Zero Traffic CM : ನನಗೆ ಝೀರೋ ಟ್ರಾಫಿಕ್‌ ಬೇಡ ಎಂದ ಸಿಎಂ ಬೊಮ್ಮಾಯಿ

ಬೆಂಗಳೂರು : ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡುತ್ತಲೇ ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ಹಲವು ಬದಲಾವಣೆಗಳನ್ನು ತರುತ್ತಿದ್ದಾರೆ. ಇದೀಗ ನನಗೆ ಝೀರೋ ಟ್ರಾಫಿಕ್‌ ಬೇಡಾ ಅನ್ನುವ ಮೂಲಕ ವಿಐಪಿ ಸಂಸ್ಕೃತಿಗೆ ತಿಲಾಂಜಲಿ ಹೇಳಲು ಮುಂದಾಗಿದ್ದಾರೆ.

ಬೆಂಗಳೂರು ನಗರದಲ್ಲಿ ಝೀರೋ ಟ್ರಾಫಿಕ್‌ ನಿರಾಕರಿಸಿರುವ ಸಿಎಂ ತಮ್ಮ ಸಂಚಾರದ ವೇಳೆಯಲ್ಲಿ ಸಿಗ್ನಲ್‌ ಮಾತ್ರವೇ ಫ್ರೀ ಮಾಡಿಕೊಡುವಂತೆ ಸೂಚನೆಯನ್ನು ನೀಡಿದ್ದಾರೆ. ಒಂದೊಮ್ಮೆ ತಾನು ಸಂಚರಿಸುವ ವೇಳೆಯಲ್ಲಿ ಅಂಬ್ಯುಲೆನ್ಸ್‌ ಬಂದರೆ ಅಂತಹ ಸಂದರ್ಭದಲ್ಲಿ ಅಂಬ್ಯುಲೆನ್ಸ್‌ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಅವರು ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ.

ಇದನ್ನೂ ಓದಿ : ಬೊಕ್ಕಸ ತುಂಬಿಸಲು ಬಿಗಿಕ್ರಮ….! ಸರ್ಕಾರಿ ಸಭೆಯಲ್ಲಿ ಹೂಗುಚ್ಛ,ಹಾರ, ತುರಾಯಿಗೆ ಬಿತ್ತು ಬ್ರೇಕ್….!!

ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ಸರಕಾರಿ ಕಾರ್ಯಕ್ರಮಗಳಿಗೆ ಹಾರತುರಾರಿ ತರುವುದಕ್ಕೆ ಈಗಾಗಲೇ ನಿಷೇಧ ಹೇರಿದ್ದರು. ಇದರ ಬೆನ್ನಲ್ಲೇ ಇದೀಗ ಮುಖ್ಯಮಂತ್ರಿಗಳಿಗೆ ನೀಡಲಾಗುತ್ತಿದ್ದ ಝೀರೋ ಟ್ರಾಫಿಕ್‌ ವ್ಯವಸ್ಥೆಯನ್ನೇ ನಿರಾಕರಿಸಿರುವುದು ಸಾರ್ವಜನಿಕ ವಲಯದಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ : ಅಣ್ಣಾಮಲೈ ಪ್ರತಿಭಟನೆಗೆ I Don’t Care : ಅವನನ್ನು ದೊಡ್ಡ ವ್ಯಕ್ತಿ ಮಾಡಬೇಡಿ : ಸಿಎಂ ಬೊಮ್ಮಾಯಿ

Comments are closed.