ಬೆಂಗಳೂರು : ನಟಿ ಸೌಜನ್ಯ (ಸವಿ ಮಾದಪ್ಪ) ಆತ್ಮಹತ್ಯೆ ಪ್ರಕರಣದಲ್ಲಿ ಹಲವು ಅನುಮಾನಗಳು ವ್ಯಕ್ತವಾಗುತ್ತಿದೆ. ಪಿಎ ಮಹೇಶ್ ವಿರುದ್ದ ಸೌಜನ್ಯ ತಂದೆ ಗಂಭೀರ ಆರೋಪ ಮಾಡಿದ್ದು, ಮಹೇಶ್ ಹಾಗೂ ನಟ ವಿವೇಕ್ ನನ್ನು ಪೊಲೀಸರು ಬಂಧಿಸಿದ್ದಾರೆ. ಇಂದು ಸೌಜನ್ಯ ಅಂತ್ಯಕ್ರೀಯೆ ಹುಟ್ಟೂರಿನಲ್ಲಿ ನಡೆದಿದೆ.
ನಿನ್ನೆ ಬೆಂಗಳೂರಿನ ದೊಡ್ಡಬೆಲೆ ಅಪಾರ್ಟ್‌ಮೆಂಟ್ ನಲ್ಲಿ ವಾಸವಾಗಿದ್ದ ನಟಿ ಸೌಜನ್ಯ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಆತ್ಮಹತ್ಯೆ ಪ್ರಕರಣದ ಬೆನ್ನಲ್ಲೇ ಸೌಜನ್ಯ ತಂದೆ ಪ್ರಭು ಮಾದಪ್ಪ ಅವರು ಕುಂಬಳಗೋಡು ಠಾಣೆಗೆ ದೂರು ಕೊಟ್ಟಿದ್ದು, ದೂರಿನಲ್ಲಿ ಸೌಜನ್ಯ ಪಿಎ ಮಹೇಶ್ ಹಾಗೂ ನಟ ವಿವೇಕ್ ವಿರುದ್ದ ಗಂಭೀರ ಆರೋಪವನ್ನು ಮಾಡಿದ್ದಾರೆ.
ನೇಣಿನಿಂದ ಮೃತದೇಹ ಕೆಳಗೆ ಇಳಿಸಿದ ಪಿಎ ಮಹೇಶ್ ?
ತನ್ನ ಬಳಿಯಲ್ಲಿ ತಿಂಡಿ ತರುವುದಕ್ಕೆ ಹೇಳಿದ್ದ ನಟಿ ಸೌಜನ್ಯ, ನಾನು ತಿಂಡಿ ತರುವ ವೇಳೆಯಲ್ಲಿ ಆಕೆ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾಳೆ ಎಂದು ಸೌನಜ್ಯ ಪಿಎ ಮಹೇಶ್ ಪೊಲೀಸರಿಗೆ ಮಾಹಿತಿ ನೀಡಿದ್ದ. ಆದರೆ ಮಹೇಶ್ ವಿರುದ್ದ ಇದೀಗ ಸೌಜನ್ಯ ತಂದೆ ಗಂಭೀರವಾದ ಆರೋಪಗಳನ್ನು ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ ವೇಳೆಯಲ್ಲಿ ಶವವನ್ನು ಪೊಲೀಸರು ಬಂದ ನಂತರದಲ್ಲಿ ಕೆಳಗೆ ಇಳಿಸಲಾಗುತ್ತದೆ. ಅಲ್ಲದೇ ಈ ವೇಳೆಯಲ್ಲಿ ಪೊಲೀಸರು ವಿಡಿಯೋ ಚಿತ್ರೀಕರಣವನ್ನು ಮಾಡಿಕೊಳ್ಳುತ್ತಾರೆ. ಆದರೆ ನಟಿ ಸೌಜನ್ಯ ಮೃತ ದೇಹ ಬೆಡ್ ಮೇಲೆ ಪತ್ತೆಯಾಗಿದೆ. ಸೌಜನ್ಯ ಆತ್ಮಹತ್ಯೆ ಮಾಡಿಕೊಂಡಿದ್ದು, ಮಹೇಶ್ ಪೊಲೀಸರು ಬರುವ ಮೊದಲೇ ಆಕೆಯ ಶವವನ್ನು ಕೆಳಗೆ ಇಳಿಸಿದ್ದಾನೆ ಅನ್ನೋದು ತಿಳಿದು ಬಂದಿದೆ. ಈ ಕುರಿತು ಸೌಜನ್ಯ ತಂದೆ ಮಹೇಶ್ ವಿರುದ್ದ ಗಂಭೀರ ಆರೋಪವನ್ನು ಮಾಡಿದ್ದಾರೆ.
ಹಣ, ಚಿನ್ನಾಭರಣ ನಾಪತ್ತೆ !
