ಸ್ಯಾಂಡಲ್‌ವುಡ್ ಖ್ಯಾತ ನಟ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹುಟ್ಟುಹಬ್ಬ. ಅಭಿಮಾಗಳು ನೆಚ್ಚಿನ ನಟನಿಗೆ ಶುಭಾಶಯ ಕೋರುತ್ತಿದ್ದಾರೆ. ಅದ್ರಲ್ಲೂ ಸ್ಯಾಂಡಲ್‌ವುಡ್ ನಟಿ ಮೇಘನಾ ರಾಜ್ ಸರ್ಜಾ ಮುದ್ದಿಯ ಮೈದುನನಿಗೆ Happy Birthday BILL ಎಂದು ವಿಶ್ ಮಾಡಿದ್ದಾರೆ.

ಚಿರಂಜೀವಿ ಸರ್ಜಾ ಮುದ್ದಿನ ತಮ್ಮ ಧ್ರುವ ಸರ್ಜಾ ಅಣ್ಣನ ಅಗಲಿಕೆಯ ಬೆನ್ನಲ್ಲೇ ಅತ್ತಿಗೆಗೆ ಬೆಂಗಾವಲಾಗಿ ನಿಂತಿದ್ದಾರೆ. ಧ್ರುವ ಪತ್ನಿ ಪ್ರೇರಣಾ ಹತ್ತು ವರ್ಷಗಳ ಹಳೆಯ ಪೋಟೋವನ್ನು ಪೋಸ್ಟ್ ಮಾಡಿ ಪತಿಗೆ ವಿಶ್ ಮಾಡಿದ್ರೆ, ಅತ್ತಿಗೆ ಚಿರಂಜೀವಿ ಸರ್ಜಾ, ಧ್ರುವ ಸರ್ಜಾ ಹಾಗೂ ಮೇಘನಾರಾಜ್ ಜೊತೆಯಾಗಿರುವ ಪೋಟೋದೊಂದಿಗೆ ಹುಟ್ಟುಹಬ್ಬದ ಶುಭಾಶಯಗಳು ಬಿಲ್ ಎಂದು ವಿಶ್ ಮಾಡಿದ್ದಾರೆ.

ಮೇಘನಾ ರಾಜ್ ಸರ್ಜಾ ಸದ್ಯ ಮಗನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವಲ್ಲೇ ಮೇಘನಾ ಹಾಗೂ ಧ್ರುವ ಸಂಬಂಧ ಹಾಳು ಮಾಡೋದಕ್ಕೆ ಹಲವರು ಪ್ರಯತ್ನಿಸಿದ್ದರು. ಆದ್ರೆ ನಾವು ಚೆನ್ನಾಗಿಯೇ ಇದ್ದೇವೆ ಅಂತಾ ರಾಯನ್ ರಾಜ್ ಸರ್ಜಾ ಹುಟ್ಟುಹಬ್ಬದ ದಿನವೇ ಸ್ಪಷ್ಟನೆಯನ್ನು ಕೊಟ್ಟಿದ್ದರು.
ಇದನ್ನೂ ಓದಿ : ಕತ್ತಲಾಗಿದ್ದ ಬಾಳಿನಲ್ಲಿ ಬಂದ ಬೆಳಕು ರಾಯನ್: ಮಗನ ನಾಮಕರಣದ ವೇಳೆ ಮೇಘನಾ ಭಾವುಕ

ಈ ಬಾರಿ ಧ್ರುವ ಸರ್ಜಾ ಬರ್ತಡೇ ಆಚರಿಸಿಕೊಳ್ಳುತ್ತಿಲ್ಲ. ಕೊರೊನಾ ವೈರಸ್ ಸೋಂಕು ಹಾಗೂ ಶೂಟಿಂಗ್ ನಲ್ಲಿ ಬ್ಯುಸಿಯಾಗಿರೋದ್ರಿಂದಾಗಿ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸೋದು ಬೇಡ. ಬದಲಾಗಿ ಎಲ್ಲರೂ ಇರುವಲ್ಲಿಂದಲೇ ನನಗೆ ವಿಶ್ ಮಾಡಿ ಅಂತಾ ಮನವಿ ಮಾಡಿಕೊಂಡಿದ್ದರು.
ಇದನ್ನೂ ಓದಿ : ಹಳೆಯ ಪೋಟೋ ಹಂಚಿಕೊಂಡು ಪತಿಗೆ ವಿಶ್ ಮಾಡಿದ ಧ್ರುವ ಸರ್ಜಾ ಪತ್ನಿ ಪ್ರೇರಣಾ
( Happy Birthday Bill, Meghna Raj Sarja wishes Dhruv Sarja a happy birthday )