Bhajarangi- 2 : ಭಜರಂಗಿ 2 ಸಿನಿಮಾ ರಿಲೀಸ್‌ಗೆ ಡೇಟ್‌ ಫಿಕ್ಸ್‌

ಎ. ಹರ್ಷ ನಿರ್ದೇಶನದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಬಹುನಿರೀಕ್ಷಿತ ‘ಭಜರಂಗಿ 2’ ಚಿತ್ರ ವನ್ನು ಮುಂದಿನ ತಿಂಗಳು ಅಕ್ಟೋಬರ್‌ 29 ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಈಗಾಗಲೇ ಈ ಸಿನಿಮಾ ಫಸ್ಟ್ ಲುಕ್ ಹಾಗೂ ಟೀಸರ್ ಮೂಲಕ ಸಾಕಷ್ಟು ಕುತೂಹಲ ಮೂಡಿಸಿದೆ. ಇತ್ತೀಚೆಗಷ್ಟೇ ನಟಿ ಶ್ರುತಿ ಅವರ ಪೋಸ್ಟರ್ ವೊಂದನ್ನು ಬಿಡುಗಡೆ ಮಾಡಿದ್ದರು. ಅವರ ವಿಭಿನ್ನ ಗೆಟಪ್ ಹಾಗೂ ಖಡಕ್ ಲುಕ್ ನೋಡಿ ಸಿನಿಪ್ರೇಕ್ಷಕರು ಫಿದಾ ಆಗಿದ್ದಾರೆ.

ಇದನ್ನೂ ಓದಿ: Megha Shetty: ಡಾರ್ಲಿಂಗ್ ಕೃಷ್ಣನಿಗೆ ಜೋಡಿಯಾದ ಜೊತೆ ಜೊತೆಯಲಿ ಬೆಡಗಿ ಮೇಘಾ ಶೆಟ್ಟಿ

ಜಯಣ್ಣ- ಭೋಗೇಂದ್ರ ತಮ್ಮ ಜಯಣ್ಣ ಫಿಲ್ಮ್ಸ್ ಬ್ಯಾನರ್ ನಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ನೀಡಿದ್ದಾರೆ. ಸೆಪ್ಟೆಂಬರ್ 10ರಂದು ತೆರೆಕಾಣಬೇಕಾಗಿದ್ದ ಈ ಚಿತ್ರದ ಹೊಸ ಬಿಡುಗಡೆ ದಿನಾಂಕವನ್ನು ಇಂದು ಚಿತ್ರತಂಡ ಘೋಷಣೆ ಮಾಡಿದೆ.

ಇದನ್ನೂ ಓದಿ: Ananya Bhat: ಸಿನಿಮಾ ನಾಯಕಿಯಾದ ಗಾಯಕಿ: ಅನನ್ಯಾ ನಟನೆಯ ಸೇನಾಪುರ ಟೀಸರ್ ರಿಲೀಸ್

(Date fix for Bajrangi 2 cinema release)

Comments are closed.