ಕೊರೊನಾ ನಿಯಂತ್ರಣಕ್ಕೆ ಬಾರದೆ ಶಾಲಾರಂಭ ಬೇಡ : ಸಿದ್ದರಾಮಯ್ಯ

ಬೆಂಗಳೂರು : ಕರ್ನಾಟಕದಲ್ಲಿ ಕೊರೊನಾ ವೈರಸ್‌ ಸೋಂಕು ನಿಯಂತ್ರಣಕ್ಕೆ ಬಾರದ ಹೊರತು ಶಾಲಾರಂಭ ಮಾಡುವುದು ಬೇಡ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರಕಾರಕ್ಕೆ ಸಲಹೆ ನೀಡಿದ್ದಾರೆ.

ರಾಜ್ಯದಲ್ಲಿ ಕೊರೊನಾ ಮೂರನೇ ಅಲೆಯನ್ನು ನಿಯಂತ್ರಣಕ್ಕೆ ತರುವುದು ಸರಕಾರದ ಜವಾಬ್ದಾರಿಯಾಗಿದೆ. ರಾಜ್ಯದ ಕೇರಳ ಗಡಿಭಾಗದ ಕೊಡಗು, ದಕ್ಷಿಣ ಕನ್ನಡ ಹಾಗೂ ಮೈಸೂರು ಸೇರಿದಂತೆ ಗಡಿಭಾಗದ ಜಿಲ್ಲೆಗಳಲ್ಲಿ ಕಠಿಣ ಕ್ರಮಕೈಗೊಳ್ಳಬೇಕು. ಕೊರೊನಾ ನಿಯಂತ್ರಣ ಬಾರದೇ ಇದ್ದರೆ ಶಾಲೆಗಳನ್ನು ಆರಂಭಿಸುವುದು ಬೇಡ ಎಂದು ಹೇಳಿದ್ದಾರೆ.

ಒಂದು ವರ್ಷ ಹಬ್ಬ, ಜಾತ್ರೆ ಮಾಡದಿದ್ರೆ ಏನೂ ಸಮಸ್ಯೆಯಿಲ್ಲ. ಮನೆಯಲ್ಲಿಯೇ ಗಣಪತಿಯನ್ನು ಕೂಡಿಸಿ ಆಚರಣೆ ಮಾಡಲಿ. ವೀಕೆಂಡ್‌ ಲಾಕ್‌ ಡೌನ್‌ ಜಾರಿ ಮಾಡಿದ್ರೆ ಸಾಲದು ಇನ್ನೂ ಕಠಿಣ ನಿಯಮಗಳನ್ನು ಜಾರಿಗೆ ತನ್ನಿ, ಜನರಿಗೆ ಕೊರೊನಾ ಲಸಿಕೆ ನೀಡುವುದು ರಾಜ್ಯ ಹಾಗೂ ಕೇಂದ್ರ ಸರಕಾರಗಳ ಜವಾಬ್ದಾರಿಯಾಗಿದೆ ಎಂದಿದ್ದಾರೆ.

Comments are closed.