ಸ್ಯಾಂಡಲ್ ವುಡ್ ಚೋಟಾ ಸೆಲೆಬ್ರೆಟಿ ರಾಯನ್ ರಾಜ್ ಸರ್ಜಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮಗನ ಮೊದಲು ಹುಟ್ಟುಹಬ್ಬದ ಸಿದ್ಧತೆ ಬಗ್ಗೆ ಮೇಘನಾ ಎಕ್ಸೈಟ್ ಆಗಿದ್ದು ಪೋಸ್ಟ್ ನಲ್ಲಿ ಖುಷಿ ಹಂಚಿಕೊಂಡಿದ್ದಾರೆ.

ರಾಯನ್ ರಾಜ್ ಸರ್ಜಾ. ಚಿರು ಹಾಗೂ ಮೇಘನಾ ಪ್ರೇಮದಕುಡಿ. ತಂದೆಯನ್ನು ಕಳೆದುಕೊಂಡು ನಾಲ್ಕು ತಿಂಗಳ ಬಳಿಕ ಈ ಭುವಿಗೆ ಬಂದ ರಾಯನ್ ಸರ್ಜಾಗೆ ಇಂದಿಗೆ ಒಂದು ವರ್ಷದ ಸಂಭ್ರಮ.

ಮೇಘನಾ ರಾಜ್ ಹುಟ್ಟುಹಬ್ಬವನ್ನು ಖಾಸಗಿಯಾಗಿ ಆಚರಿಸಲು ನಿರ್ಧರಿಸಿದ್ದು ಮೇಘನಾ ನಿವಾಸದಲ್ಲೇ ಹುಟ್ಟುಹಬ್ಬದ ಆಚರಣೆ ನಡೆಯಲಿದೆ. ಆದರೆ ಖಾಸಗಿಯಾಗಿ ನಡೆಯಲಿರೋ ಈ ಹುಟ್ಟುಹಬ್ಬ ಸಮಾರಂಭಕ್ಕೆ ಕೇವಲ ಆಪ್ತರಿಗೆ ಮಾತ್ರ ಆಹ್ವಾನನೀಡಲಾಗಿದೆಯಂತೆ.

ಮಗ ಹುಟ್ಟುಹಬ್ಬಕ್ಕೆ ಸಿದ್ಧವಾಗ್ತಿರೋ ವಿಡಿಯೋ ಹಾಗೂ ಚಿರು ಹಾಗೂ ಮೇಘನಾ ಆಪ್ತ ಸ್ನೇಹಿತ ಪನ್ನಗಪುತ್ರ ರಾಯನ್ ಬರ್ತಡೇಗೆ ಕೇಕ್ ಸಿದ್ಧಪಡಿಸುತ್ತಿರುವ ವಿಚಾರಗಳನ್ನು ಫನ್ನಿಯಾಗಿ ಮೇಘನಾ ಇನ್ ಸ್ಟಾ ಗ್ರಾಂ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ.

ಕಳೆದ 2020 ರ ಜೂನ್ ದಲ್ಲಿ ಚಿರು ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದು ಚಿರು ನಿಧನದ ನಾಲ್ಕು ತಿಂಗಳ ಬಳಿಕ ಮೇಘನಾ ರಾಜ್ ಅಕ್ಟೋಬರ್ 22 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು.

ಮಗು ಜನಿಸಿದ ಬರೋಬ್ಬರಿ 10 ತಿಂಗಳ ಬಳಿಕ ಇತ್ತೀಚಿಗೆ ಚಿರು ಹಾಗೂ ಸುಂದರ್ ರಾಜ್ ಫ್ಯಾಮಿಲಿ ಸೇರಿ ಜ್ಯೂನಿಯರ್ ಚಿರು ಗೆ ನಾಮಕರಣ ಮಾಡಿದ್ದು ರಾಯನ್ ರಾಜ್ ಸರ್ಜಾ ಎಂದು ಹೆಸರಿಡಲಾಗಿದೆ. ಈಗ ತಂದೆಯ ನೆನಪುಗಳ ಜೊತೆಗೇ ಬೆಳೆದು ಬಂದ ಮುದ್ದು ಕಂದ ರಾಯನ್ ರಾಜ್ ಸರ್ಜಾ ವರ್ಷದ ಸಂಭ್ರಮದಲ್ಲಿದ್ದು ಮೇಘನಾ ಈ ಖುಷಿಯನ್ನು ಸೆಲಿಬ್ರೆಟ್ ಮಾಡ್ತಿದ್ದಾರೆ.
ಇದನ್ನೂ ಓದಿ : Meghanaraj ಹೊಸ ಪೋಟೋ ಶೂಟ್ : ಮಹಾರಾಣಿಯಾಗಿ ಮಿಂಚಿದ ಮೇಘನಾ
ಇದನ್ನೂ ಓದಿ : ಮಗನನ್ನು ಚಿರು ಕನಸಿನಂತೆ ಬೆಳೆಸುತ್ತೇನೆ…! ತೊಟ್ಟಿಲು ಶಾಸ್ತ್ರದಂದು ಮನದಾಳ ತೆರೆದಿಟ್ಟ ಮೇಘನಾರಾಜ್ ಸರ್ಜಾ
( First Birthday Of Meghana Raj And Chiranjeevi Sarja Son Raayan Raj Saraja 1st Birthday . You know what a birthday celebration looks like )