Sanjjanaa Galrani : ಸ್ಯಾಂಡಲ್‌ವುಡ್‌ ನಟಿಗೆ ಆಪ್ತನಿಂದಲೇ ದೋಖಾ : ರಾಹುಲ್‌ ವಿರುದ್ದ ದೂರು ಕೊಟ್ಟ ಸಂಜನಾ

ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಸಂಜನಾ ಗಲ್ರಾನಿ ವಂಚನೆಗೆ ಒಳಗಾಗಿದ್ದಾರೆ. ಆತ್ಯಾಪ್ತ ರಾಹುಲ್‌ ತೋನ್ಸೆ ವಿರುದ್ದ ಪ್ರಕರಣ ದಾಖಲಿಸಿದ್ದು, ನ್ಯಾಯಕ್ಕಾಗಿ ಸಂಜನಾ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದಾರೆ.

ಗಂಡ ಹೆಂಡತಿ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ ಗೆ ಎಂಟ್ರಿ ಕೊಟ್ಟಿದ್ದ ಡ್ರಗ್ಸ್‌ ಆರೋಪ ಕೇಳಿಬಂದಿತ್ತು. ಅಲ್ಲದೇ ಜೈಲು ಸೇರಿದ್ದರು. ಇದೀಗ ಸಂಜನಾ ತನ್ನ ಅತ್ಯಾಪ್ತನ ವಿರುದ್ದ ದೂರು ದಾಖಲು ಮಾಡಿದ್ದಾರೆ. ಸಂಜನಾ ಗಲ್ರಾನಿ ಆಪ್ತ ಸ್ನೇಹಿತನಾಗಿದ್ದ ರಾಹುಲ್‌ ತೋನ್ಸೆ ಎಂಬಾತ ತಾನು ಗೋವಾ ಹಾಗೂ ಕೊಲಂಬೋದಲ್ಲಿ ಕ್ಯಾಸಿನೋ ಮ್ಯಾನೇಜಿಂಗ್‌ ಡೈರೆಕ್ಟರ್‌ ಆಗಿದ್ದು, ಕ್ಯಾಸಿನೋಗಳಲ್ಲಿ ಹಣ ವಿನಿಯೋಗಿಸಿದರೆ ಹೆಚ್ಚಿನ ಲಾಭಗಳಿಸಬಹುದು ಎಂದು ಆಮಿಷವೊಡ್ಡಿದ್ದಾನೆ. ಕಳೆದ ಮೂರು ವರ್ಷಗಳಿಂದಲೂ ತೋನ್ಸೆ ಸೇರಿದಂತೆ ಮೂವರ ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾಯಿಸಿದ್ದಾರೆ.

ಆದರೆ ತಾವು ಕೊಟ್ಟ ಹಣವನ್ನು ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿ ಲಾಭಗಳಿಸುವ ಹುನ್ನಾರ ಮಾಡಿದ್ದಾರೆ. ಅಲ್ಲದೇ ತನ್ನ ಘನತೆಗೆ ಧಕ್ಕೆ ತರುವಂತೆ ಸುಳ್ಳು ಆರೋಪ ಮಾಡಿದ್ದಾರೆ ಎಂದು ಸಂಜನಾ ಗಲ್ರಾನಿ ನ್ಯಾಯಾಲಯದಲ್ಲಿ ಪಿಸಿಆರ್‌ ದಾಖಲು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ್ದ೪ನೇ ಎಸಿಎಂಎಂ ನ್ಯಾಯಾಲಯದಿಂದ ತನಿಖೆಗೆ ಆದೇಶ‌ ನೀಡಿದೆ.

ಈ ಹಿನ್ನೆಲೆಯಲ್ಲೀಗ ಇಂದಿರಾ ನಗರ ಠಾಣೆಯ ಪೊಲೀಸರು ರಾಹುಲ್‌ ತೋನ್ಸೆ ಸೇರಿದಂತೆ ಮೂವರ ವಿರುದ್ದಐಪಿಸಿ 120ಬಿ, 107, 354, 406, 420, 506, ಕಲಂ 34ರ ಅಡಿಯಲ್ಲಿ ಎಫ್ಐಆರ್ ದಾಖಲು ಮಾಡಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : ಸಂಜನಾ ಮೈಮೇಲೆ ಸಿಕ್ರೆಟ್ ಟ್ಯಾಟೂ….! ಮುಚ್ಚಿಟ್ಟ ಗುಟ್ಟು ಬಿಚ್ಚಿಟ್ಟ ಗಂಡ-ಹೆಂಡತಿ ಬೆಡಗಿ…!!

ಇದನ್ನೂ ಓದಿ : ಆಧ್ಯಾತ್ಮಕ್ಕೆ ಹೊರಳಿದ ಗಂಡ-ಹೆಂಡತಿ ಬೆಡಗಿ…! ನಮಾಜ್ ಮಾಡಲು ಕಲಿತಿದ್ದಾರಂತೆ ಸಂಜನಾ…!!

Sandalwood Actress Sanjana Galrani lodges complaint against Rahul

Comments are closed.