ಸಾಲು ಸಾಲು ಸಿನಿಮಾಗಳಲ್ಲಿ ವಿಲನ್, ಹೀರೋ ಪಾತ್ರದಲ್ಲಿ ಮಿಂಚಲು ಸಿದ್ಧವಾಗಿರೋ ನಟ ಡಾಲಿ ಧನಂಜರ್ ಗುಳಿಕೆನ್ನೆಯ ಬೆಡಗಿ ರಚಿತಾ ರಾಮ್ ಜೊತೆ ಮಾನ್ಸೂನ್ ರಾಗ ಹಾಡುತ್ತಿದ್ದಾರೆ.

ಇದೇನು ಹೊಸ ವಿಷ್ಯಾ ಅಂದ್ರಾ….ಇಷ್ಟಕ್ಕೂ ಧನಂಜಯ್ ಮತ್ತು ರಚಿತಾ ರಾಮ್ ಮಾನ್ಸೂನ್ ರಾಗ ಹಾಡ್ತಿರೋದಕ್ಕೇ ವಿಶೇಷ ಅರ್ಥ ಹುಡುಕಬೇಡಿ. ಮಾನ್ಸೂನ್ ರಾಗಾ ಧನಂಜಯ್ ಮತ್ತು ರಚಿತಾ ರಾಮ್ ಮೊದಲ ಬಾರಿಗೆ ತೆರೆಗೆ ಬರ್ತಿರೋ ಸಿನಿಮಾದ ಹೆಸರು.ಸದ್ಯ ಮಾನ್ಸೂನ್ ರಾಗಾ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಅಭಿಮಾನಿಗಳ ಮನಗೆದ್ದಿದೆ. ಮೊದಲ ಬಾರಿಗೆ ಸ್ಟಾರ್ ನಟರನ್ನು ಬಿಟ್ಟು ಹೊಸ ನಾಯಕರೊಬ್ಬರಿಗೆ ರಚಿತಾ ರಾಮ್ ನಾಯಕಿಯಾಗಿದ್ದಾರೆ.

ಸಖತ್ ಆಕ್ಷ್ಯನ್ ದೃಶ್ಯಗಳಿರೋ ಈ ಸಿನಿಮಾದಲ್ಲಿ ಧನಂಜಯ್ ಕ್ಲಾಸ್ ಆಂಡ್ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರೇ, ರಚಿತಾರಾಮ್ ಕಾಲ್ ಗರ್ಲ್ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗ್ತಿದೆ.
ಪುಷ್ಪಕ ವಿಮಾನ ಖ್ಯಾತಿಯ ನಿರ್ದೇಶಕ ರವೀಂದ್ರನಾಥ್ ಈ ಸಿನಿಮಾಗೆ ಆಕ್ಷ್ಯನ್ ಕಟ್ ಹೇಳುತ್ತಿದ್ದು, ವಿಖ್ಯಾತ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಸಂಪೂರ್ಣ ಸಿನಿಮಾ ರೆಟ್ರೋ ಸ್ಟೈಲಿನಲ್ಲಿ ಮೂಡಿಬಂದಿದ್ದು, ಚಿತ್ರೀಕರಣಕ್ಕೆ ಆಗುಂಬೆ, ಚಿಕ್ಕಮಗಳೂರು, ಶೃಂಗೇರಿ,ಗೋವಾವನ್ನು ಆಯ್ಕೆಕೊಂಡಿದೆ ಚಿತ್ರತಂಡ.

ಸದ್ಯ ಸಿನಿಮಾ ಬಹುತೇಕ ಶೂಟಿಂಗ್ ಮುಗಿದಿದ್ದು, ರಿಲೀಸ್ ಡೇಟ್ ಅನೌನ್ಸ್ ಆಗಿಲ್ಲ. ರಚಿತಾರಾಮ್ ರಚ್ಚು ಲವ್ ಯೂ ಸೇರಿದಂತೆ ಹಲವು ಸಿನಿಮಾದಲ್ಲಿ ಬ್ಯುಸಿಯಾಗಿದ್ದರೇ. ಡಾಲಿ ಧನಂಜಯ್ ಹೆಡ್ ಬುಶ್ ಚಿತ್ರ ನಿರ್ಮಾಣ ಹಾಗೂ ನಟನೆಯಲ್ಲಿ ತೊಡಗಿಕೊಂಡಿದ್ದಾರೆ.