ಯುವ ಕ್ರಿಕೆಟ್‌ ಆಟಗಾರ್ತಿಗೆ ಲೈಂಗಿಕ ಕಿರುಕುಳ : ಭಾರತದ ಕ್ರಿಕೆಟ್ ಕೋಚ್‌ ವಿರುದ್ದ ಪ್ರಕರಣ ದಾಖಲು

ಪುದುಚೇರಿ : ಕ್ರಿಕೆಟ್‌ ತರಬೇತಿಯನ್ನು ನೀಡುವ ವೇಳೆಯಲ್ಲಿ 16 ವರ್ಷದ ಯುವ ಕ್ರಿಕೆಟ್‌ ಆಟಗಾರ್ತಿಗೆ ಭಾರತ ತಂಡ ಕ್ರಿಕೆಟ್‌ ತರಬೇತುದಾರ ಓರ್ವರು ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಪೊಲೀಸರು ಇದೀಗ ತರಬೇತುದಾರನ ವಿರುದ್ದ ಮಕ್ಕಳ ಲೈಂಗಿಕ ದೌರ್ಜನ್ಯ (ಪೊಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಪುದುಚೇರಿಯ ಕ್ರಿಕೆಟ್ ಅಸೋಸಿಯೇಷನ್ ​​(ಸಿಎಪಿ)ನ ತರಬೇತುದಾರ ತಮ್ಮರೈಕಣ್ಣನ್‌ ಎಂಬವರೇ ಇದೀಗ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ತರಬೇತುದಾರ. ಕೋಚ್ ಕಮ್ ಕ್ರಿಕೆಟರ್ ಆಗಿರುವ ತಮ್ಮರೈಕಣ್ಣನ್‌ ತನ್ನ ಭುಜ, ಬೆನ್ನು ಮತ್ತು ಎದೆಯನ್ನು ಸ್ಪರ್ಶಿಸಿ ಕಿರುಕುಳ ನೀಡಿದ್ದಾರೆ ಎಂದು ಯುವ ಆಟಗಾರ್ತಿಯೋರ್ವಳು ಆರೋಪ ಮಾಡಿದ್ದಾಳೆ.

ತನ್ನನ್ನು ತಮ್ಮರೈಕಣ್ಣನ್‌ ಪ್ರೀತಿಸುತ್ತಿರುವುದಾಗಿ ಹಲವಾರು ಸಂದೇಶಗಳನ್ನು ಕಳುಹಿಸಿದ್ದರು. ತಾನು ಅವರ ಪ್ರೀತಿಗೆ ಮರು ಪ್ರತಿಕ್ರಿಯಿಸದೇ ಇದ್ದಾಗ, ತನಗೆ ಕ್ರಿಕೆಟ್‌ ತರಬೇತಿಯನ್ನೇ ನೀಡುವುದಿಲ್ಲ ಎಂದು ಬೆದರಿಕೆಯೊಡ್ಡಿದ್ದಾರೆ ಎಂದು ಯುವತಿ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ತನ್ನ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯದ ವಿಷಯವನ್ನು ಕ್ರಿಕೆಟ್‌ ಅಸೋಸಿಯೇಶನ್‌ ಮುಂದೆಯೂ ತಂದಿದ್ದೇನೆ. ಆದರೆ ಅಸೋಸಿಯೇಶನ್‌ ಅವರು ಯಾವುದೇ ಕ್ರಮವನ್ನೂ ಕೈಗೊಂಡಿಲ್ಲ ಎಂದು ಅಪ್ರಾಪ್ತ ಯುವತಿ ಗಂಭೀರ ಆರೋಪವನ್ನು ಮಾಡಿದ್ದಾರೆ.

ಯುವ ಕ್ರಿಕೆಟ್‌ ಆಟಗಾರ್ತಿ ಯಾರ ವಿರುದ್ಧವೂ ಲೈಂಗಿಕ ಕಿರುಕುಳದ ದೂರು ನೀಡಿಲ್ಲ ಎಂದು ಪುದುಚೇರಿಯ ಕ್ರಿಕೆಟ್ ಅಸೋಸಿಯೇಷನ್ ​​(ಸಿಎಪಿ) ಕಾರ್ಯದರ್ಶಿ ಚಂದ್ರು ಹೇಳಿದ್ದಾರೆ. ಆದರೆ ಕೋಚ್‌ ತಮೈರಕ್ಕಣ್ಣನವರು ತಮ್ಮ ಮಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಹುಡುಗಿಯ ತಾಯಿ ದೂರು ನೀಡಿದ್ದಾರೆ ಎಂದು ದೂರು ನೀಡಿದ್ದಾರೆ. ಯುವ ಕ್ರಿಕೆಟ್‌ ಆಟಗಾರ್ತಿ ನೀಡಿದರ ದೂರಿನ ಹಿನ್ನೆಲೆಯಲ್ಲಿ ಕೋಚ್‌ ಮಾತ್ರವಲ್ಲದೇ ಕ್ರಿಕೆಟ್ ಅಸೋಸಿಯೇಶನ್ ಆಫ್ ಪುದುಚೇರಿಯ (ಸಿಎಪಿ) ನಾಲ್ವರು ಪದಾಧಿಕಾರಿಗಳ ವಿರುದ್ಧವೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಇನ್ನು ಕ್ರಿಕೆಟ್ ಅಸೋಸಿಯೇಶನ್ ಆಫ್ ಪುದುಚೇರಿಯ (ಸಿಎಪಿ) ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ನಡೆಸಿದ್ದು, ತಾಮ್ರೈಕ್ಕನನ್ ಅವರನ್ನು ಒಂದು ವರ್ಷಗಳ ಕಾಲ ಅಮಾನತು ಮಾಡಿದೆ. ಚೈಲ್ಡ್ ಲೈನ್ ಬಾಲಕಿಯ ದೂರನ್ನು ಮೆಟ್ಟುಪಾಳ್ಯಂ ಪೊಲೀಸರಿಗೆ ರವಾನಿಸಿದ್ದು, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಭಾರತ – ಪಾಕಿಸ್ತಾನ ನಡುವಿನ ಪಂದ್ಯ ರದ್ದು : ಸಷ್ಟನೆ ಕೊಟ್ಟ ಬಿಸಿಸಿಐ

ಇದನ್ನೂ ಓದಿ : ಮತ್ತೆ ತರಬೇತಿಗೆ ಮರಳಿದ ಚಿನ್ನದ ಹುಡುಗ ನೀರಜ್‌ ಚೋಪ್ರಾ

Indian cricket coach Thamaraikannan booked under POCSO for sexually harassing 16-year-old girl cricketer

Comments are closed.