ಮಂಗಳೂರು : ಶಾಲಾ ಬಾಲಕಿ ಅತ್ಯಾಚಾರ ಪ್ರಕರಣ : ಇಬ್ಬರ ಬಂಧನ

ಬೆಳ್ತಂಗಡಿ : ಅಪ್ರಾಪ್ತ ಶಾಲಾ ಬಾಲಕಿಯೋರ್ವಳ ಮೇಲೆ ಅತ್ಯಾಚಾರವೆಸಗಿ, ಗರ್ಭಿಣಿಯಾಗಿಸಿದ ಆರೋಪಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಠಾಣೆಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಕಾರ್ಕಳದ ನಿವಾಸಿ ರವೀಂದ್ರ ಮತ್ತು ಬೆಳ್ತಂಗಡಿ ನಿವಾಸಿ ಯೋಗಿಶ್ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ಶಾಲೆಯೊಂದರಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿಗಳ ತಪಾಸಣೆಯನ್ನು ನಡೆಸುತ್ತಿದ್ದರು. ಈ ವೇಳೆಯಲ್ಲಿ ವಿದ್ಯಾರ್ಥಿನಿಯೋರ್ವಳ ದೇಹ ಸ್ಥಿತಿಯಲ್ಲಿ ಬದಲಾವಣೆ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿನಿಯರನ್ನು ವಿಚಾರಣೆ ನಡೆಸಿದ್ದಾರೆ. ನಂತರ ವಿದ್ಯಾರ್ಥಿನಿಯರನ್ನು ವೈದ್ಯರು ತಪಾಸಣೆ ನಡೆಸಿದಾಗ ಗರ್ಭಿಣಿ ಅನ್ನೋದು ತಿಳಿದು ಬಂದಿದೆ. ಅಲ್ಲದೇ ವಿದ್ಯಾರ್ಥಿನಿ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ತಿಳಿಸಿದ್ದಾಳೆ.

ಇದನ್ನೂ ಓದಿ : ಡೆತ್‌ನೋಟ್‌ ಬರೆದಿಟ್ಟು ಎಂ.ಕಾಂ ವಿದ್ಯಾರ್ಥಿನಿ ಆತ್ಮಹತ್ಯೆ

10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದ ಬಾಲಕಿಯನ್ನು ಪುಸಲಾಯಿತಿ, ಜೆಸಿಬಿ ಚಾಲಕನಾಗಿದ್ದ ರವೀಂದ್ರ ಐದು ಬಾರಿ ಅತ್ಯಚಾರವೆಸಗಿದ್ದಾನೆ. ಅಲ್ಲದೇ ಇದಕ್ಕೂ ಮೊದಲು ಬಾಲಕಿ ಆಕೆಯ ಸಂಬಂಧಿ ಯೋಗೀಶ್​ ಎಂಬಾತ ಎರಡು ಬಾರಿ ಅತ್ಯಾಚಾರ ನಡೆಸಿದ್ದ ಅನ್ನೋದನ್ನು ಬಾಲಕಿ ತಿಳಿಸಿದ್ದಾಳೆ.

ಇದನ್ನೂ ಓದಿ : ಪೊಲೀಸಪ್ಪನ ಕಾಮಪುರಾಣ : ಅಪ್ರಾಪ್ತ ಯುವತಿಗೆ ಅಬಾರ್ಷನ್‌ ಮಾಡಿಸಿದ್ದ ಪೊಲೀಸ್‌ ಶಿವರಾಜ್‌ ವಿರುದ್ದ ದೂರು

ಬಾಲಕಿ ಹಾಗೂ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಇಬ್ಬರು ಆರೋಪಿಗಳನ್ನು ಬೆಳ್ತಂಡಿ ಪೊಲೀಸರು ಬಂಧಿಸಿದ್ದು. ವಿಚಾರಣೆಯನ್ನು ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಕರಾವಳಿ ಭಾಗದಲ್ಲಿ ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳು ನಡೆಯುತ್ತಿದ್ದು, ಮಕ್ಕಳ ರಕ್ಷಣಾ ವೇದಿಕೆ ಈ ಬಗ್ಗೆ ಗಮನ ಹರಿಸಬೇಕಾಗಿದೆ.

( Mangalore: Schoolgirl rape case: two arrested )

Comments are closed.