ಸೌಜನ್ಯಳಿಗೆ ತಂದೆ ಪ್ರಭು ಮಾದಪ್ಪ ನೀಡಿದ ದೂರಿನಲ್ಲಿ ಹಣ ಹಾಗೂ ಚಿನ್ನಾಭರಣಗ ಕುರಿತು ಉಲ್ಲೇಖಿಸಿದ್ದಾರೆ. ನನ್ನ ಬಳಿಯಲ್ಲಿ ಆರು ಲಕ್ಷ ಹಣವಿದ್ದು, ಇದರಲ್ಲಿ ಒಂದು ಲಕ್ಷ ಹಣವನ್ನು ಆಕೆಗೆ ನೀಡಿದ್ದೇನೆ. ಅಲ್ಲದೇ ಆಕೆಯ ಬಳಿಯಲ್ಲಿ ಚಿನ್ನಾಭರಣವಿತ್ತು. ಆದರೆ ಸೌಜನ್ಯ ಆತ್ಮಹತ್ಯೆ ಮಾಡಿಕೊಂಡಿರುವ ಬೆನ್ನಲ್ಲೇ ಆಕೆಯ ಬಳಿಯಲ್ಲಿದ್ದ ಹಣ, ಚಿನ್ನಾಭರಣ ನಾಪತ್ತೆಯಾಗಿದೆ ಎಂದು ತಂದೆ ಆರೋಪಿಸಿದ್ದಾರೆ.
ಇದನ್ನೂ ಓದಿ : ನನ್ನ ಜೊತೆ ಚೆನ್ನಾಗಿದ್ದವರಿಗೆ ಮಾತ್ರ Love u ! ಕಿರುತೆರೆ ನಟಿ ಸೌಜನ್ಯ ಡೆತ್ ನೋಟ್‌ನಲ್ಲಿ ಏನಿದೆ ಗೊತ್ತಾ ?
ಕೊಲೆ ಬೆದರಿಕೆಯೊಡ್ಡಿದ್ದ ನಟ ವಿವೇಕ್
ಇನ್ನು ನಟ ವಿವೇಕ್ ಸೌಜನ್ಯಾಳನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ. ಅಲ್ಲದೇ ಸೌಜನ್ಯ ಆತ್ಮಹತ್ಯೆ ಮಾಡಿಕೊಳ್ಳುವ ಒಂದು ಗಂಟೆಯ ಮೊದಲು ಸೌಜನ್ಯ ತಾಯಿಗೆ ಕರೆ ಮಾಡಿದ್ದ ನಟ ವಿವೇಕ್ ಸೌಜನ್ಯ ತನ್ನನ್ನು ಮದುವೆ ಆಗದೇ ಇದ್ರೆ ಆಕೆಯಲ್ಲಿ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ. ಆದೆ ಈ ಘಟನೆ ನಡೆದು ಒಂದು ಗಂಟೆಯಲ್ಲಿಯೇ ನನ್ನ ದೊಡ್ಡ ಮಗಳು ಕರೆ ಮಾಡಿ ಸವಿ ಸಾವನ್ನಪ್ಪಿದ್ದಾಳೆ ಎಂದು ತಿಳಿಸಿದ್ದಾಳೆ. ಹೀಗಾಗಿ ವಿವೇಕ್ ವಿರುದ್ದ ಸೌಜನ್ಯ ತಂದೆ ಮಾದಪ್ಪ ದೂರು ನೀಡಿದ್ದಾರೆ. ತನ್ನ ಮಗಳಿಗೆ ವಿವೇಕ್ ಸಾಕಷ್ಟು ಕಿರುಕುಳವನ್ನು ನೀಡಿದ್ದಾನೆ. ಈ ವಿಚಾರ ಮಹೇಶ್‌ಗೆ ತಿಳಿದಿತ್ತು ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ಹುಟ್ಟೂರು ಅಂಗದೋವೆಯಲ್ಲಿ ಅಂತ್ಯಕ್ರೀಯೆ
ನಟಿ ಸೌಜನ್ಯ ( ಸವಿ ಮಾದಪ್ಪ) ಹುಟ್ಟೂರು ಕೊಡಗು ಜಿಲ್ಲೆಯ ಅಂಗದೋವೆ ಗ್ರಾಮ. ಇಂದು ಸೌಜನ್ಯ ಶವದ ಮರಣೋತ್ತರ ಕಾರ್ಯ ನಡೆಯಲಿದ್ದು, ನಂತರದಲ್ಲಿ ಪೊಲೀಸರು ಶವವನ್ನು ಪೋಷಕರಿಗೆ ಹಸ್ತಾಂತರ ಮಾಡಲಿದ್ದಾರೆ. ನಂತರದಲ್ಲಿ ಸೌಜನ್ಯ ಅವರ ಮೃತ ದೇಹವನ್ನು ಕೊಡಗು ಜಿಲ್ಲೆಯ ಅಂಗದೋವೆ ಗ್ರಾಮಕ್ಕೆ ತೆಗೆದುಕೊಂಡು ಹೋಗಿ ಅಂತ್ಯಕ್ರೀಯೆ ನಡೆಸಲಾಗುತ್ತದೆ ಎಂದು ಪೋಷಕರು ತಿಳಿಸಿದ್ದಾರೆ.
ಇದನ್ನೂ ಓದಿ : ಖ್ಯಾತ ಕಿರುತೆರೆ ನಟಿ ಸೌಜನ್ಯ ಆತ್ಮಹತ್ಯೆ : ಸ್ಥಳದಲ್ಲಿ ಡೆತ್‌ನೋಟ್ ಪತ್ತೆ
(Actress Sowjanya of suicide case, many doubts: actor Vivek, PA Mahesh Arrest )