ಭಾನುವಾರ, ಏಪ್ರಿಲ್ 27, 2025
HomeCinemaRashmika Mandanna: ಕನ್ನಡದಲ್ಲಿ ನಟಿಸೋಕೆ ಟೈಂ ಇಲ್ಲ: ಪರಭಾಷೆಯಲ್ಲಿ ಅವಕಾಶ ಸಿಗ್ತಿದ್ದಂತೆ ಬಣ್ಣ ಬದಲಾಯಿಸಿದ ರಶ್ಮಿಕಾ

Rashmika Mandanna: ಕನ್ನಡದಲ್ಲಿ ನಟಿಸೋಕೆ ಟೈಂ ಇಲ್ಲ: ಪರಭಾಷೆಯಲ್ಲಿ ಅವಕಾಶ ಸಿಗ್ತಿದ್ದಂತೆ ಬಣ್ಣ ಬದಲಾಯಿಸಿದ ರಶ್ಮಿಕಾ

- Advertisement -

ಸ್ಯಾಂಡಲ್ ವುಡ್ ನಟಿಯರು ಪರಭಾಷೆಯಲ್ಲಿ ನೆಲೆ ಕಂಡುಕೊಂಡಿರೋದು ಇದೇ ಮೊದಲಲ್ಲ. ಆದರೆ ಹೀಗೆ ಪರಭಾಷೆ ಹೋದ ಮೇಲೂ ಕನ್ನಡವನ್ನು ಮರೆತವರು ಕಡಿಮೆ. ಆದರೆ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಮಾತ್ರ ಟಾಲಿವುಡ್,ಬಾಲಿವುಡ್ ನೀರು ಕುಡಿಯುತ್ತಿದ್ದಂತೆ ಸ್ಯಾಂಡಲ್ ವುಡ್ ತೊರೆಯೋ ಮಾತಾಡಿದ್ದು, ಕನ್ನಡದಲ್ಲಿ ನಟಿಸೋಕೆ ಟೈಂ ಇಲ್ಲ ಎಂದಿದ್ದಾರೆ.

ಕನ್ನಡದ ಕಿರಿಕ್ ಪಾರ್ಟಿ ಮೂಲಕ ಕೆರಿಯರ್ ಆರಂಭಿಸಿದ ರಶ್ಮಿಕಾಗೆ ಮೊದಲ ಸಿನಿಮಾವೇ ಹೆಸರು ತಂದುಕೊಟ್ಟಿತ್ತು. ಬಳಿಕ ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾದ ರಶ್ಮಿಕಾ ಈಗ ಟಾಲಿವುಡ್ ಹಾಗೂ ಬಾಲಿವುಡ್ ಅಂಗಳದಲ್ಲಿ ಬ್ಯುಸಿಯಾಗಿದ್ದಾರೆ.

ಬಾಲಿವುಡ್ ನಲ್ಲಿ ಮೊದಲ ಸಿನಿಮಾದಲ್ಲೇ ಬಿಗ್ ಬೀ ಜೊತೆ ನಟಿಸೋ ಅವಕಾಶ ಪಡೆದುಕೊಂಡ ರಶ್ಮಿಕಾ ಟಾಲಿವುಡ್ ನ ಪುಷ್ಪ ಸೇರಿದಂತೆ ಹಲವು ಸಿನಿಮಾದಲ್ಲಿ ನಟಿಸಿದ್ದಾರೆ. ಆದರೆ ಸ್ಯಾಂಡಲ್ ವುಡ್ ನಿಂದ ಬಹುತೇಕ ಅಂತರ ಕಾಯ್ದುಕೊಂಡ ರಶ್ಮಿಕಾ ಪೊಗರು ಬಳಿಕ ಇನ್ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ.

 ಈಬಗ್ಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ರಶ್ಮಿಕಾ ಕನ್ನಡದಲ್ಲಿ ನಟಿಸುವುದು ಯಾವಾಗ ಎಂಬ ಪ್ರಶ್ನೆಗೆ ಸಮಯವಿಲ್ಲ ಎಂಬರ್ಥದಲ್ಲಿ ಉತ್ತರ ನೀಡಿದ್ದಾರೆ. ಈಗ ತೆಲುಗು ಮತ್ತು ಹಿಂದಿ ನಡುವೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದೇನೆ.

 ತಮಿಳು ಚಿತ್ರದಲ್ಲಿಯೂ ನಟಿಸಿದ್ದೇನೆ. ಇದೆಲ್ಲದರ  ಮಧ್ಯೆ ಕನ್ನಡದಲ್ಲಿ ನಟಿಸಲು ಎಕ್ಸ್ಟ್ರಾ ಎನರ್ಜಿ ಬೇಕಾಗುತ್ತದೆ. ಕನ್ನಡದಲ್ಲೂ ನಟಿಸುವುದಾದರೇ ನನಗೆ 365 ದಿನಗಳು ಸಾಕಾಗುವುದಿಲ್ಲ ಎಂದಿದ್ದಾರೆ. ನಾನು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಇದು ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಇದನ್ನು ಬಿಟ್ಟು ದಕ್ಷಿಣದ ಐದು ಭಾಷೆ ಹಾಗೂ ಹಿಂದಿಯಲ್ಲಿ ನಟಿಸೋದಾದರೇ ನನಗೆ 565 ದಿನಗಳು ಸಾಕಾಗುವುದಿಲ್ಲ ಎಂದಿದ್ದಾರೆ.

ಆ ಮೂಲಕ ಸದ್ಯ ಕನ್ನಡದಲ್ಲಿ ನಟಿಸೋದಿಲ್ಲ ಎಂಬ ಮಾತನ್ನು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ರಶ್ಮಿಕಾ ಕನ್ನಡವನ್ನು ಕಡೆಗಣಿಸುತ್ತಿದ್ದಾರೆ ಎಂಬ ಆರೋಪ ಹಲವಾರು ಬಾರಿ ಕೇಳಿಬಂದಿದ್ದು, ಕನ್ನಡದಲ್ಲಿ ನಟಿಸಿದ ಕೊನೆಯ ಚಿತ್ರ ಪೊಗರು ಪ್ರಮೋಶನ್ ಗೂ ಬಾರದೇ ರಶ್ಮಿಕಾ ನಿರ್ದೇಶಕ-ನಿರ್ಮಾಪಕರನ್ನು ಸತಾಯಿಸಿದ್ದು ಸುದ್ದಿಯಾಗಿತ್ತು.

ಈ ಮುಕ್ತವಾಗಿಯೇ ಕನ್ನಡಕ್ಕೆ ಬರೋದಿಲ್ಲ ಎಂದಿರುವ ರಶ್ಮಿಕಾ, ಪ್ರಸಿದ್ಧಿಗೆ ಬಂದು ಸಾಧನೆಯ ಮೆಟ್ಟಿಲೇರಿದ ಮೇಲೆ ನಡೆದು ಬಂದ ಹಾದಿಯನ್ನು ಮರೆಯೋ ನಟಿಯರ ಸಾಲಿಗೆ ರಶ್ಮಿಕಾ ಕೂಡ ಸೇರಿದಂತಾಗಿದೆ.

(Actress rashmika mandanna said no to kannada movies)

RELATED ARTICLES

Most Popular