Sana Ramchand : ಪಾಕ್ ನಲ್ಲಿ ಹುಬ್ಬೇರಿಸುವಂತ ಸಾಧನೆ ಮಾಡಿದ ಹಿಂದೂ‌ ಮಹಿಳೆ : ಹಟ ಬಿಡದೇ ಸರ್ಕಾರಿ ಹುದ್ದೆ ಪಡೆದ ಸನಾ

ನವದೆಹಲಿ : ಪಾಕಿಸ್ತಾನದಲ್ಲಿ ಮಹಿಳೆಯರನ್ನು ಸರಕಾರಿ ಸೇವೆಯಿಂದ ದೂರ ಇಡ್ತಾರೆ. ಅದ್ರಲ್ಲೂ ಹಿಂದೂ ಧರ್ಮೀಯರನ್ನು ಹೀನಾಯವಾಗಿ ನೋಡಲಾಗ್ತಿದೆ ಅನ್ನೋ ಆರೋಪವೂ ಇದೆ. ಇಂತ ಪಾಕಿಸ್ತಾನದಲ್ಲಿ ಹಿಂದೂ ಮಹಿಳೆ ಮಹಿಳೆಯೋರ್ವರು ಸಿಎಸ್‌ಎಸ್‌ (ಪಾಕಿಸ್ತಾನದ ನಾಗರೀಕ ಸೇವಾ ಪರೀಕ್ಷೆ) ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಹೊಸ ಇತಿಹಾಸವನ್ನು ನಿರ್ಮಿಸಿದ್ದಾರೆ.

ಭಾರತದಲ್ಲಿ ನಾಗರಿಕ ಸೇವಾ ಪರೀಕ್ಷೆಗಳಂತೆಯೇ ಪಾಕಿಸ್ತಾನದಲ್ಲಿ ಸೆಂಟ್ರಲ್​ ಸುಪೀರಿಯರ್​​ ಸರ್ವೀಸ್​ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಪಾಕಿಸ್ತಾನದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಸೆಂಟ್ರಲ್​ ಸುಪೀರಿಯರ್​​ ಸರ್ವೀಸ್​ (Central Superior Services) ಪರೀಕ್ಷೆಯನ್ನು ಸನಾ ರಾಮಚಂದ್ ಮೊದಲ ಪ್ರಯತ್ನದಲ್ಲಿಯೇ ಪಾಸ್‌ ಮಾಡಿದ್ದಾರೆ.

ಇದನ್ನೂ ಓದಿ: PAKISTAN NEW CURRENCY : ಅಫ್ಘಾನಿಸ್ತಾನದ ಜೊತೆಗಿನ ವ್ಯವಹಾರಕ್ಕೆ ಹೊಸ ಕರೆನ್ಸಿ ಘೋಷಿಸಿದ ಪಾಕಿಸ್ತಾನ

ಈ ಮೂಲಕ ಪಾಕಿಸ್ತಾನದ ಆಡಳಿತಾತ್ಮಕ ಸೇವೆಗಳಲ್ಲಿ ಸನಾ ಸೇರ್ಪಡೆಗೊಂಡಿದ್ದಾರೆ. ಅಲ್ಲದೇ ಸಹಾಯಕ ಆಯುಕ್ತರಾಗಿಯೂ ನೇಮಕಗೊಂಡಿದ್ದಾರೆ. ಹೀಗಾಗಿ ಪಾಕಿಸ್ತಾನದಲ್ಲಿ ಸರಕಾರಿ ಅಧಿಕಾರಿಯಾದ ಮೊದಲ ಮಹಿಳೆ ಅನ್ನೋ ಹೆಗ್ಗಳಿಕೆಯೂ ಪಾತ್ರರಾಗಿದ್ದಾರೆ. ಸನಾ 2016 ರಲ್ಲಿ ಶಹೀದ್ ಮೊಹತರ್ಮ ಬೆನಜೀರ್ ಭುಟ್ಟೋ ವೈದ್ಯಕೀಯ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್​ ಪದವಿ ಪಡೆದುಕೊಂಡಿದ್ದರು.

ವೈದ್ಯರಾದ ಬಳಿಕ ಕೆಲವು ತಿಂಗಳ ಕಾಲ ಶಿಕಾರ್‌ಪುರಕ್ಕೆ ಸೇರಿದ ಚಿಕ್ಕಪಟ್ಟಣ ಲಖಿಯಾದ ತಾಲೂಕು ಆಸ್ಪತ್ರೆಯಲ್ಲಿ ಮಹಿಳಾ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಸಿದ್ದರು. ಆದರೆ ಆಸ್ಪತ್ರೆಯಲ್ಲಿನ ಕಳಪೆ ವೈದ್ಯಕೀಯ ಸ್ಥಿತಿಯನ್ನು ನೋಡಿ ಆಘಾತಕ್ಕೆ ಒಳಗಾಗಿದ್ದರು. ಔಷಧಿ, ವೈದ್ಯರ ಕೊರತೆ ಎದುರಾಗಿತ್ತು. ಮಾತ್ರವಲ್ಲ ಮೂಲಭೂತ ಸೌಕರ್ಯಗಳು ಅಲ್ಲಿ ಇರಲಿಲ್ಲ. ಹೀಗಾಗಿಯೇ ನಾನು ಜೀವನದ ಗುರಿಯನ್ನೇ ಬದಲಾಯಿಸಿಕೊಂಡೆ ಎಂದು ಸನಾ ಹೇಳಿದ್ದಾರೆ.

ಇದನ್ನೂ ಓದಿ: ಅಪ್ಘಾನಿಸ್ತಾನ ಮಹಿಳೆಯರ ದಿಟ್ಟ ಹೆಜ್ಜೆ: ವಸ್ತ್ರಸಂಹಿತೆ ವಿರುದ್ಧ ಆನ್ ಲೈನ್ ಅಭಿಯಾನ

ಸಮಾಜದಲ್ಲಿ ಏನಾದ್ರೂ ಬದಲಾವಣೆಯ ತರಬೇಕು. ಜನರಿಗೆ ಉತ್ತಮ ಮೂಲಸೌಕರ್ಯವನ್ನು ಒದಗಿಸಬೇಕು ಅನ್ನೋ ಕಾರಣಕ್ಕೆ ಸಿಎಸ್‌ಎಸ್‌ ಪರೀಕ್ಷೆಗೆ ಕಠಿಣ ತರಬೇತಿಯನ್ನು ಪಡೆದು ಉತ್ತೀರ್ಣಗೊಂಡಿದ್ದೇನೆ ಎಂದು ಸನಾ ಹೇಳಿಕೊಂಡಿದ್ದಾರೆ. ಈ ಕುರಿತು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

(Sanaa, a Hindu woman who has achieved a job in Pakistan: Govt.)

Comments are closed.