Malaika Arora :ಚೆನ್ನಾಗಿ ಮುತ್ತು ಕೊಡೋ ಗಂಡಸರು ಇಷ್ಟ: ಬಾಲಿವುಡ್ ಹಾಟ್ ಬಾಂಬ್ ಮಲೈಕಾ ಬಿಚ್ಚುಮಾತು

47 ವರ್ಷವಾದ್ರೂ ಹದಿನೆಂಟರ ಹುಡುಗಿಯನ್ನೂ ನಾಚಿಸುವಂತೆ ಮೈಬಳುಕಿಸೋ ಐಟಂ ಡ್ಯಾನ್ಸರ್ ಹಾಗೂ ನಟಿ ಮಲೈಕಾ ಅರೋರಾ ಬಾಲಿವುಡ್ ನ ಹಾಟ್ ಬಾಂಬ್ . ಸದಾ ಬೋಲ್ಡ್ ಪೋಟೋಸ್ ಗಳಿಂದಲೇ ಸೋಷಿಯಲ್ ಮೀಡಿಯಾಗೆ ಕಿಚ್ಚು ಹಚ್ಚುವ ಮಲೈಕಾ ಈ ಭಾರಿ ಮಾತಿನಿಂದಲೇ ಹಂಗಾಮಾ ಸೃಷ್ಟಿಸಿದ್ದು, ಮುತ್ತು ಕೊಡೋ ಗಂಡಸರು ಇಷ್ಟ ಎಂದಿದ್ದಾರೆ.

ಶಾರೂಕ್ ಖಾನ್ ನಟನೆಯ ದಿಲ್ ಸೇ ಸಿನಿಮಾದ ಐಟಂ ಸಾಂಗ್ ಮೂಲಕ ಬಾಲಿವುಡ್ ಗೆ ಪ್ರವೇಶ ಪಡೆದ ಮಲೈಕಾ ಅರೋರಾ ಸಲ್ಮಾನ್ ಖಾನ್ ಅತ್ತಿಗೆ. ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ರನ್ನು ವಿವಾಹವಾಗಿದ್ದ ಮಲೈಕಾಗೆ 9 ವರ್ಷದ ಮಗನಿದ್ದಾನೆ.

ಅರ್ಬಾಜ್ ಖಾನ್ ರಿಂದ ವಿಚ್ಛೇಧನ ಪಡೆದು ಯುವ ನಟ ಅರ್ಜುನ್ ಕಪೂರ್ ಜೊತೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿರೋ ಮಲೈಕಾ ಇದೇ ಕಾರಣಕ್ಕೆ ಬಾಲಿವುಡ್ ಹುಬ್ಬೇರಿಸುವಂತೆ ಮಾಡಿದ್ದರು. 36 ವರ್ಷದ ಅರ್ಜುನ್ ಕಪೂರ್ 47 ವರ್ಷದ ಮಲೈಕಾ ಜೊತೆ ಡೇಟ್ ಮಾಡ್ತಿರೋದೆ ಟೀಕೆಗೆ ಕಾರಣವಾಗಿತ್ತು.

ಸೂಪರ್ ಮಾಡೆಲ್ ರಿಯಾಲಿಟಿ ಶೋ ಜಡ್ಜ್ ಆಗಿರೋ ಮಲೈಕಾ ಶೋನಲ್ಲಿ ಮಿಲಿಂದ್ ಸೋಮನ್ ಜೊತೆ ಮಾತನಾಡುತ್ತಾ, ನಿಮಗೆ ಯಾವ ರೀತಿ ಪುರುಷರು ಇಷ್ಟವಾಗುತ್ತಾರೆ ಎಂಬ ಪ್ರಶ್ನೆಗೆ ನನಗೆ ಚೆನ್ನಾಗಿ ಮುತ್ತುಕೊಡುವ ಬಲಿಷ್ಠ ಪುರುಷರು ಇಷ್ಟವಾಗುತ್ತಾರೆ. ಆದರೆ ಗಾಸಿಪ್ ಮಾಡೋ ಪುರುಷರು ಇಷ್ಟವಾಗೋದಿಲ್ಲ ಎಂದಿದ್ದಾರೆ.

ಯಾರು ನಿಮ್ಮನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂಬ ಪ್ರಶ್ನೆಗೆ ಅರ್ಜುನ್ ಕಪೂರ್ ಹೆಸರು ಹೇಳಿರುವ ಮಲೈಕಾ, ಆತ ನನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾನೆ. ಆತನಿಗೆ ನನ್ನ ಒಳ-ಹೊರಗು ಚೆನ್ನಾಗಿ ಗೊತ್ತಿದೆ. ನನ್ನ ಮನಸ್ಸನ್ನು ಅರಿತುಕೊಂಡಿದ್ದಾನೆ. ಹಾಗೇ ನನ್ನೊಂದಿಗೆ ಹುಡುಗಾಟವನ್ನು ಆಡುತ್ತಾನೆ ಎಂದಿದ್ದಾರೆ.

ನೀವು ಅರ್ಜುನ್ ಕಪೂರ್ ಗೆ ಕಳಿಸಿದ ಕೊನೆಯ ಸಂದೇಶವೇನು ಎಂಬ ಪ್ರಶ್ನೆಗೆ ಮಲೈಕಾ ಆಯ್ ಲವ್ ಯೂ ಟೂ ಎಂದು ಕಳಿಸಿದ್ದೇನೆ ಎಂದಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಮಲೈಕಾ ತಮ್ಮ ಯೋಗಾ ಕ್ಲಾಸ್ ಗೆ ತೆರಳುವ ವೇಳೆ ವೀಯರ್ಡ್ ಆಗಿ ಹೆಜ್ಜೆ ಹಾಕಿ ಸುದ್ದಿಯಾಗಿದ್ದರು.  

ಇದನ್ನೂ ಓದಿ : ಸೀರೆ ಧರಿಸಿದವರಿಗೆ ಪ್ರವೇಶವಿಲ್ಲ: ರೆಸ್ಟೋರೆಂಟ್ ವಿರುದ್ಧ ಸಮರ ಸಾರಿದ ಬಾಲಿವುಡ್ ನಟಿ

ಇದನ್ನೂ ಓದಿ : ಹಾಟ್ ಆಂಡ್ ಬೋಲ್ಡ್ ಪೋಟೋಶೂಟ್ ನಲ್ಲಿ ಮಿಂಚಿದ ನಟಿ ಪ್ರಿಯಾಂಕಾ ತಿಮ್ಮೇಶ್

(Bollywood actress Malaika Arora sain i like good kissing mans)

Comments are closed.