಲ್ಲಾ ವಿಶ್ವವಿದ್ಯಾಲಯಗಳ ಸೆಮಿಸ್ಟರ್ ಪರೀಕ್ಷೆಯನ್ನು ಒಂದು ತಿಂಗಳ ಕಾಲ ಮುಂದೂಡುವಂತೆ ಆದೇಶಿಸಿದೆ. ಈ ಬಗ್ಗೆ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕುಮಾರ್ ನಾಯಕ್ ಅವರು ವಿ.ವಿ.ಗಳ ಕುಲಸಚಿವರುಗಳಿಗೆ ಪತ್ರ ಬರೆದಿದ್ದಾರೆ.

ಅಲ್ಲದೇ ಈ ಬಗ್ಗೆ ಬುಧವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೆಲವು ವಿ.ವಿ.ಗಳು ಈಗಾಗಲೇ ಸೆಮಿಸ್ಟರ್ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದ್ದವು. ಆದರೆ, ಮೇಲೆ ಉಲ್ಲೇಖಿಸಿದ ಕಾರಣಗಳನ್ನು ನೀಡಿ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಪರೀಕ್ಷೆಯನ್ನು ಮುಂದೂಡುವಂತೆ ಕೋರಿದ್ದರು. ಹೀಗಾಗಿ, ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನಿಸಿ, ಪರೀಕ್ಷೆಯನ್ನು ಮುಂದೂಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಡಿಸೆಂಬರ್ ಜನವರಿ ವೇಳೆಗೆ ಕೊರೋನಾ ಹಾಗೂ ಓಮೈಕ್ರಾನ್ ಕಾರಣಕ್ಕೆ ಕಾಲೇಜುಗಳಿಗೆ ರಜೆ ಘೋಷಿಸುತ್ತ ಬರಲಾಗಿತ್ತು. ಇದಲ್ಲದೇ ರಾಜ್ಯದಲ್ಲಿ ಅತಿಥಿ ಉಪನ್ಯಾಸಕರು ಹಲವು ದಿನಗಳ ಕಾಲ ಮುಷ್ಕರ ನಡೆಸಿದ್ದರಿಂದ ಕಾಲೇಜುಗಳಲ್ಲಿ ಬೋದನೆ ನಡೆದಿರಲಿಲ್ಲ. ಹೀಗಾಗಿ ಈಗ ಪಠ್ಯಕ್ರಮ ಬೋಧನೆ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧವಾಗಲು ಒಂದಿಷ್ಟು ಕಾಲಾವಕಾಶ ನೀಡಲು ಸರ್ಕಾರ ನಿರ್ಧರಿಸಿದೆ. ಇದರಿಂದ ಸಿಲೆಬಸ್ ಮುಗಿಯದೇ ಪರೀಕ್ಷೆ ಎದುರಿಸೋದು ಹೇಗೆ ಎಂಬ ಆತಂಕದಲ್ಲಿದ್ದ ವಿದ್ಯಾರ್ಥಿಗಳಿಗೆ ರಿಲೀಫ್ ಸಿಕ್ಕಂತಾಗಿದೆ.

ಇದನ್ನೂ ಓದಿ : ಸಿಎ ಆರ್ಟಿಕಲ್‌ಶಿಪ್; ಭಾರತದ ಬಹು ಬೇಡಿಕೆಯ ಕೋರ್ಸ್ ಬಗ್ಗೆ ಇಲ್ಲಿದೆ ಪೂರ್ತಿ ಮಾಹಿತಿ

ಇದನ್ನೂ ಓದಿ : ಅಂಚೆ ಇಲಾಖೆಯಲ್ಲಿ ದ್ವಿತೀಯ ಪಿಯು ಮುಗಿಸಿದವರಿಗೆ ಉದ್ಯೋಗಾವಕಾಶ; 35 ಸಾವಿರ ಸಂಬಳ

( hijab row Karnataka degree exams postpone one month)

Comments are closed.