ನಟ ಸಂಚಾರಿ ವಿಜಯ್ ಇನ್ನಷ್ಟು ಕಾಲ ಸ್ಯಾಂಡಲ್ ವುಡ್ ನಲ್ಲಿ ಬಾಳಿ ಬದುಕುವ ಮುನ್ನವೇ ಸರಿದು ಹೋಗಿದ್ದಾರೆ. ಕಾಯ ಅಳಿದರೂ ಕಾಯಕ ನೆನಪಾಗುವಂತೆ ಸಂಚಾರಿ ವಿಜಯ್ ಅಭಿನಯದ ಒಂದೊಂದೇ ಸಿನಿಮಾಗಳು ರಿಲೀಸ್ ಗೆ ಸಿದ್ಧವಾಗಿದೆ. ಈ ಪೈಕಿ ಪುಕ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ ತೆರೆಗೆ ಬರಲು ಸಿದ್ಧವಾಗಿದ್ದು, ಪ್ರಿಮಿಯರ್ ಶೋ ವೇಳೆ ವಿಜಯ್ ಗೆ ಚಿತ್ರತಂಡ ವಿಭಿನ್ನವಾಗಿ ಗೌರವಿಸಿ ಸ್ಮರಿಸಿದೆ.

ಪುಕ್ಸಟ್ಟೆ ಲೈಫು ಪುರುಸೊತ್ತೆ ಇಲ್ಲ ಸಿನಿಮಾ ಸೆ.24 ರಂದು ರಾಜ್ಯದಾದ್ಯಂತ ತೆರೆ ಕಾಣಲಿದ್ದು, ಮೈಸೂರಿನಲ್ಲಿ ಬುಧವಾರ ಸಂಜೆ ನಡೆದ ಪುಕ್ಸಟ್ಟೆ ಲೈಫ್ ಪುರುಸೊತ್ತೆ ಇಲ್ಲ ಸಿನಿಮಾದ ಪ್ರೀಮಿಯರ್ ಶೋ ನಡೆಯಿತು. ಈ ವೇಳೆ ಸಂಚಾರಿ ವಿಜಯ್ ಗೆ ಚಿತ್ರತಂಡ ವಿಭಿನ್ನವಾಗಿ ನಮನ ಸಲ್ಲಿಸಿದೆ.
ಶೋ ವೇಳೆ ಸಂಚಾರಿ ವಿಜಯ್ ಗೆ ಸೀಟ್ ವೊಂದನ್ನು ಮೀಸಲಿರಿಸುವ ಮೂಲಕ ಶಾರೀರಿಕವಾಗಿ ವಿಜಯ್ ನಮ್ಮೊಂದಿಗೆ ಇಲ್ಲದಿದ್ದರೂ ಭಾವನಾತ್ಮಕವಾಗಿ ಹಾಗೂ ತಮ್ಮ ಕೆಲಸದ ಮೂಲಕ ಇಲ್ಲೇ ಇದ್ದಾರೆ ಎಂಬ ಭಾವನೆಯನ್ನು ಪ್ರದರ್ಶಿಸಿದ್ದಾರೆ.

ಚಿತ್ರತಂಡದ ಈ ವಿಭಿನ್ನ ಗೌರವದ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಂಚಾರಿ ವಿಜಯ್ ಅಭಿಮಾನಿಗಳು ಪೋಟೋ ನೋಡಿ ಕಣ್ಣೀರು ಮಿಡಿದಿದ್ದಾರೆ. ಪುಕ್ಸಟ್ಟೆ ಲೈಫು ಪುರುಸೊತ್ತೆ ಇಲ್ಲ ಸಿನಿಮಾದ ಚಿತ್ರಕತೆಯನ್ನು ಸಂಚಾರಿ ವಿಜಯ್ ಸ್ವತಃ ಸಿದ್ಧಪಡಿಸಿದ್ದು,ಸಿನಿಮಾದಲ್ಲಿ ಬೀಗ ರಿಪೇರಿ ಮಾಡುವ ಮುಸ್ಲಿಂ ಯುವಕನ ಪಾತ್ರದಲ್ಲಿ ನಟಿಸಿದ್ದಾರೆ.
ಸಂಚಾರಿ ವಿಜಯ್ ಈ ಚಿತ್ರವನ್ನು ನಟ ಸುದೀಪ್ ಸಹ ವೀಕ್ಷಿಸಿದ್ದು, ಸಂಚಾರಿ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರಂತೆ. ಪುಕ್ಸಟ್ಟೆ ಲೈಫ್ ಸಿನಿಮಾದ ಟ್ರೇಲರ್ ಹಾಗೂ ಪ್ರಮೋಶನಲ್ ವಿಡಿಯೋ ಎಲ್ಲ ಗಮನ ಸೆಳೆದಿದ್ದು, ಚಿತ್ರವೂ ಸಹ ಜನ ಮನಗೆಲ್ಲುವ ಭರವಸೆ ಮೂಡಿಸಿದೆ. ಗುರುವಾರ ಬೆಂಗಳೂರಿನಲ್ಲೂ ಪ್ರಿಮಿಯರ್ ಶೋ ನಡೆಯಲಿದ್ದು, ಶುಕ್ರವಾರ ರಾಜ್ಯದಾದ್ಯಂತ ಸಿನಿಮಾ ತೆರೆಕಾಣಲಿದೆ.
ಇದನ್ನೂ ಓದಿ : ಪುಕ್ಸಟ್ಟೆ ಲೈಫು ಸಿನಿಮಾ ಪ್ರಮೋಶನ್ ಗೆ ಬಂದ ಸಂಚಾರಿ ವಿಜಯ್ : ಸಾಥ್ ಕೊಟ್ರು ಸ್ಯಾಂಡಲ್ ವುಡ್ ಸ್ಟಾರ್ಸ್
ಇದನ್ನೂ ಓದಿ : ಜಗ್ಗೇಶ್ ಮಾಲಿಕತ್ವದಲ್ಲಿ ರಾಘವೇಂದ್ರ್ ಸ್ಟೋರ್ : ಹೊಂಬಾಳೆ ಫಿಲ್ಸ್ಮಂ ಕೊಟ್ಟಿದೆ ಬ್ರೇಕಿಂಗ್ ನ್ಯೂಸ್
(Actor Sanchari vijays movie pikastte life releasing on September 24)