ಭಾನುವಾರ, ಏಪ್ರಿಲ್ 27, 2025
HomeCinemaAnanya Bhat: ಸಿನಿಮಾ ನಾಯಕಿಯಾದ ಗಾಯಕಿ: ಅನನ್ಯಾ ನಟನೆಯ ಸೇನಾಪುರ ಟೀಸರ್ ರಿಲೀಸ್

Ananya Bhat: ಸಿನಿಮಾ ನಾಯಕಿಯಾದ ಗಾಯಕಿ: ಅನನ್ಯಾ ನಟನೆಯ ಸೇನಾಪುರ ಟೀಸರ್ ರಿಲೀಸ್

- Advertisement -

ಸೋಜುಗದ ಸೂಜು ಮಲ್ಲಿಗೆ ಅಂತ ಮಾದೇವನ ಮೇಲೆ ಹಾಡು ಹೇಳಿ ಪ್ರಸಿದ್ಧಿ ಗಳಿಸಿದ ಗಾಯಕಿ ಅನನ್ಯಾ ಭಟ್ ಬೆಳ್ಳಿ ತೆರೆ ಮೇಲೂ ಮಿಂಚಲು ಬರುತ್ತಿದ್ದಾರೆ. ಅನನ್ಯಾ ಭಟ್ ನಾಯಕಿಯಾಗಿರೋ ಸೇನಾಪುರ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ.

ವೆಬ್ ಸೀರಿಸ್ ಗಾಗಿ ಹೆಣೆಯಲಾದ ಕತೆಯನ್ನು ಬಳಿಕ ಚಿತ್ರಕತೆಯಾಗಿ ಪರಿವರ್ತಿಸಿದ್ದಾರಂತೆ ನಿರ್ದೇಶಕ ಗುರುಪ್ರಸಾದ್. ಬಳ್ಳಾರಿಯ ಸುತ್ತಮುತ್ತಲ ಬೆಳವಣಿಗೆ ಆಧರಿಸಿ ಈ ಸಿನಿಮಾ ಮೂಡಿಬಂದಿದೆ. ಸಮಾಜ ಮತ್ತು ಪ್ರಕೃತಿ ಯಾವುದೇ ಬೇಧಭಾವ ಮಾಡದೇ ಎಲ್ಲವನ್ನು ಎಲ್ಲರಿಗೂ ನೀಡಿರುತ್ತದೆ. ಆದರೆ ನಾವೇ ಅದನ್ನು ವರ್ಗದಲ್ಲಿ ಹಂಚಿಕೊಂಡಿದ್ದೇವೆ. ಈ ಕತೆಯನ್ನು ಹೆಣ್ಣಿಂದ ಹೇಳಿಸುವ ಪ್ರಯತ್ನ ಸಿನಿಮಾದಲ್ಲಿದೆಯಂತೆ.

ರಂಗಭೂಮಿ ಹಿನ್ನೆಲೆಯಿಂದ ಬಂದ ಗಾಯಕಿ ಅನನ್ಯಾ ಭಟ್ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು, ನಟನೆಯ ಜೊತೆಗೆ ಸಿನಿಮಾದ ಎರಡು ಹಾಡಿಗೆ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರಂತೆ. ಅನನ್ಯಾ ಭಟ್ ಟೀಸರ್ ಗೂ ಧ್ವನಿ ನೀಡಿದ್ದು ಇದು ಚಾಲೆಂಜಿಂಗ್ ಅನುಭವ ಅಂತಾರೆ ಅನನ್ಯಾ ಭಟ್.

ಅಮಿತ್ ಕುಮಾರ್ ಹಾಗೂ ರಾಹುಲ್ ದೇವ್ ಜಂಟಿಯಾಗಿ ವಿಮ್ ಲಾಸ್ ಎಂಟರಟೇನ್ಮೆಂಟ್ ಹಾಗೂ ಅಂಶ ಕ್ರಿಯೇಶನ್ಸ್ ಮೂಲಕ ಸಿನಿಮಾಕ್ಕೆ ಬಂಡವಾಳ  ಹೂಡಿದ್ದಾರೆ. ತಾರಾಗಣದಲ್ಲಿ ದಿನೇಶ್ ಮಂಗಳೂರು, ಬಿ.ಎಂ.ಗಿರಿರಾಜ್, ಸಿಂಧೂ ಶೇಖರ್ ರಾಜ್, ರೀನ್, ಅಮೂಲ್ಯ ಪರಮೇಶ್ ಮುಂತಾದವರು ನಟಿಸಿದ್ದು, ಪ್ರಶಾಂತ್ ಸಾಗರ್ ಛಾಯಾಗ್ರಹಣವಿದೆ.

ಮಂಗಳೂರು ಸಂಪೆಕಟ್ಟೆ ಸುತ್ತಮುತ್ತ ಚಿತ್ರೀಕರಣ ನಡೆದಿದ್ದು, ಸದ್ಯ ಚಿತ್ರದ ಡಬ್ಬಿಂಗ್ ಹಂತದಲ್ಲಿದ್ದು, ರಿಲೀಸ್ ಗೆ ಡೇಟ್ ಅನೌನ್ಸ್ ಆಗಬೇಕಿದೆ.

(Singer Ananya bhat acting in senapura kannda movie)

RELATED ARTICLES

Most Popular