ರಾಯನ್ ರಾಜ್ ಸರ್ಜಾ ಸ್ಯಾಂಡಲ್ ವುಡ್ ಹಾಟ್ ಫೆವರಿಟ್ ಬೇಬಿ ಸೆಲಿಬ್ರೆಟಿ. ಹುಟ್ಟಿದಾಗಿನಿಂದಲೂ ಕ್ಯೂಟ್ ಕ್ಯೂಟ್ ಪೋಟೋಸ್ ಜೊತೆ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗ್ತಿರೋ ರಾಯನ್ ರಾಜ್ ಸರ್ಜಾ ಮತ್ತೊಂದು ವಿಡಿಯೋ ಹೊರಬಿದ್ದಿದ್ದು, ಚಿರು-ಮೇಘನಾ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

ಚಿರು ಹಾಗೂ ಮೇಘನಾ ದಂಪತಿಯ ಪುತ್ರ ರಾಯನ್ ರಾಜ್ ಸರ್ಜಾ ಇನ್ನೇನು ಒಂದು ವರ್ಷದ ಹೊಸ್ತಿಲಿನಲ್ಲಿದ್ದಾನೆ. ಅಕ್ಟೋಬರ್ 22 ರಂದು ರಾಯನ್ ಗೆ ಒಂದು ವರ್ಷವಾಗಲಿದೆ. ಅದಾಗಲೇ ಪುಟ್ಟ ಪುಟ್ಟ ಹೆಜ್ಜೆ, ತೊದಲು ಮಾತಿನಿಂದ ಎಲ್ಲರನ್ನು ಸೆಳೆಯುತ್ತಿರುವ ರಾಯನ್ ಕ್ಯೂಟ್ ವಿಡಿಯೋ ಶೇರ್ ಮಾಡಿದ್ದಾರೆ ಮೇಘನಾ.

ರಾಯನ್ ರಾಜ್ ಸರ್ಜಾ ತನ್ನ ನೆಚ್ಚಿನ ಆಟಿಕೆಯೊಂದಿಗೆ ಆಡುತ್ತಿರುವ ವಿಡಿಯೋವನ್ನು ಮೇಘನಾ ರಾಜ್ ಶೇರ್ ಮಾಡಿದ್ದು, ನನ್ನ ಮಗ ತನ್ನ ಫೆವರಿಟ್ ಗೊಂಬೆಯೊಂದಿಗೆ ಎಂಬರ್ಥದಲ್ಲಿ ಮೇಘನಾ ವಿಡಿಯೋಗೆ ಟೈಟಲ್ ನೀಡಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ಮೇಘನಾ ಪುತ್ರನ ನಾಮಕರಣ ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ನಡೆದಿದ್ದು, ಯುವರಾಜ್ ಎಂಬ ಅರ್ಥ ನೀಡುವ ರಾಯನ್ ಎಂಬ ಹೆಸರನ್ನು ಮೇಘನಾ ಹಾಗೂ ಕುಟುಂಬ ಚಿರು ಮಗನಿಗಾಗಿ ಸೆಲೆಕ್ಟ್ ಮಾಡಿತ್ತು.
https://www.instagram.com/p/CUKRiEYpdUk/
ಪ್ರೀತಿಸಿ ಮದುವೆಯಾಗಿದ್ದ ಚಿರು ಹಾಗೂ ಮೇಘನಾ ಹೊಸ ಅತಿಥಿ ಆಗಮನದ ನೀರಿಕ್ಷೆಯಲ್ಲಿದ್ದಾಗಲೇ ಚಿರು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದರು. ಪತಿ ನಿಧನದ 5 ತಿಂಗಳ ಬಳಿಕ ಮೇಘನಾ ಗಂಡುಮಗುವಿಗೆ ಜನ್ಮ ನೀಡಿದ್ದರು.
ಇದನ್ನೂ ಓದಿ : ಆ ದಿನಕ್ಕೆ ಒಂದು ವರ್ಷ….! ಚಿರು ಜೊತೆಗಿನ ಕೊನೆಯ ದಿನ ನಡೆದಿದ್ದೇನು…!! ಮೇಘನಾ ದಾಖಲಿಸಿದ ನೆನಪು…!!
ಇದನ್ನೂ ಓದಿ : ಚಿರು ನನ್ನ ಬೆಸ್ಟ್ ಫ್ರೆಂಡ್: ಮೇಘನಾ ರಾಜ್
(Actress Meghanaraj sarja shared raayan sarja video)