ಡಿಸಿಪಿ ಹರಿರಾಂ ಶಂಕರ್‌ ಕಾರಿನ ಮೇಲೆ ಲಾರಿ ಹತ್ತಿಸಲು ಯತ್ನ : ಇಬ್ಬರು ಮರಳು ಕಳ್ಳರು ಪೊಲೀಸ್‌ ವಶಕ್ಕೆ

ಮಂಗಳೂರು : ಮರಳು ದಂಧೆಕೋರರು ಡಿಸಿಪಿ ಹರಿರಾಂ ಶಂಕರ್‌ ಅವರ ಕಾರಿನ ಮೇಲೆ ಲಾರಿ ಹತ್ತಿಸಲು ಯತ್ನಿಸಿದ ಘಟನೆ ಮಂಗಳೂರು ನಗರದ ಹೊರವಲಯದ ಅಡ್ಯಾರ್‌ ಸಮೀಪದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆದಿರುವ ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಮರಳು ಟಿಪ್ಪರ್‌ ಲಾರಿ ಚಾಲಕ ಅಬ್ದುಲ್‌ ಇಸಾಕ್‌, ಆಲ್ಟೋ ಕಾರು ಚಾಲಕ ಮೊಯಿದ್ದೀನ್‌ ಅಪ್ಸರ್‌ ಎಂಬವರೇ ಬಂದಿತ ಆರೋಪಿಗಳಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಪ್ರಕರಣ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸರು ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆಗೆ ಇಳಿದಿದ್ದಾರೆ. ಅಂತೆಯೇ ಡಿಸಿಪಿ ಹರಿರಾಂ ಶಂಕರ್‌ ಅವರು ನಗರದ ಹೊರವಲಯದ ಚೆಕ್‌ಪೋಸ್ಟ್‌ ಬಳಿಯಲ್ಲಿ ತಪಾಸಣಾ ನಿರತರಾಗಿದ್ದ ವೇಳೆಯಲ್ಲಿ ಅಡ್ಯಾರಿನ ನೇತ್ರಾವತಿ ನದಿಯಿಂದ ಮರಳು ತುಂಬಿಸಿಕೊಂಡು ಲಾರಿಯೊಂದು ಬಂದಿತ್ತು. ಈ ವೇಳೆಯಲ್ಲಿ ಲಾರಿಯನ್ನು ನಿಲ್ಲಿಸುವಂತೆ ಪೊಲೀಸರು ಸೂಚನೆಯನ್ನು ನೀಡಿದ್ದಾರೆ. ಆದರೆ ಲಾರಿಯ ಹಿಂದಿನಿಂದ ಬಂದ ದುಷ್ಕರ್ಮಿಗಳು ಲಾರಿ ನಿಲ್ಲಿಸದಂತೆ ತಿಳಿಸಿದ್ದಾರೆ.

ಇದನ್ನೂ ಓದಿ : ಇಂಟರ್ನ್‌ಶಿಪ್‌ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ : ಖ್ಯಾತ ವಕೀಲನ ವಿರುದ್ದ FIR

ಇದನ್ನೂ ಓದಿ : ಮಂಗಳೂರು : ಮದ್ಯಪಾನಕ್ಕೆ ಹಣ ನಿರಾಕರಿಸಿದ್ದಕ್ಕೆ ಸ್ನೇಹಿತನ ಹತ್ಯೆ : 7 ತಿಂಗಳ ಬಳಿಕ ಆರೋಪಿ ಅರೆಸ್ಟ್‌

ಈ ವೇಳೆಯಲ್ಲಿ ವಾಹನ ತಡೆಯಲು ಬಂದ ಪೊಲೀಸರ ಮೇಲೆಯೇ ಲಾರಿ ಹತ್ತಿಸಲು ಯತ್ನಿಸಿ, ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಗ್ರಾಮಾಂತರ ಠಾಣೆಯ ಪೊಲೀಸರು ಬಂಟ್ವಾಳ ಠಾಣೆಯ ಪೊಲೀಸರ ಸಹಕಾರದೊಂದಿಗೆ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

DCP Hariram Shankar attempts to board a Sand Mafiya lorry : Arrested 2 Drivers

Comments are closed.