ಮಸಾಜ್‌ ಸೆಂಟರ್‌ನಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ : ಮಾಲೀಕ ಅರೆಸ್ಟ್‌

ಕಡಬ : ಮಸಾಜ್‌ ಸೆಂಟರ್‌ಗೆ ಬರುತ್ತಿದ್ದ ಗ್ರಾಹಕರು ಹಾಗೂ ಕೆಲಸ ಮಾಡುವ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಮಸಾಜ್‌ ಸೆಂಟರ್‌ ಮಾಲೀಕ ನನ್ನು ಪೊಲೀಸರು ಅರೆಸ್ಟ್‌ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದಿದೆ.

ಕಡಬ ಪಟ್ಟಣದಲ್ಲಿರುವ ಕಳಾರದಲ್ಲಿರುವ ಸ್ನೇಹ ಅನ್ನೋ ಮಸಾಜ್‌ ಸೆಂಟರ್‌ ವಿರುದ್ದ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದ್ದು, ಮಾಲೀಕ ಅಬ್ರಾಹಂ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್‌ ಠಾಣೆಯಲ್ಲಿಯೇ ಹಲವು ಮಹಿಳೆಯರು ಮಸಾಜ್‌ ಸೆಂಟರ್‌ ಮಾಲೀಕನ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.

ಸಾಕಷ್ಟು ಮಹಿಳೆಯರು ಮಸಾಜ್‌ ಸೆಂಟರ್‌ಗೆ ಮಸಾಜ್‌ ಮಾಡಿಸಿಕೊಳ್ಳಲು ಬರುತ್ತಿದ್ದರು. ಈ ವೇಳೆಯಲ್ಲಿ ಮಸಾಜ್‌ ಸೆಂಟರ್‌ ನಲ್ಲಿ ಇರುತ್ತಿದ್ದ ಮಾಲೀಕ ಕಿರುಕುಳ ನೀಡಿದ್ದಾರೆ. ಅಲ್ಲದೇ ಮಸಾಜ್‌ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆಯೂ ಕೆಟ್ಟ ದೃಷ್ಟಿ ಬೀರಿದ್ದಾನೆ ಅನ್ನೋ ಆರೋಪವೂ ಇದೆ. ಈ ಕುರಿತು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ವಿಶಾಲ ಗಾಣಿಗ ಕೊಲೆ ಪ್ರಕರಣ : ಪೊಲೀಸರಿಗೆ 50 ಸಾವಿರ ಬಹುಮಾನ, ಅಭಿನಂದನೆ

ಇದನ್ನೂ ಓದಿ : ತರಗುಪೇಟೆ ಸ್ಪೋಟದ ಕಾರಣ ಇನ್ನೂ ನಿಗೂಢ : ಸ್ಪೋಟ ಹುಟ್ಟು ಹಾಕಿದೆ ಹಲವು ಅನುಮಾನ !

( Sexual harassment of women at massage center: owner Arrest in Kadaba Dakshina Kannada District )

Comments are closed.