ನಾಟಿ ತುಪ್ಪ ಖರೀದಿಗೆ ಮುನ್ನ ಹುಷಾರ್‌ : ತುಪ್ಪ ಕೊಂಡ್ರೆ ಮನೆಯೇ ದರೋಡೆ !

ಬೆಂಗಳೂರು : ನಾಟಿ ಹಸುವಿನ ತುಪ್ಪ ಮಾರಾಟ ಮಾಡೋ ನೆಪದಲ್ಲಿ, ಜನರಲ್ಲಿ ಪುಸಲಾಯಿಸಿ ಮನೆ ದರೋಡೆ ಮಾಡುತ್ತಿದ್ದ ಮಹಿಳೆಯರಿಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ನಡೆದಿದೆ.

ಗೌರಿಕಿಶೋರಿ ಹಾಗೂ ನೀರು ಆದಾ ಎಂಬವರೇ ಬಂಧಿತ ಆರೋಪಿಗಳು. ಗುಜರಾತ್‌ನ ಗೀರ್‌ ತಳಿಯಿಂದ ತಯಾರಿಸಿರುವ ದೇಶಿ ಹಸುವಿನ ನಾಟಿ ತುಪ್ಪ ತಂದಿದ್ದೀವೆ ಅಂತಾ ಮನೆಯವರನ್ನು ಪುಸಲಾಯಿಸುತ್ತಿದ್ದರು. ಮನೆಯಲ್ಲಿನ ಎಲ್ಲಾ ವಿಚಾರಗಳನ್ನು ತಿಳಿದುಕೊಂಡು ಎರಡು ದಿನಗಳ ನಂತರ ಮನೆಗೆ ಬಂದು ದರೋಡೆ ಮಾಡುತ್ತಿದ್ದರು.

ಇದೀಗ ತುಪ್ಪ ಮಾರಾಟದ ಹೆಸರಲ್ಲಿ ದರೋಡೆ ಮಾಡುತ್ತಿದ್ದ ಮಹಿಳೆಯರನ್ನು ಮಾಗಡಿ ರೋಡ್‌ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಇದೀಗ ಮಹಿಳೆಯರನ್ನು ವಿಚಾರಣೆಗೆ ಓಳಪಡಿಸಿದಾಗ ನಕಲಿ ಚಿನ್ನ ಮಾರಾಟ ಮಾಡಿದ ಮಾಹಿತಿಯನ್ನು ನೀಡಿದ್ದಾರೆ. ಹೀಗಾಗಿ ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ.

ಇದನ್ನೂ ಓದಿ : ಮಸಾಜ್‌ ಸೆಂಟರ್‌ನಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ : ಮಾಲೀಕ ಅರೆಸ್ಟ್‌

ಇದನ್ನೂ ಓದಿ : ಬೆಂಗಳೂರು ಯುವತಿಯ ಅತ್ಯಾಚಾರ ಪ್ರಕರಣಕ್ಕೆ ಟ್ವಿಸ್ಟ್‌ : ಯುವತಿಗೆ ಪರಿಚಿತನಾಗಿದ್ದ ಡ್ರೈವರ್‌ !

( Ghee Seller two women have been arrested in connection with the robbery in Bangalore )

Comments are closed.