Ranjani Raghavan: ಕತೆಡಬ್ಬಿ ಜೊತೆ ಬರ್ತಿದ್ದಾರೆ ಕನ್ನಡತಿ: ಸಾಹಿತ್ಯ ಲೋಕಕ್ಕೆ ಪುಟ್ಟಗೌರಿ ಎಂಟ್ರಿ

ಪ್ರಸ್ತುತ ಕನ್ನಡತಿ ಧಾರಾವಾಹಿ ಮೂಲಕ ಪ್ರೇಕ್ಷಕರ ಮನಗೆದ್ದಿರುವ ನಟಿ ರಂಜನಿ ರಾಘವನ್ ಈಗ ಕತೆಡಬ್ಬಿ ಮೂಲಕ ಅಧಿಕೃತವಾಗಿ ಕನ್ನಡ ಸಾಹಿತ್ಯ ಲೋಕ ಕ್ಕೂ ಎಂಟ್ರಿಕೊಡುತ್ತಿದ್ದಾರೆ.

ನಟಿಯರು ಬರಹದಲ್ಲಿ ಆಸಕ್ತಿ ತೋರುವುದು ಅಪರೂಪ. ಆದರೆ ನಟಿ ರಂಜನಿ ರಾಘವನ್ ಮಾತ್ರ ನಟನೆಯ ಜೊತೆ ಓದು ಬರಹ ದಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡತಿ ಸೀರಿಯಲ್ ನಡುವೆಯೂ ರಂಜನಿ ಕತೆಗಳನ್ನು ಬರೆದಿದ್ದರು.ಕನ್ನಡದ ಆನ್ಲೈನ್ ಸಾಹಿತ್ಯಲೋಕವಾಗಿ ಬೆಳೆಯುತ್ತಿರುವ ಅವಧಿಯಲ್ಲಿ ಪ್ರತಿ ಶುಕ್ರವಾರ ರಂಜನಿ ಅವರ ಕತೆಗಳು ಓದುಗರಿಗೆ ಲಭ್ಯವಾಗುತ್ತಿದ್ದವು.

೧೫ ವಾರಗಳ ಕಾಲ ಕತೆ ಪ್ರಕಟಿಸಿದ ರಂಜನಿ ರಾಘವನ್ ಈಗ ಅದೇ ಕತೆಗಳನ್ನು ಜೋಡಿಸಿ ಕಥಾಸಂಕಲನವಾಗಿ ಓದುಗರಿಗೆ ನೀಡುತ್ತಿದ್ದಾರೆ. ಬಹುರೂಪಿ ಪ್ರಕಾಶನ ಅವರ ಕತಾಸಂಕಲನ ಹೊರತರುತ್ತಿದೆ.
ಸೆ. ೨೯ ರಂದು ಕಥಾಸಂಕಲನ ಬಿಡುಗಡೆಯಾಗಲಿದೆ.

ಕಥಾಸಂಕಲನಕ್ಕೆ ಹೆಸರು ಸೂಚಿಸುವಂತೆ ರಂಜನಿ ಓದುಗರು ಹಾಗೂ ಅಭಿಮಾನಿಗಳಿಗೆ ಮನವಿ ಮಾಡಿದ್ದರು. ಕೊನೆಗೆ ತಮ್ಮ ಚೊಚ್ಚಲ ಕಥಾಸಂಕಲನಕ್ಕೆ ಕತೆಡಬ್ಬಿ ಎಂಬ ಹೆಸರು ಆಯ್ಕೆ ಮಾಡಿಕೊಂಡಿದ್ದಾರೆ.

ಸದಾ ಕಾಲ ಕ್ರಿಯಾತ್ಮಕ ಕೆಲಸಗಳಿಂದಲೇ ಗುರುತಿಸಿಕೊಳ್ಳುವ ರಂಜನಿ ಇತ್ತೀಚಿಗಷ್ಟೇ ಮೈಸೂರು ಮಹಾರಾಣಿ ಗೆಟಪ್ ನಲ್ಲಿ ಪೋಟೋ ಶೂಟ್ ಮಾಡಿಸಿ ಅಭಿಮಾನಿಗಳ ಮನಗೆದ್ದಿದ್ದರು.

(actress ranjani raghavan book katedabbi ready to publish)

Comments are closed.